Select Your Language

Notifications

webdunia
webdunia
webdunia
webdunia

ಕಡಿಮೆ ತೂಕದ ಮಕ್ಕಳಿಗೆ ಖಿನ್ನತೆ ಸಮಸ್ಯೆ

ಕಡಿಮೆ ತೂಕದ ಮಕ್ಕಳಿಗೆ ಖಿನ್ನತೆ ಸಮಸ್ಯೆ
ನ್ಯೂಯಾರ್ಕ್ , ಶನಿವಾರ, 8 ಡಿಸೆಂಬರ್ 2007 (19:17 IST)
ದುಂಡನೆಯ ಮುಖದ ದಪ್ಪ ಮಕ್ಕಳು ಸಂತೋಷವಾಗಿರುವ ಮಕ್ಕಳು ಎಂದು ಹೇಳುವುದರಲ್ಲಿ ನಿಜಾಂಶವಿದೆ. ಹುಟ್ಟುವಾಗ ಕಡಿಮೆ ತೂಕವಿರುವ ಮಕ್ಕಳು ನಂತರದ ಜೀವನದಲ್ಲಿ ಖಿನ್ನತೆ ಮತ್ತು ಆತಂಕದ ಅನುಭವ ಎದುರಿಸುವ ಸಂಭವವಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಕೆಲವು ಅಂತಾರಾಷ್ಟ್ರೀಯ ಸಂಶೋಧಕರ ತಂಡವು ಈ ಅಧ್ಯಯನವನ್ನು ನಡೆಸಿದ್ದು, ಜನ್ಮದ ತೂಕ ಮತ್ತು ಮಾನಸಿಕ ಆರೋಗ್ಯದ ನಡುವೆ ನಂಟನ್ನು ಗುರುತಿಸಿದ್ದಾರೆ.

ಭ್ರೂಣದಲ್ಲಿರುವ ಪರಿಸ್ಥಿತಿಯು ಭವಿಷ್ಯದ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆಂಬ ಸಿದ್ಧಾಂತಕ್ಕೆ ಇದು ಇಂಬು ನೀಡುತ್ತದೆಂದು ಸೈನ್ಸ್ ಡೇಲಿ ವರದಿ ಮಾಡಿದೆ. ಪ್ರಮುಖ ಸಂಶೋಧಕ ಐಯಾನ್ ಕಾಲ್ಮನ್ ಪ್ರಕಾರ ತಮ್ಮ ಜೀವಮಾನದಲ್ಲಿ ಕಡಿಮೆ ಅಥವಾ ಮಧ್ಯಮ ಪ್ರಮಾಣದ ಖಿನ್ನತೆ, ಆತಂಕದ ಲಕ್ಷಣಗಳಿರುವ ಜನರು ವಾಸ್ತವವಾಗಿ ಜನ್ಮತಃ ಕಡಿಮೆ ತೂಕವಿರುವ ಮಕ್ಕಳಾಗಿರುತ್ತಾರೆ.


ಹುಟ್ಟುವಾಗ ಇದ್ದ ತೂಕ ಕಡಿಮೆಯಾಗುತ್ತ ಹೋದಹಾಗೆಲ್ಲ ನಂತರದ ಜೀವನದಲ್ಲಿ ಮಾನಸಿಕ ಅವ್ಯವಸ್ಥೆಯಿಂದ ನರಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಕೆನಡಾದ ಆಲ್‌ಬೆರ್ಟಾ ವಿವಿಯ ಕೋಲ್‌ಮ್ಯಾನ್ ಮತ್ತು ಕೇಂಬ್ರಿಜ್ ಮತ್ತು ಲಂಡನ್‌ನ ಯೂನಿವರ್ಸಿಟಿ ಕಾಲೇಜ್ ಸಹಸಂಶೋಧಕರು 1946ರಲ್ಲಿ ಹುಟ್ಟಿದ 4600 ಬ್ರಿಟನ್ನರಲ್ಲಿ ಖಿನ್ನತೆಯ ಲಕ್ಷಣಗಳಿಗಾಗಿ 40 ವರ್ಷಗಳ ತನಕ ಸಮೀಕ್ಷೆ ನಡೆಸಿತು.

ಈ ಸಮೀಕ್ಷೆಯ ವಿಶ್ಲೇಷಣೆ ಮಾಡಿದ ಬಳಿಕ ಈ ತೀರ್ಮಾನಕ್ಕೆ ಬಂದಿರುವುದಾಗಿ ಹೇಳಲಾಗಿದೆ.ಹುಟ್ಟುವಾಗಿನ ತೂಕ ಮತ್ತು ಮಾನಸಿಕ ಆರೋಗ್ಯದ ನಡುವೆ ಸಂಬಂಧ ಮಾತ್ರವೇ ಸಂಶೋಧಕರಿಗೆ ಪತ್ತೆಯಾಗಿರುವುದಲ್ಲ. ಜೀವಮಾನವಿಡೀ ಅತೀ ಕೆಟ್ಟ ಮಾನಸಿಕ ಆರೋಗ್ಯ ಹೊಂದಿರುವ, ಅತ್ಯಂತ ದುರ್ಬಲ ಮಕ್ಕಳು ನಂತರದ ಜೀವನದಲ್ಲಿ ಉತ್ತಮ ಮಾನಸಿಕ ಆರೋಗ್ಯವಿರುವವರಿಗಿಂತ ಅಭಿವೃದ್ಧಿಯ ಮೈಲುಗಲ್ಲು ದಾಟಿ ಮೊಟ್ಟ ಮೊದಲಬಾರಿಗೆ ನಿಂತುಕೊಳ್ಳುವ ಮತ್ತು ನಡೆಯುವ ಕ್ರಿಯೆಯನ್ನು ಪ್ರದರ್ಶಿಸಿರುವುದು ಸಂಶೋಧಕರನ್ನು ಚಕಿತಗೊಳಿಸಿದೆ.

Share this Story:

Follow Webdunia kannada