Article Five Kakar %e0%b2%aa%e0%b2%82%e0%b2%9a %e0%b2%95%e0%b2%be%e0%b2%95%e0%b2%b0%e0%b3%8d%e2%80%8c%e0%b2%97%e0%b2%b3%e0%b3%81 107052400043_1.htm

Select Your Language

Notifications

webdunia
webdunia
webdunia
webdunia

ಪಂಚ ಕಾಕರ್‌ಗಳು

ಸಿಖ್ ಪಂಚ ಕಾಕರ್‌ಗಳು
WD
ಸಿಖ್ಖರಿಗೆ ಐದು ವಸ್ತುಗಳು ಸರ್ವಶ್ರೇಷ್ಠವೆಂದು ಪರಿಗಣಿತವಾಗಿದ್ದು, ಅವನ್ನು ಪಂಚ ಕಾಕರ್‌ಗಳು ಎಂದು ಕರೆಯಲಾಗುತ್ತದೆ.

ಅವು ಯಾವುವೆಂದರೆ:

ಕೇಶ
ಸಿಖ್ ಧರ್ಮೀಯರು ದೇವರ ಸೃಷ್ಟಿಯಾದ ಕೇಶವನ್ನು ಗೌರವಿಸುವುದಲ್ಲದೇ, ಅದನ್ನು ಕತ್ತರಿಸುವುದಾಗಲಿ ಅಲಂಕಾರ ಮಾಡುವುದಾಗಲಿ ಮಾಡುವುದಿಲ್ಲ.

ಕಂಗಾ
ಬಾಚಣಿಕೆಯ ಮಾದರಿಯ ಕಂಗಾವನ್ನು ತಲೆಯ ಮೇಲೆ ಸುತ್ತಿದ ಪೇಟಾದಲ್ಲಿ ಗಂಟು ಹಾಕಿ ಇಡಲಾಗುತ್ತದೆ,ಕೇಶದ ನೈರ್ಮಲ್ಯವನ್ನು ಕಾಪಾಡಲು ಬಳಕೆ ಮಾಡಲಾಗುತ್ತದೆ.

ಕಡಾ
ಕಡಾ (ಕಡಗ) ಇದು ಸಿಖ್ ಧರ್ಮೀಯರಿಗೆ ಗುರುವಿನ ಕೊಡುಗೆಯಾಗಿದ್ದು, ಕಬ್ಬಿಣದಿಂದ ತಯಾರಿಸಲಾಗುತ್ತದೆ. ಪರಿಶುದ್ದತೆ ಮತ್ತು ಪಾವಿತ್ರ್ಯ ಸೂಚಿಸುವ ವಸ್ತುವಾಗಿದೆ.

ಕಚ್ಚೇರಾ
ಇದು ಸಿಖ್ ಧರ್ಮೀಯರು ಧರಿಸುವ ಒಳ ಅಂಗವಸ್ತ್ರವಾಗಿದ್ದು, ಇದು ಬೇಸಿಗೆ ಕಾಲದಲ್ಲಿ, ಈಜಾಡುವ, ಆಟದ ಸಂದರ್ಭದಲ್ಲಿ ಉಪಯುಕ್ತವಾಗಿರುತ್ತದೆ. ಕಚ್ಚೇರಾ ದಿರಿಸು ಸಿಖ್ ಧರ್ಮೀಯರ ಉನ್ನತ ನೈತಿಕ ಮೌಲ್ಯಗಳ ಮತ್ತು ಆತ್ಮಸಂಯಮದ ಸಂಕೇತವಾಗಿರುತ್ತದೆ.

ಕೃಪಣ
ಕೃಪಣವೆಂದರೇ ಕೃಪಾ ಮತ್ತು ಆಣ ಪದಗಳ ಸಂಯುಕ್ತರೂಪ. ಕೃಪೆ ಎಂದರೆ ದಯೆ, ಆಣ ಎಂದರೆ ಗೌರವ, ಸ್ವಾಭಿಮಾನ. ಸ್ವರಕ್ಷಣೆಗಾಗಿ ಉಪಯೋಗಿಸುವಂತಹ ಚಾಕುವಿನಂತಹ ಅಸ್ತ್ರವಿದು.

Share this Story:

Follow Webdunia kannada