Select Your Language

Notifications

webdunia
webdunia
webdunia
webdunia

ಖಿನ್ನತೆಯಿಂದ ಬಳಲುವವರನ್ನೊಮ್ಮೆ ಪ್ರೀತಿಯಿಂದ ತಬ್ಬಿಕೊಳ್ಳಿ

ಖಿನ್ನತೆ
ಒಂದು ಮೃದುವಾದ ಸ್ಪರ್ಷ, ಒಂದು ಆಲಿಂಗನ, ಒಂದು ಪ್ರೀತಿಯ ನೋಟವು ಖಿನ್ನತೆ, ಸಾಮಾಜಿಕ ಉದ್ವಿಗ್ನತೆ ಮತ್ತು ಇತರ ಹಲವು ವಿಧದ ಖಾಯಿಲೆಗಳನ್ನು ದೂರವಿಡಲು ಸಹಕರಿಸುತ್ತದೆಯಂತೆ.

ಈ ಮೇಲಿನ ಕ್ರಿಯೆಗಳ ವೇಳೆಗೆ ಮೆದುಳು ಬಿಡುಗಡೆಗೊಳಿಸುವ 'ಲವ್ ಹಾರ್ಮೋನು' ಎಂಬುದಾಗಿ ಕರೆಸಿಕೊಳ್ಳುವ 'ಆಕ್ಸಿಟೋಸಿನ್' ಎಂಬ ಹಾರ್ಮೋನು ತಾಯಿಮಗುವಿನ, ತಂದೆ-ಮಗು,ಗಂಡು-ಹೆಣ್ಣಿನ ಸ್ಪರ್ಷದ ವೇಳೆಗೆ ಬಿಡುಗಡೆಗೊಳ್ಳುತ್ತದೆ.

ಆಪ್ಯಾಯಮಾನವಾದ ಭಾವಪ್ರೇರಕ ದೈಹಿಕ ಸ್ಪರ್ಷ ಮಾನವರ ಲೈಂಗಿಕ ಸ್ಪಂದನದ ಆವರ್ತನದ ಒಂದು ಭಾಗವಾಗಿ ಕಾರ್ಯಚರಿಸುತ್ತದೆ ಎಂಬುದಾಗಿ ಅಧ್ಯಯನ ಹೇಳುತ್ತದೆ.

ಪ್ರೀತಿ, ಭಯ, ನಂಬುಗೆ, ಉದ್ವೇಗ ಮುಂತಾದ ಎಲ್ಲ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಲು ಕಣ್ಣು-ಕಣ್ಣಿನ ನೇರ ನೋಟ ನಿರ್ಣಾಯಕ ಎಂಬುದಾಗಿ ಡಾ| ಮ್ಯಾಕ್ ಡೋನಾಲ್ಡ್ ಹೇಳುತ್ತಾರೆ.

ಖಿನ್ನತೆಯ ಖಾಯಿಲೆಯಿಂದ ಬಳಲುವವರು ಮಾತನಾಡುವ ವೇಳೆ ಕಣ್ಣಿನಲ್ಲಿ ದೃಷ್ಟಿ ಇರಿಸಿ ಮಾತನಾಡುವ ಬದಲಿಗೆ ಮುಖದಲ್ಲಿ ಹೆಚ್ಚು ಪ್ರಧಾನಲ್ಲದ ಜಾಗದ ಮೇಲೆ ದೃಷ್ಟಿ ಇರಿಸುತ್ತಾರೆ ಎಂಬ ಅಂಶವನ್ನು ಅಧ್ಯಯನಕಾರರು ಪತ್ತೆ ಮಾಡಿದ್ದಾರೆ.

ಈ ಹಿಂದಿನ ಅಧ್ಯಯನಗಳ ಪ್ರಕಾರ ಆಕ್ಸಿಟೋಸಿನ್ ಡೋಸ್‌ಗಳು ಭೀತಿಯನ್ನು ಹುಟ್ಟಿಸುವಂತಹ ಮೆದುಳಿನ ಸಂಪರ್ಕಗಳ ಚಟುವಟಿಕೆಗಳನ್ನು ಕುಂಠಿತಗೊಳಿಸಿ ಕಣ್ಣಿನ ನೋಟದ ನಂಬುಗೆ ಮತ್ತು ಔದಾರ್ಯವನ್ನು ಹೆಚ್ಚಿಸಿದೆ. ಖಿನ್ನತೆಯ ರೋಗದಿಂದ ಬಳಲುವವರಿಗೆ ಆಕ್ಸಿಟೋಸಿನ್ ನೀಡಿದಲ್ಲಿ ಅದು ಅವರಲ್ಲಿ ವಿಶ್ವಾಸವನ್ನು ವೃದ್ಧಿಸುತ್ತದೆ.
ಈ ಹಾರ್ಮೋನುಗಳನ್ನು ಬಿಡುಗಡೆ ಮಾಡುವ ಒಂದು ತಬ್ಬುಗೆ, ಒಂದು ಮೃದುವಾದ ಸ್ಪರ್ಷವು ಮೆದುಳಿನ ಸಂಕೇತಗಳ ಬದಲಾವಣೆಗೆ ಕಾರಣವಾಗಬಲ್ಲುದು.

ಮಾನಸಿಕ ಅಸ್ವಸ್ಥರಲ್ಲೂ ಆಕ್ಸಿಟೋಸಿನ್ ಸಾಮಾಜಿಕ ಮತ್ತು ಭಾವನಾತ್ಮಕ ವರ್ತನೆಯನ್ನು ಬದಲಿಸುತ್ತದೆಯೆ ಎಂಬುದನ್ನು ಪತ್ತೆ ಹಚ್ಚಲು ಬಯಸುವುದಾಗಿ ಸಂಶೋಧಕರು ಹೇಳಿದ್ದಾರೆ.

Share this Story:

Follow Webdunia kannada