Select Your Language

Notifications

webdunia
webdunia
webdunia
webdunia

ರಾಜ್ಯಾದ್ಯಂತ ಗೌರಿ - ಗಣೇಶ ಹಬ್ಬದ ಸಂಭ್ರಮ

ರಾಜ್ಯಾದ್ಯಂತ ಗೌರಿ - ಗಣೇಶ ಹಬ್ಬದ ಸಂಭ್ರಮ
ಬೆಂಗಳೂರು , ಮಂಗಳವಾರ, 2 ಸೆಪ್ಟಂಬರ್ 2008 (13:38 IST)
NRB
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಂಗಳವಾರ ಗೌರಿ ಹಬ್ಬದ ಸಂಭ್ರಮ ಒಂದೆಡೆಯಾದರೆ, ಮತ್ತೊಂದೆಡೆ ಬುಧವಾರ ನಡೆಯಲಿರುವ ಗಣೇಶನ ಹಬ್ಬಕ್ಕೆ ಬೀದಿ-ಬೀದಿಗಳಲ್ಲಿ ಅಲಂಕಾರಗೊಂಡ ಗಣೇಶನ ಮೂರ್ತಿ ಖರೀದಿ ಭರಾಟೆ ನಡೆದಿದೆ.

ಹೆಣ್ಣುಮಕ್ಕಳು ತವರಿನ ನೆನಪಿಗೆ ಆಚರಿಸುವ ಹಬ್ಬ ಎನ್ನುವುದು ಸಂಪ್ರದಾಯದ ಮಾತು. ಹೆಣ್ಮಕ್ಕಳನ್ನು ತವರಿನತ್ತ ಆಕರ್ಷಿಸುವುದರೊಂದಿಗೆ ತಾಯಿ-ಮಗಳು ಇಬ್ಬರು ಪರಸ್ಪರ ಕಾಣುವ, ಬಾಗಿನ ಕೊಡುವ ತವಕ. ಅಲ್ಲದೆ, ಈ ದಿನ ಕೆಲವರು ಸ್ವರ್ಣಗೌರಿ ವ್ರತ ಕೂಡ ಆಚರಿಸುತ್ತಾರೆ.

ಈ ಆಚರಣೆಯ ಪೌರಾಣಿಕ ಹಿನ್ನೆಲೆಯತ್ತ ಗಮನ ಹರಿಸಿದರೆ ಇದು ಪಾರ್ವತಿಯ ಕಥೆ. ಪರಮೇಶ್ವರನೊಂದಿಗೆ ವಿವಾಹವಾದ ಬಳಿಕ ಪಾರ್ವತಿ ತಂದೆ ಪರ್ವತರಾಜ, ಮಗಳನ್ನು ತವರಿಗೆ ಕರೆದುಕೊಂಡಲು ಬರುತ್ತಾನೆ. ಆದರೆ ಶಿವನಿಗಿದು ಇಷ್ಟವಿಲ್ಲ. ಆದರೂ ಶಂಕರ ಪತ್ನಿಯನ್ನು ಕಳುಹಿಸಲು ಒಪ್ಪುತ್ತಾನ
webdunia
NRB
.

ಬಹಳ ದಿನಗಳಾದರೂ ಪಾರ್ವತಿ ಬರದಿದ್ದಾಗ, ಮಗ ಗಣೇಶನನ್ನು ಕಳುಹಿಸುತ್ತಾನೆ ಶಿವ. ಅಲ್ಲಿ ತದಿಗೆಯಂದು ತವರಿನಲ್ಲಿ ಗೌರಿಗೆ ಸಿಹಿಯೂಟವಾದರೆ, ತಿಂಡಿಪೋತ ಗಣೇಶನಿಗೂ ಮರುದಿನ ಮೃಷ್ಟಾನ್ನ ಭೋಜನ. ಬಳಿಕ ಪಂಚಮಿಯಂದು ಅಮ್ಮನೊಂದಿಗೆ ವಾಪಸ್ ಹೊರಡುತ್ತಾನೆ ಗಣೇಶ.

ಹಬ್ಬ ಹರಿದಿನಗಳನ್ನು ಆಚರಿಸುವುದರಲ್ಲಿ ಬೆಂಗಳೂರಿನ ಜನತೆ ಎತ್ತಿದ ಕೈ. ಬೆಳಗ್ಗಿನಿಂದಲೇ ಎಲ್ಲಾ ಮನೆಗಳಲ್ಲಿ ಗೌರಿ ಮೂರ್ತಿಯನ್ನಿಟ್ಟು ಪೂಜೆ ಮಾಡಿ ಭಕ್ಷ್ಯಗಳನ್ನಿಟ್ಟು ಸಂಭ್ರಮಿ ಸುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತದೆ. ಈ ನಡುವೆ ಹಣದುಬ್ಬರದ ಬಿಸಿ ಗೌರಿ-ಗಣೇಶ ಹಬ್ಬಕ್ಕೂ ತಟ್ಟಿದೆ.ಮುದ್ದು ಗೌರಿ ಮೂರ್ತಿಗಳ ಹಿಂದೆ ಸಾಲಾಗಿ ಕುಳಿತ ಗಣಪನ ವಿಗ್ರಹಗಳು ನಗರದ ಬೀದಿ ಬೀದಿಗಳಲ್ಲಿ ರಾರಾಜಿಸುತ್ತಿದೆ.

Share this Story:

Follow Webdunia kannada