Webdunia - Bharat's app for daily news and videos

Install App

ಕೃತಕ ಹೃದಯದ ಕರಾಮತ್ತು

Webdunia
ND
ಹದಿನೈದು ವರ್ಷಗಳ ಸತತ ಪರಿಶ್ರಮದ ನಂತರ ಕೊನೆಗೂ ವಿಜ್ಞಾನಿಗಳು ಪರಿಪೂರ್ಣ ಕೃತಕ ಹೃದಯವನ್ನು ತಯಾರಿಸಿದ್ದಾರೆ. ಯೂರೋಪಿಯನ್ ವಿಜ್ಞಾನಿಗಳ ತಂಡ ಶೋಧಿಸಿರುವ ಈ 'ಕೃತಕ ಹೃದಯ' ನೈಜ ಹೃದಯದಂತೆಯೇ ಕಾರ್ಯನಿರ್ವಹಿಸುವುದು ಎಂದು ಹೇಳಿದೆ.

ಈ ಕೃತಕ ಹೃದಯವು ರಕ್ತದೊತ್ತಡ ಮತ್ತು ಹೃದಯಬಡಿತವನ್ನು ಸರಿಯಾಗಿ ಹೊಂದಿಸಬಲ್ಲುದಾಗಿದೆ. ಪೂರ್ಣ ಪ್ರಮಾಣದ ಶಸ್ತ್ರಕ್ರಿಯೆಯ ಮ‌ೂಲಕ ಈ ಕೃತಕ ಹೃದಯವನ್ನು ಮಾನವನಿಗೆ ಜೋಡಿಸಬಹುದಾಗಿದ್ದು, ಇದರ ಹಿಂದಿನ ಕರ್ತೃಗಳು ಫ್ರೆಂಚ್ ಹೃದ್ರೋಗ ತಜ್ಞ ಅಲೈನ್ ಕಾರ್ಪೆಂಟೈರ್ ಮುಂದಾಳುತ್ವದ ಯ‌ೂರೋಪಿಯನ್ ವಿಜ್ಞಾನಿಗಳ ತಂಡ.

" ಹೃದ್ರೋಗತಜ್ಞರಿಗೆ ಈ ಕೃತಕ ಹೃದಯವನ್ನು ತೋರಿಸಿದರೆ ಅವರು ಇದನ್ನು ಮಾನವನ ಹೃದಯ ಎಂದೇ ಹೇಳಬಹುದು. ಆದರೆ ಇದು ಬದಲಿ ಅಂಗ" ಎಂದು ಪ್ರೊ. ಕಾರ್ಪೆಂಟೈರ್ ತಿಳಿಸಿದ್ದಾರೆ.

" ನಾನು ಯುವಕನಲ್ಲ. 40ರಿಂದ 50ರ ಹರೆಯದ ಹಲವರು ಬದಲಿ ಹೃದಯವಿಲ್ಲದೆ ಪ್ರಾಣ ಕಳೆದುಕೊಂಡದ್ದನ್ನು ಅಸಹನೀಯವಾಗಿ ನೋಡಿ ಮರುಗಿದ್ದೇನೆ. ಇದೀಗ ಶೋಧಿಸಲಾಗಿರುವ ಕೃತಕ ಹೃದಯ ಬಳಸಲು ಸಿದ್ಧವಾಗಿದೆ. ಆದರೆ ಇದನ್ನು ತಯಾರಿಸಲು ಕೈಗಾರಿಕೋದ್ಯಮಿಗಳು ಮುಂದೆ ಬರಬೇಕು. ಈ ಕೃತಕ ಹೃದಯಗಳನ್ನು ಸುಮಾರು 20 ಹೃದ್ರೋಗಿಗಳಿಗೆ ಪ್ರಾಯೋಗಿಕವಾಗಿ ಅಳವಡಿಸಲಾಗುವುದು. ಅದಕ್ಕಾಗಿ ನಾವು 2-3 ವರ್ಷ ಸಮಯವನ್ನು ತೆಗೆದುಕೊಳ್ಳಲಿದ್ದೇವೆ" ಎಂದು ಪ್ರೊಫೆಸರ್ ಹೇಳಿದ್ದಾರೆ.

ರಕ್ತ ಹೆಪ್ಪುಗಟ್ಟುವಿಕೆಯಿಂದ ಹೃದಯ ಕವಾಟಕ್ಕೆ ರಕ್ತ ಸರಬರಾಜಿನಲ್ಲಿ ತಡೆಯುಂಟಾದಾಗ ಅಥವಾ ಇಂತಹುದೇ ಬೇರೆ ಪ್ರಕರಣಗಳಿಗೆ ಈ ಕೃತಕ ಹೃದಯದ ಅಳವಡಿಕೆ ಹೆಚ್ಚು ಉಪಯೋಗಕ್ಕೆ ಬರಬಹುದು. ನೈಜ ಹೃದಯದಂತೆ ಇದು ಶ್ವಾಸಕೋಶ ಮತ್ತು ದೇಹದ ಇತರ ಭಾಗಗಳಿಗೆ ತನ್ನಿಂದ ತಾನೇ ರಕ್ತವನ್ನು ಸರಬರಾಜು ಮಾಡಬಲ್ಲುದು. ಈ ಹಿಂದೆ ಶೋಧಿಸಲಾಗಿದ್ದ ಕೃತಕ ಹೃದಯಗಳು ಸ್ವಯಂಚಾಲಿತವಾಗಿ ಎಲ್ಲಾ ಕಾರ್ಯಗಳನ್ನು ನಿರ್ವಹಿಸಲು ಅಸಾಧ್ಯವಾಗಿತ್ತು. ರಕ್ತವನ್ನು ಪಂಪ್ ಮಾಡುವಲ್ಲಿನ ವೇಗ ನಿಯಂತ್ರಣಕ್ಕೆ ಯಾವುದೇ ಸ್ವಯಂಚಾಲಿತ ಕ್ರಮಗಳಿರಲಿಲ್ಲ. ಆದರೆ ಇದೀಗ ಶೋಧಿಸಲಾಗಿರುವ ಹೃದಯ ಎಲ್ಲಾ ಕೆಲಸಗಳನ್ನು ತನ್ನಿಂದ ತಾನೇ ನಿರ್ವಹಿಸಿಕೊಳ್ಳುತ್ತದೆ. ಸ್ವಯಂ ಚಾಲಿತವಾಗಿ ಹೃದಯ ಕವಾಟವನ್ನು ತೆರೆದು ಮುಚ್ಚುವ ಕೆಲಸ ಮಾಡುತ್ತದೆ. ಈ ಕೃತಕ ಹೃದಯವನ್ನು ಕುರಿಗಳಿಗೆ ಜೋಡಿಸಿ ಪರೀಕ್ಷೆ ನಡೆಸಲಾಗಿದ್ದು, ಯಶಸ್ವೀ ಫಲಿತಾಂಶವನ್ನು ಪಡೆಯಲಾಗಿದೆ.

ಈ ಕೃತಕ ಹೃದಯ ತೂಕ ಒಂದು ಕಿಲೋ. ದೇಹದ ಸ್ವಭಾವಕ್ಕೆ ಹೊಂದಿಕೊಳ್ಳುವಂತೆ ಹೊರಕವಚವನ್ನು ರಚನೆ ಮಾಡಲಾಗಿದೆ. ಇದರ ಬ್ಯಾಟರಿ ಸುಮಾರು ಐದು ಗಂಟೆಗಳಷ್ಟು ಕಾಲ ಕಾರ್ಯನಿರ್ವಹಿಸಬಲ್ಲುದು.

ಇನ್ನು 2-3 ವರ್ಷದೊಳಗೆ ಇನ್ನಷ್ಟು ಉತ್ತಮ ಗುಣಮಟ್ಟದ ಕೃತಕ ಹೃದಯವನ್ನು ತಯಾರಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. 15 ವರ್ಷಗಳ ನಿರಂತರ ಸಂಶೋಧನೆಯ ಮೂಲಕ ಈ ಕೃತಕ ಹೃದಯವನ್ನು ಕಂಡುಹಿಡಿಯಲಾಗಿದೆ. ಇದಕ್ಕಾಗಿ ಅವಿರತ ಶ್ರಮವಹಿಸಿದವರು ಹಲವರು. ಹಲವು ದೇಶದ ವಿಜ್ಞಾನಿಗಳು ನಿದ್ದೆಗೆಟ್ಟಿದ್ದಾರೆ. ಹಣಕಾಸಿಕ ಅವಶ್ಯಕತೆಗಳಿಗೆ ಬ್ಯಾಂಕುಗಳು, ಉದ್ಯಮವಲಯ ಮತ್ತು ಸರಕಾರ ಸಹಕಾರ ನೀಡಿದೆ.

ಪ್ರಪಂಚದಲ್ಲಿ ಹೃದಯದ ಸಮಸ್ಯೆಯಿಂದ ಸಾಯುತ್ತಿರುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಅಮೆರಿಕಾದಲ್ಲಿ 2006ರಲ್ಲಿ ಸುಮಾರು 2,200 ಮಂದಿ ಬದಲಿ ಹೃದಯವನ್ನು ಜೋಡಿಸಿದ್ದಾರೆ. ಈ ಸರದಿಯಲ್ಲಿ ಹಲವು ಜನ ಕಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವರ್ಷಕ್ಕೆ ಸುಮಾರು 20 ಸಾವಿರ ಕೃತಕ ಹೃದಯಗಳನ್ನು ಜೋಡಿಸಬಹುದು ಎಂದು ಅಂದಾಜಿಸಲಾಗಿದೆ.

ಈ ಹೃದಯವನ್ನು ಅಳವಡಿಸಿಕೊಳ್ಳಬಹುದು ಎಂದು ತುಂಬಾ ಸುಲಭವಾಗಿ ಯೋಚಿಸಿದ್ದವರು ಹೃದಯವನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ- ಈ ಕೃತಕ ಹೃದಯ ಬೆಲೆ ಸುಮಾರು ಒಂದು ಕೋಟಿ ರೂಪಾಯಿ!

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

Show comments