Webdunia - Bharat's app for daily news and videos

Install App

ಇಕೋ ಕಾರ್ಡಿಯೋಗ್ರಫಿ

Webdunia
ಇಕೋ ( echo) ಪರೀಕ್ಷೆ ಮತ್ತು ಅದರ ಉಪಯೋಗ

ಹೃದಯದ ಅಂಗರಚನೆ ಅಧ್ಯಯನಕ್ಕೆ ಇಕೋ ಕಾರ್ಡಿಯೋಗ್ರಾಮ್ ಅತ್ಯಂತ ಪ್ರಯೋಜನಕಾರಿ. ಇದರಲ್ಲಿ ದೇಹದೊಳಗೆ ಯಾವುದೇ ಸಲಕರಣೆ ತೂರಿಸುವ ಪ್ರಕ್ರಿಯೆ ಇಲ್ಲ ಮತ್ತು ಅತ್ಯಂತ ಸುರಕ್ಷಿತ. ಸೂಕ್ತವಾಗಿ ತರಬೇತಿ ಹೊಂದಿದ ತಜ್ಞರು ಇದನ್ನು ನಡೆಸಿದಲ್ಲಿ ಅತ್ಯಂತ ನಿಖರ ಫಲಿತಾಂಶವೂ ದೊರೆಯುತ್ತದೆ.

ಇಕೋ ಕಾರ್ಡಿಯೋಗ್ರಾಂ ಹೇಗೆ ನಿರ್ವಹಿಸಲಾಗುತ್ತದೆ?

ರೋಗಿಯನ್ನು ಬೆಡ್ ಅಥವಾ ಪರೀಕ್ಷಾ ಟೇಬಲ್ ಮೇಲೆ ಮಲಗಿಸಲಾಗುತ್ತದೆ. ಇಕೋ ತಂತ್ರಜ್ಞ ಒಂದು ಟ್ರಾನ್ಸ್‌ಡ್ಯೂಸರ್ (ಕಂಪ್ಯೂಟರ್ ಮೌಸ್‌ನಂತೆ ಕಾಣಿಸುವ) ಒಂದನ್ನು ಎದೆ ಭಾಗದಲ್ಲಿ ಇರಿಸುತ್ತಾನೆ. ಎದೆಭಾಗದಲ್ಲಿ ಈ ಟ್ರಾನ್ಸ್‌ಡ್ಯೂಸರನ್ನು ಅತ್ತಿಂದಿತ್ತ ಚಲಿಸಲಾಗುತ್ತದೆ, ಈ ಮೂಲಕ ಹೃದಯದ ವಿಭಿನ್ನ ಕೋನಗಳನ್ನು ದಾಖಲಿಸಿಕೊಳ್ಳಲಾಗುತ್ತದೆ. ಈ ಪುಟ್ಟ ಉಪಕರಣವನ್ನು ಎದೆ ಮೇಲೆ ಜಾರಿಸಲು ಅನುಕೂಲವಾಗುವಂತೆ ವ್ಯಾಸೆಲಿನ್ ಜೆಲ್ ಅನ್ನು ಎದೆಗೆ ಹಚ್ಚಲಾಗುತ್ತದೆ. ಈ ಪರೀಕ್ಷೆ ಪೂರ್ಣಗೊಳ್ಳಲು 30ರಿಂದ 60 ನಿಮಿಷ ಸಾಕಾಗುತ್ತದೆ.

ಇಕೋ ಕಾರ್ಡಿಯೋಗ್ರಾಂ ಹೇಗೆ ಕೆಲಸ ಮಾಡುತ್ತದೆ?

ಎದೆ ಮೇಲಿರಿಸಿದ ಟ್ರಾನ್ಸ್‌ಡ್ಯೂಸರ್ ಹೃದಯದತ್ತ ಶಬ್ದದ ತರಂಗಗಳನ್ನು ಕಳುಹಿಸುತ್ತದೆ. ಸಬ್‌ಮರಿನ್‌ನಲ್ಲಿರುವ ಸೋನಾರ್‌ನಂತೆಯೇ, ಹೃದಯದ ರಚನೆಗಳ ಮೇಲೆ ಬೌನ್ಸ್ (ಇಕೋ-ಪ್ರತಿಧ್ವನಿಸು) ಆಗುತ್ತವೆ. ಹೃದಯದ 'ಇಕೋ'ಗಳನ್ನು ಟ್ರಾನ್ಸ್‌ಡ್ಯೂಸರ್ ಸಂಗ್ರಹಿಸುತ್ತದೆ.

ಈ ಮರಳಿದ ಶಬ್ದದ ಅಲೆಗಳನ್ನು ಕಂಪ್ಯೂಟರ್ ಮೂಲಕ ಸಂಸ್ಕರಿಸಲಾಗುತ್ತದೆ ಮತ್ತು ಟೆಲಿವಿಷನ್ ಪರದೆಯಲ್ಲಿ ಹೃದಯದ 2- D ( ಎರಡು ಆಯಾಮದ) ಚಿತ್ರವು ಮೂಡುತ್ತದೆ. ಟ್ರಾನ್ಸ್‌ಡ್ಯೂಸರನ್ನು ಸೂಕ್ತ ಸ್ಥಾನದಲ್ಲಿ ಇರಿಸುವ ಮೂಲಕ, ಇಕೋ ಕಾರ್ಡಿಯೋಗ್ರಾಂನಿಂದ ಹೃದಯದ ಪ್ರಮುಖ ಸಂರಚನೆಗಳನ್ನು ವೀಕ್ಷಿಸಬಹುದಾಗಿದೆ.

ಇಕೋ ಕಾರ್ಡಿಯೋಗ್ರಾಂ ಯಾವುದಕ್ಕೆ ಒಳ್ಳೆಯದು?

ಇಕೋ ಕಾರ್ಡಿಯೋಗ್ರಾಂ ಹೃದಯದ ಪ್ರಮುಖ ಸಂರಚನೆಗಳು ಹೇಗಿವೆ ಎಂಬುದನ್ನು ತಿಳಿಸುತ್ತದೆ. ಹೃದಯದ ಕವಾಟಗಳಲ್ಲಿ ಏನಾದರೂ ಸಮಸ್ಯೆ ಪತ್ತೆ ಹಚ್ಚುವಲ್ಲಿ ಇದು ಬಹಳಷ್ಟು ಉಪಕಾರಿ. ಜನ್ಮಜಾತವಾದ ಹೃದ್ರೋಗದ ವ್ಯಾಪ್ತಿ ಅರಿಯಲು ಕೂಡ ಇದು ಸಹಕಾರಿ. ಹೃದಯದ ಸ್ನಾಯುಗಳ ಒಟ್ಟಾರೆ ಕಾರ್ಯನಿರ್ವಹಣೆಯ ಬಗ್ಗೆ ಸ್ಥೂಲವಾಗಿ ಅರಿತುಕೊಳ್ಳಲು ಇಕೋ ಕಾರ್ಡಿಯೋಗ್ರಾಂ ಸಹಕಾರಿಯಾಗುತ್ತದೆ.

ಇಕೋ ಕಾರ್ಡಿಯೋಗ್ರಾಂ ಯಾವುದಕ್ಕೆ ಒಳ್ಳೆಯದಲ್ಲ?

ಇಕೋದಲ್ಲಿ ಹೃದಯದ ಅಪಧಮನಿಗಳ ಚಿತ್ರಣ ಮೂಡುವುದಿಲ್ಲ ಮತ್ತು ಈ ಧಮನಿಗಳ ರೋಗ ಪತ್ತೆ ಹಚ್ಚಲು ಸಾಧ್ಯವಿಲ್ಲ. ಹೃದಯದ ಸ್ನಾಯುಗಳ ಕಾರ್ಯವಿಧಾನ ತಿಳಿದುಕೊಳ್ಳುವ ನಿಟ್ಟಿನಲ್ಲಿ ಇದು MUGA ಸ್ಕ್ಯಾನ್‌ನಷ್ಟು ನಿಖರವಾದ ಫಲಿತಾಂಶ ನೀಡುವುದಿಲ್ಲ. ಹಲವಾರು ಭೌತಿಕ ವ್ಯತ್ಯಾಸಗಳು (ಉದಾಹರಣೆಗೆ ಹೃದಯದ ದಪ್ಪ ಗೋಡೆ) ಕೂಡ ಹೃದಯದ ಸಂರಚನೆಯ ಚಿತ್ರದ ಗುಣಮಟ್ಟವನ್ನು ಮಿತಿಗೊಳಿಸಬಹುದು. ಆದರೆ ಈ ವ್ಯತ್ಯಾಸಗಳ ಸಮಸ್ಯೆಗಳನ್ನು ಟ್ರಾನ್ಸ್ಈಸೋಫೇಗಲ್ ಇಕೋ ಪರೀಕ್ಷೆ ಮೂಲಕ ಪರಿಹರಿಸಿಕೊಳ್ಳಬಹುದು.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

Show comments