Select Your Language

Notifications

webdunia
webdunia
webdunia
webdunia

ಕೂಸಿನ ಪಾಲನೆ ವಿಧಾನ: ಖಿನ್ನತೆಗೆ ನಾಂದಿ

ಕೂಸಿನ ಪಾಲನೆ ವಿಧಾನ: ಖಿನ್ನತೆಗೆ ನಾಂದಿ
ಹೊಸ ಹೊಸ ಸಂಶೋಧನೆಗಳು ಹೊಸ ಹೊಸ ವಿಷಯಗಳನ್ನು ಹೊರಗೆಡಹುತ್ತಿವೆ. ಇದಕ್ಕೆ ಹೊಸಾ ಸೇರ್ಪಡೆಯೆಂದರೆ, ತಮ್ಮ ಹಸುಗೂಸುಗಳನ್ನು ಬಲಕೈಯಲ್ಲಿ ಎತ್ತಿ ಆಡಿಸುವ ತಾಯಂದಿರಲ್ಲಿ ಖಿನ್ನತೆಯ ಸಾಧ್ಯತೆಗಳು ಹೆಚ್ಚು ಎಂಬ ವಿಚಾರ.

ವಾಷಿಂಗ್ಟನ್‌ನ ಡರ್ರಂ ವಿಶ್ವವಿದ್ಯಾನಿಲಯವು ಈ ಕುರಿತು ಅಧ್ಯಯನ ನಡೆಸಿ ವರದಿ ನೀಡಿದೆ. ಇದರಲ್ಲಿ 79 ಹೊಸ ತಾಯಂದಿರು ಮತ್ತು ಅವರ ಹಸುಗೂಸುಗಳ ಮೇಲೆ ಅಧ್ಯಯನ ಮಾಡಲಾಗಿತ್ತು. ಹಸುಗೂಸುಗಳ ಸರಾಸರಿ ವಯಸ್ಸು ಏಳು ತಿಂಗಳು.

ಕಂದಮ್ಮಗಳ ಜೀವನದ ಆರಂಭಿಕ ಹಂತದಲ್ಲಿ ತಾಯಂದಿರು ಹೆಚ್ಚಾಗಿ ಮಾನಸಿಕ ಒತ್ತಡ ಅನುಭವಿಸುತ್ತಿರುತ್ತಾರೆ. ಈ ಒತ್ತಡವು ಹೆಚ್ಚು ಆಗಿ ಖಿನ್ನತೆಗೆ ಕಾರಣವಾಗುವಲ್ಲಿ ಆ ಮಕ್ಕಳನ್ನು ಎತ್ತಿಕೊಳ್ಳುವ ಅಭ್ಯಾಸವೂ ಪ್ರಮುಖ ಸೂಚಕವಾಗಿರುತ್ತದೆ ಎನ್ನುತ್ತಾರೆ ಸಂಶೋಧಕರು.

ಅಧ್ಯಯನದ ಅಂಗವಾಗಿ, ಮಕ್ಕಳನ್ನು ತಮ್ಮ ಕೈಗಳಲ್ಲಿ ಮಲಗಿಸುವಂತೆ ಮತ್ತು ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸುವಂತೆ ಸಂಶೋಧಕರು ತಾಯಂದಿರನ್ನು ಕೋರಿದ್ದರು. ಯಾವುದೇ ಒತ್ತಡ ಅಥವಾ ಖಿನ್ನತೆಯನ್ನು ವ್ಯಕ್ತಪಡಿಸದ ತಾಯಂದಿರಲ್ಲಿ ಶೇಕಡಾ 86 ಮಂದಿ, ತಮ್ಮ ಮಕ್ಕಳನ್ನು ಎಡಭಾಗದಲ್ಲಿ ಎತ್ತಿಕೊಳ್ಳುತ್ತಿದ್ದರು. ಆದರೆ ಬಲಭಾಗದಲ್ಲಿ ಮಕ್ಕಳನ್ನು ಎತ್ತಿ ಮಲಗಿಸುತ್ತಿದ್ದ ತಾಯಂದಿರಲ್ಲಿ ಶೇ.32 ಮಂದಿ ತೀವ್ರವಾಗಿ ಖಿನ್ನರಾಗಿರುತ್ತಿದ್ದರು ಎಂಬುದನ್ನು ಅಧ್ಯಯನದ ವೇಳೆ ಪತ್ತೆ ಹಚ್ಚಲಾಯಿತು.

Share this Story:

Follow Webdunia kannada