Publish Date: Fri, 22 Feb 2008 (15:35 IST)
Updated Date: Fri, 22 Feb 2008 (15:35 IST)
ಅಟ್ಟುಕಲ್ ಭಗವತಿ ಮಂದಿರದಲ್ಲಿ ಕಳೆದ ಹತ್ತು ದಿನಗಳ ಕಾಲ ನಿರಂತರವಾಗಿ ನಡೆದ ಹಬ್ಬದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿದ್ದ ಮಹಿಳಾ ಭಕ್ತರು ಅಟ್ಟುಕಲ್ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.
ಪೊಂಗಲಾ ಆರಂಭಕ್ಕೆ ಮುಂಚೆ ಮಂದಿರದಲ್ಲಿ ಅರ್ಚಕರು ದೇವಿಯ ಭಕ್ತಿ ಗೀತೆಗಳನ್ನು ಹಾಡುವದರೊಂದಿಗೆ ಪಂಡರಾ- ಅಡಪ್ಪು ಪೂಜೆಯನ್ನು ಆರಂಭಿಸಿದರು. ನಂತರ ನಗರಾದ್ಯಂತ ಮೆರವಣಿಗೆ ನಡೆಸಿದ ಭಕ್ತರು ದೇವಿಗೆ ಪ್ರಾರ್ಥನೆಯನ್ನು ಸಲ್ಲಿಸಿದರು.
ದೇಶದ ಇತರ ರಾಜ್ಯಗಳಿಂದ, ಜಿಲ್ಲೆಗಳಿಂದ, ಗ್ರಾಮೀಣ ಭಾಗಗಳಿಂದ ಬೆಳಗಿನ ಜಾವಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಮಂದಿರಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು.ದೇವಾಲಯದ ಐದು ಕಿ.ಮಿ ಸುತ್ತಲಿನ ಪ್ರದೇಶ ಭಕ್ತರಿಂದ ತುಂಬಿ ತುಳಕುತ್ತಿತ್ತು.
ವಿದೇಶಿಯರು ದೇಶದ ಪ್ರಮುಖ ಚಿತ್ರನಟಿಯರು, ರಾಜಕಾರಣಿಗಳು ಹಾಗು ಅಧಿಕಾರಿಗಳು ಕಂಪೆನಿಗಳ ಮುಖ್ಯಸ್ಥರು ಅಟ್ಟುಕಲ್ ದೇವಿಯ ದರ್ಶನ ಪಡೆಯುತ್ತಿದ್ದು, ಹೆಚ್ಚಿನ ಮಹಿಳೆಯರು ಒಂದೇಡೆಸೇರುವ ಸ್ಥಳವೆಂದು ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿದೆ.