Webdunia - Bharat's app for daily news and videos

Install App

ಊಹ್ ಆಹ್ ಔಚ್... ಬೆನ್ನು ನೋವಿಗೆ ಕಾರಣ- ಮನಸ್ಸು!

Webdunia
PTI
ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದೀರಾ? ಇನ್ನು ಈ ಬಗ್ಗೆ ಚಿಂತೆ ಮಾಡುವುದನ್ನು ಬಿಡಿ... ಅದೆಲ್ಲಾ ನಿಮ್ಮ ಮನಸ್ಸಿಗೇ ಸಂಬಂಧಿಸಿದ್ದು ಅಂತ ಹೇಳಿದೆ ಹೊಚ್ಚ ಹೊಸ ಅಧ್ಯಯನವೊಂದು.

ತಮ್ಮದೇ ಬೆನ್ನು ನೋವಿನ ಬಗ್ಗೆ ಕುಟುಂಬ ಸದಸ್ಯರು, ಮಿತ್ರರು, ಬಂಧುಗಳು ಹೇಳುವುದನ್ನು ಕೇಳುತ್ತಾ ಹಾಗೂ ಈ ಕುರಿತ ಸಮಸ್ಯೆಗಳನ್ನು ಓದುತ್ತಾ, ಕೇಳುತ್ತಲೇ ಜನರು ಬೆನ್ನು ನೋವು ಅಂಟಿಸಿಕೊಳ್ಳುತ್ತಾರೆ ಎನ್ನುತ್ತಾರೆ ಜರ್ಮನಿಯ ಎಲ್‌ಬೆಕ್ ವಿಶ್ವವಿದ್ಯಾಲಯದ ಸಂಶೋಧಕರು.

ಇದನ್ನು ಕೇಳುತ್ತಾ ಕೇಳುತ್ತಲೇ, ಎಲ್ಲಿಯೂ ಯಾವುದೇ ಗಾಯವಾಗಲೀ ನೋವಾಗಲೀ ಇಲ್ಲದೇ ಇದ್ದರೂ ಸಹ, ದೇಹಕ್ಕೆ ನೋವಾಗುತ್ತಿದೆ ಎಂಬ ಭಾವನೆ ನಮ್ಮ ಶರೀರವನ್ನು ಆವರಿಸಿಕೊಂಡಿರುತ್ತದೆ ಎಂಬುದು ಸಂಶೋಧಕರ ಅಭಿಮತ.

1990 ರಲ್ಲಿ ಪೂರ್ವ ಮತ್ತು ಪಶ್ಚಿಮ ಜರ್ಮನಿಯ ವಿಲೀನದ ಬಳಿಕ ಜನತೆಯ ಆರೋಗ್ಯ ಪ್ರವೃತ್ತಿಯ ಬಗ್ಗೆ ವಿಶ್ಲೇಷಣೆ ನಡೆಸಿದ ಸಂಶೋಧಕರು ಈ ತೀರ್ಮಾನಕ್ಕೆ ಬಂದಿದ್ದಾರೆ. ನಾಲ್ಕು ದಶಕಗಳ ಕಾಲ ಪ್ರತ್ಯೇಕವಾಗಿದ್ದರೂ, ಎರಡೂ ಭಾಗದ ಜನತೆಯಲ್ಲಿ ಒಂದೇ ತೆರನಾದ ಆನುವಂಶಿಕತೆ ಇತ್ತು. ಆದರೆ ವಿಲೀನವಾದ ಕೆಲವೇ ಸಮಯದಲ್ಲಿ, ಬೆನ್ನು ನೋವಿನ ಬಗ್ಗೆ ಪರಿಶೀಲನೆ ನಡೆಸಿದಾಗ ಶೇ.69ರಷ್ಟು ಪೂರ್ವ ಜರ್ಮನರಲ್ಲೂ, ಶೇ.84ರಷ್ಟು ಪಶ್ಚಿಮ ಜರ್ಮನರಲ್ಲೂ ಇದು ಕಾಣಿಸಿಕೊಂಡಿರುವುದು ತಿಳಿಯಿತು.

2003 ರ ವೇಳೆಗೆ, ಹಿಂದಿನ ಪೂರ್ವ ಜರ್ಮನಿಯ ಜನತೆ, ನಮ್ಮಲ್ಲಿಯೂ ಪಶ್ಚಿಮ ಜರ್ಮನರಂತೆಯೇ ಬೆನ್ನು ನೋವು ಹೆಚ್ಚಾಗಿದೆ ಎಂದು ದೂರಲಾರಂಭಿಸಿದ್ದರು. ಇದಕ್ಕೆ ಕಾರಣ ಬೆನ್ನುನೋವಿನ ಬಗ್ಗೆ ಅತಿರಂಜಿತ ಮಾಧ್ಯಮ ವರದಿಗಳು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಕೇವಲ ಶೇ.15ರಷ್ಟು ಬೆನ್ನುನೋವು ಪ್ರಕರಣಗಳಿಗೆ ಡಿಸ್ಕ್ ಸ್ಲಿಪ್ ಆಗಿರುವುದು ಅಥವಾ ನರ ಸಂಬಂಧಿತ ನ್ಯೂನತೆ ಮುಂತಾದ ನಿಜವಾದ ದೈಹಿಕ ಕಾರಣಗಳಿರುತ್ತವೆ. ಆದರೆ ಉಳಿದೆಲ್ಲವೂ ಕಾರಣರಹಿತ ಎಂದು ಸಂಶೋಧಕರು ಹೇಳಿರುವುದಾಗಿ ಇಂಗ್ಲೆಂಡಿನ ಡೈಲಿ ಮೇಲ್ ವರದಿ ಮಾಡಿದೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

Show comments