Webdunia - Bharat's app for daily news and videos

Install App

'ಕಾಲ್‌ಸೆಂಟರ್ ರೋಮಿಯೋ'ಗಳಿಗೆ ಏಡ್ಸ್ ತಜ್ಞರ ಎಚ್ಚರಿಕೆ!

Webdunia
PTI
ಕೌಲಾಲಂಪುರ: ಭಾರತದ ಕಾಲ್‌ಸೆಂಟರ್‌ಗಳಲ್ಲಿ ಅಸುರಕ್ಷಿತ ಲೈಂಗಿಕ ಪ್ರಕರಣಗಳು ಹೆಚ್ಚುತ್ತಿವೆ ಎಂದು ಏಡ್ಸ್ ತಜ್ಞರೊಬ್ಬರು ಎಚ್ಚರಿಸಿದ್ದಾರೆ.

ಭಾರತದಲ್ಲಿರುವ ಅಸಂಖ್ಯ ಕಾಲ್‌ಸಂಟರ್‌ಗಳಲ್ಲಿ ರಾತ್ರಿ ಪಾಳಿಯಲ್ಲಿ ದುಡಿಯುವ ಯುವಕ ಯುವತಿಯವರು ಪರಸ್ಪರ ಮೋಹಿತರಾಗುತ್ತಿದ್ದು, ಅಸುರಕ್ಷಿತ ಲೈಂಗಿಕ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಭಯಾನಕ ಅಂಶವನ್ನು ಉನ್ನತ ತಜ್ಞರೊಬ್ಬರು ಹೊರಗೆಡಹಿದ್ದಾರೆ.

ಎಚ್ಐವಿ ಸೋಂಕು ತಡೆಗೆ ಭಾರತವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವಂತೆ, 'ಕಾಲ್‌‌ಸೆಂಟರ್ ರೋಮಿಯೋ'ಗಳು ಕಳವಳ ಹುಟ್ಟಿಸುತ್ತಿದ್ದಾರೆ ಎಂದು, 1986ರಲ್ಲಿ ಭಾರತದಲ್ಲಿ ಪ್ರಥಮ ಏಡ್ಸ್ ಪ್ರಕರಣವನ್ನು ಪತ್ತೆ ಮಾಡಿರುವ ಡ ಾ| ಸುನಿತಿ ಸೊಲೊಮನ್ ಅಂತಾರಾಷ್ಟ್ರೀಯ ವೈದ್ಯಕೀಯ ಸಮ್ಮೇಳನದಲ್ಲಿ ಹೇಳಿದ್ದಾರೆ.

ಭಾರತದಲ್ಲಿ ಪ್ರಸ್ತುತ 2.5 ಮಿಲಿಯನ್ ಮಂದಿ ಎಚ್ಐವಿ ಮತ್ತು ಏಡ್ಸ್ ಸೋಂಕು ಹೊಂದಿದ್ದಾರೆ ಎಂದು ವಿಶ್ವಸಂಸ್ಥೆಯು ಹೇಳಿದೆ.

ಇಂತಹ ಕಡೆ ಕೆಲಸ ಮಾಡುವ ಯುವಕ ಯುವತಿಯರು ಕೈ ತುಂಬ ಸಂಪಾದಿಸುತ್ತಾರೆ. ರಾತ್ರಿಯ ವೇಳೆ ಜತೆಗಿರುತ್ತಾರೆ ಮತ್ತು ಅವರು ಲೈಂಗಿಕವಾಗಿ ಆಕರ್ಷಣೆಗೀಡಾಗುವ ಕಾರಣ ಇದು ಸಹಜವೆಂಬಂತೆ ಆರಂಭವಾಗುತ್ತದೆ ಎಂದು ಸೊಲೊಮನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಲ್ಲದೆ ಇಂತಹ ಉದ್ಯೋಗಿಗಳು ಒಬ್ಬರಿಗಿಂತ ಹೆಚ್ಚಿನ ಮಂದಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದುವುದರಿಂದ ಎಚ್ಐವಿ ಹೆಚ್ಚಿನವರಿಗೆ ಹರಡುತ್ತದೆ ಎಂದೂ ಅವರು ಹೇಳಿದ್ದಾರೆ.

ತನ್ನ ಕ್ಲಿನಿಕ್‌ಗೆ ವಾರದಲ್ಲಿ ಕನಿಷ್ಠ ಮೂರು ಅಥವಾ ನಾಲ್ಕು ಕಾಲ್‌ಸೆಂಟರ್ ಉದ್ಯೋಗಿಗಳು ಭೇಟಿ ನೀಡುತ್ತಾರೆ ಎಂದು ಹೇಳಿರುವ ಅವರು, ತಮಗೆ ಎಚ್ಐವಿ ತಗುಲಿದೆಯೇ ಎಂಬ ಭೀತಿ ಹೊಂದಿರುತ್ತಾರೆ ಎಂದು ಹೇಳಿದ್ದಾರೆ. ಇವರು ಚೆನ್ನೈನ ದಕ್ಷಿಣ ನಗರದಲ್ಲಿ ಏಡ್ಸ್ ಕೇಂದ್ರವನ್ನು ಹೊಂದಿದ್ದಾರೆ.

ಭಾರತದ ಕಾಲ್‌ಸೆಂಟರ್‌ಗಳಲ್ಲಿ ಸುಮಾರು 1.3 ಮಿಲಿಯನ್ ಉದ್ಯೋಗಿಗಳಿದ್ದು, ಇವರಲ್ಲಿ ಹೆಚ್ಚಿನವರು ಆಗಷ್ಟೆ ಶಾಲಾ, ಕಾಲೇಜು ಶಿಕ್ಷಣ ಮುಗಿಸಿರುತ್ತಾರೆ. ಇವರು ತಿಂಗಳೊಂದರ ಆರಂಭಿಕ ವೇತನ 25 ಸಾವಿರ ರೂಪಾಯಿಗಳನ್ನು ಗಳಿಸುತ್ತಿದ್ದು, ಇದು ಸರಕಾರಿ ವೈದ್ಯರ ವೇತನಕ್ಕಿಂತಲೂ ಅಧಿಕವಾಗಿದೆ ಎಂದು ಅವರು ಹೇಳಿದ್ದಾರೆ.

ಕಾಲ್‌ಸೆಂಟರ್ ರೋಮಿಯೊಗಳು ಎಚ್ಐವಿ ಸೋಂಕು ಹೊಂದುವ ಅತಿ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ ಎಂದು ಸೊಲೊಮನ್ ಕಳವಳ ವ್ಯಕ್ತಪಡಿಸಿದ್ದಾರೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ