Select Your Language

Notifications

webdunia
webdunia
webdunia
webdunia

ಎಳ್ಳು ಕಡುಬು

ಎಳ್ಳು ಕಡುಬು
AvinashWD
ಬೇಕಾಗುವ ಸಾಮಗ್ರಿ:
ಅಕ್ಕಿ ಹುಡಿ- 2 ಕಪ್
ಎಣ್ಣೆ-1 ಟೇಬಲ್ ಚಮಚ
ಉಪ್ಪು-ರುಚಿಗೆ ತಕ್ಕಷ್ಟು
ಬಿಳಿ ಎಳ್ಳು-1 ಕಪ್
ಹುಡಿ ಮಾಡಿದ ಬೆಲ್ಲ-1 ಕಪ್
ತುಪ್ಪ-1 ಟೇಬಲ್ ಚಮಚ

ವಿಧಾನ:
ಅಕ್ಕಿ ಹುಡಿಯನ್ನು ಎಣ್ಣೆ ಮತ್ತು ಉಪ್ಪು ಬೆರೆಸಿ,ಬೇಕಾದಷ್ಟು ನೀರಿನೊಂದಿಗೆ ಮಿಶ್ರ ಮಾಡಿ ಹಿಟ್ಟು ತಯಾರಿಸಿ. ಎಳ್ಳು ಕಾಳುಗಳನ್ನು ನಸು ಬಣ್ಣಕ್ಕೆ ತಿರುಗುವಂತೆ ಹದವಾಗಿ ಹುರಿಯಿರಿ.ಇದನ್ನು ಬೆಲ್ಲದೊಂದಿಗೆ ಸೇರಿಸಿ ಪುಡಿ ಮಾಡಿ.ತದನಂತರ ತುಪ್ಪವನ್ನು ಸೇರಿಸಿ ಚೆನ್ನಾಗಿ ಸೇರಿಸಿ ಮಿಶ್ರ ಮಾಡಿ.

ಅಕ್ಕಿ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ,ಅದನ್ನು ಚಿಕ್ಕ ಚಪಾತಿಯಂತೆ ಹರವಿ ಅದರೊಳಗೆ ಎಳ್ಳು ಮತ್ತು ಬೆಲ್ಲದ ಮಿಶ್ರಣವನ್ನು ತುಂಬಿಸಿ ಉಂಡೆಗಳನ್ನಾಗಿ ಮಾಡಿ.ಈ ಉಂಡೆಗಳನ್ನು ಆವಿಯಲ್ಲಿ ಬೇಯಿಸಿ, ತಣ್ಣಗಾದ ನಂತರ ಬಡಿಸಿ.

Share this Story:

Follow Webdunia kannada