Select Your Language

Notifications

webdunia
webdunia
webdunia
webdunia

ಮೂಷಕ ವಾಹನ ಮೋದಕ ಹಸ್ತ

ಮೂಷಕ ವಾಹನ ಮೋದಕ ಹಸ್ತ
WDWD
ಗಣೇಶನ ಮೂಲ ವಾಹನ ಇಲಿ. ಆದರೆ ಈ ದೇವರಿಗೆ ಸಿಂಹ, ನವಿಲು, ಸರ್ಪ ಮುಂತಾದವುಗಳು ಕೂಡಾ ಗಣೇಶನ ವಾಹನಗಳೆಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಮತ್ಸ್ಯ ರಾಕ್ಷಸನನ್ನು ಸಂಹರಿಸಲು ವಕ್ರತುಂಡಾವತಾರ ತಾಳಿದಾಗ, ಸಿಂಹವು ಗಣೇಶನ ವಾಹನವಾಗಿತ್ತು. ಕಾಮಾಸುರನನ್ನು ವಧಿಸುವ ಸಂದರ್ಭದಲ್ಲಿ ನವಿಲು ವಾಹನವಾಗಿತ್ತು.

ಹೆಚ್ಚು ಪ್ರಚಾರದಲ್ಲಿರುವುದು ಇಲಿ ಮಾತ್ರ. ಇಲಿಯನ್ನು ಮೂಷಿಕನೆಂದು ಕರೆಯುತ್ತಾರೆ. ಇಲಿ ಕ್ರೋಧ, ಲೋಭ, ಮೋಹ, ಮದ, ದುರಾಭಿಮಾನಗಳಿಗೆ ಪ್ರತೀಕ. ಇಲಿ ವಿಧ್ವಂಸಕಾರಕ ಶಕ್ತಿಯ ಪ್ರತಿರೂಪ.

ಮೂಷಕನೆಂಬ ರಾಕ್ಷಸನು ಗಣಪತಿಯೊಂದಿಗೆ ಯುದ್ಧ ಮಾಡಿ, ಸೋತು ಶರಣಾಗಿ ತನ್ನನ್ನು ವಾಹನವಾಗಿ ಮಾಡಿಕೊಳ್ಳಲು ವಿನಂತಿಸಿದಾಗ ಗಣೇಶನು ಸಮ್ಮತಿಸಿದನೆಂದು ಪುರಾಣದಲ್ಲಿ ಹೇಳಲಾಗಿದೆ.

ಧಾನ್ಯಗಳ ದೇವತೆಯಂದು ಗಣೇಶನನ್ನು ರೈತರು ಪೂಜಿಸುತ್ತಾರೆ. ಇಲಿಯು ಗಣೇಶನ ವಾಹನವಾಗಿದ್ದರಿಂದ ರೈತರು ಇಲಿಯನ್ನು ಆರಾಧಿಸುತ್ತಾರೆ.

ಚೌತಿಯ ಹಬ್ಬದಂದು ಒಳ್ಳೆಯ ವಿಷಯಗಳನ್ನು ಅರಗಿಸಿಕೊಂಡು ಕೆಟ್ಟ ವಿಷಯಗಳಿಂದ ದೂರವಿರಬೇಕೆಂದು ಸೂಚಿಸುತ್ತದೆ ಇಲಿ. ವಿಘ್ನ ನಿವಾರಕನನ್ನು ಉದರಪೋಷಕನೆಂದು ಪೂಜಿಸುತ್ತಾರೆ.

ಒಂದು ಹಸ್ತದಲ್ಲಿ ಅಸ್ತ್ರ, ಒಂದು ಹಸ್ತದಲ್ಲಿ ಕ್ರೋಧವನ್ನು ನಿಯಂತ್ರಣದಲ್ಲಿರಿಸುವ ಅಂಕುಶವನ್ನು ಹೊಂದಿರುವಂತಹ ಅಧಿಪತಿ ಈ ವಿನಾಯಕ. ಭಕ್ತರ ರಕ್ಷಣೆ ಮಾಡುವುದರೊಂದಿಗೆ ಮೋದಕ ಪ್ರಿಯ ನಂಬಿದವರಿಗೆ ಅಭಯ ನೀಡುತ್ತಾನೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.

Share this Story:

Follow Webdunia kannada