Select Your Language

Notifications

webdunia
webdunia
webdunia
webdunia

ಮಹಾ ಶಿವರಾತ್ರಿ ಮಹಾನ್ ಯಕ್ಷ ಕಲಾವಿದರು...

ಮಹಾ ಶಿವರಾತ್ರಿ ಮಹಾನ್ ಯಕ್ಷ ಕಲಾವಿದರು...
, ಭಾನುವಾರ, 19 ಫೆಬ್ರವರಿ 2012 (12:21 IST)
ಅಲರ್‌ಮೇಲ್ ವಲ್ಲಿ: ಪಂದನಲ್ಲೂರ್ ಶೈಲಿಯ ಭರತನಾಟ್ಯದ ಅನುಪಮ ನೃತ್ಯ ಕಲಾವಿದೆಯಾದ ಅಲರ್‌ಮೇಲ್ ವಲ್ಲಿ ತಮ್ಮ ವಿಶಿಷ್ಟ ನೃತ್ಯ ಶೈಲಿ ಹಾಗೂ ನಾಟ್ಯ ಸಂಯೋಜನೆಗೆ ಹೆಸರುವಾಸಿಯಾದವರು. 1991ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಕಲಾವಿದೆ. 2001ರಲ್ಲಿ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪಡೆದ ಇವರಿಗೆ, 2004 ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನಿತ್ತು ಭಾರತ ಸರಕಾರ ಸನ್ಮಾನಿಸಿತ್ತು.

ಬಿ.ಬಿ.ಸಿ. ಯ ಸ್ಪಿರಿಟ್ ಆಫು್ ಏಷಿಯ, ನೆದರ್ಲ್ಯಾಂಡ್ಸ್ ಪ್ರಸರಣ ಸಂಸ್ಥೆ, ಜಪಾನಿನ ರಾಷ್ಟ್ತ್ರೀಯ ದೂರದರ್ಶನ, ಮತ್ತು ಭಾರತೀಯ ಚಲನಚಿತ್ರ ವಿಭಾಗದ ಅನೇಕ ಸಾಕ್ಷ್ಯ ಚಿತ್ರಗಳ ಮೂಲಕ ದೇಶ ವಿದೇಶಗಳಲ್ಲಿ ಭರತನಾಟ್ಯವನ್ನು ಪರಿಚಯಿಸಿದ ಶ್ರೇಯಸ್ಸು ಇವರಿಗೆ ಸಲ್ಲುವುದು. ಚೆನ್ನೈನಲ್ಲಿ 'ದೀಪಶಿಖಾ' ಎಂಬ ಲಲಿತಕಲಾಸಂಸ್ಥೆಯನ್ನು ಸ್ಥಾಪಿಸಿ, ಅದರ ಭರತನಾಟ್ಯ ವಿಭಾಗದ ಕಾರ್ಯ ನಿರ್ವಹಿಸುತ್ತಿರುವರು.

ಚನ್ನುಲಾಲ್ ಮಿಶ್ರ: ಇವರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಕಿರಾನ ಘರಾನದ ಪ್ರಖ್ಯಾತ ಗಾಯಕರು. ಪದ್ಮಭೂಷಣರಾದ ಚನ್ನುಲಾಲರಿಗೆ ಉತ್ತರಪ್ರದೇಶ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ನೌಷಾದ್ ಪ್ರಶಸ್ತಿಯನ್ನಿತ್ತು ಉತ್ತರಪ್ರದೇಶ ಸರಕಾರ ಗೌರವಿಸಿದೆ.

ಬನಾರಸ್ ಗಾಯಕಿ ಮತ್ತು ಪಂಜಾಬ್ ಗಾಯಕಿಯ ಶೈಲಿಗಳ ಮಿಶ್ರ ರೀತಿಯ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಖಯಾಲ್, ದಾದ್ರ, ಠುಮ್ರಿ ಮತ್ತು ಭಜನ್‌ಗಳನ್ನು ಹಾಡುವ ಇವರಿಗೆ ತಂದೆ ಪಂಡಿತ್ ಬದ್ರಿಪ್ರಸಾದ್ ಮಿಶ್ರರೇ ಮೊದಲ ಗುರು. ನಂತರ ಕಿರಾನ ಘರಾನದ ಅಬ್ದುಲ್ ಘನೀ ಖಾನ್‌ರಲ್ಲಿ ಶಿಕ್ಷಣ. ಕೇವಲ ಗಾಯನವಷ್ಟೇ ಅಲ್ಲದೆ ಸಂಗೀತ ಶಾಸ್ತ್ರದ ಆಳವಾದ ಅಧ್ಯಯನ, ಅದರ ಕಲಾವಂತಿಕೆಯ ಸೂಕ್ಷ್ಮಮತೆಯ ಶೋಧನೆಯನ್ನು ಠಾಕುರ್ ಜಯದೇವ್ ಸಿಂಗ್ ಅವರಲ್ಲಿ ಕಲಿತಿದ್ದರು.

ಶುಭ ಮುದ್ಗಲ್: ಸಂಗೀತದ ಪರಿಸರದಲ್ಲಿ ಹುಟ್ಟಿ ಬೆಳೆದ ಶುಭ ಅವರಿಗೆ ಭಾರತದ ಅನೇಕ ಶ್ರೇಷ್ಠ ಸಂಗೀತ ವಿದ್ವಾಂಸರಲ್ಲಿ ಶಿಕ್ಷಣ ಲಭಿಸಿದೆ. ಪಂಡಿತ್ ರಾಮ್ ಆಶ್ರೇಯ ಝಾ, ಪಂಡಿತ್ ವಿನಯಚಂದ್ರ ಮೌದ್ಗಲ್ಯ, ಪಂಡಿತ್ ವಿನಯ್ ಥಾಕರ್ ಮೊದಲಾದವರು ಇವರ ಗುರುಗಳು.

ಹಿಂದುಸ್ಥಾನಿ ಶಾಸ್ತ್ರೀಯ ಗಾಯನ, ಖಯಾಲ್, ದಾದ್ರ, ಠುಮ್ರಿ, ಜನಪ್ರಿಯ ಪಾಪ್, ಹೀಗೆ ಎಲ್ಲ ಬಗೆಯಲ್ಲಿ ಪ್ರಸಿದ್ದಿ ಪಡೆದ ಶುಭ ಮುದ್ಗಲ್ ಹೆಸರು ಮನೆಮಾತಾಗಿದೆ. ಸಂಗೀತ ರಚನಕಾರರಾಗಿಯೂ ಪ್ರಸಿದ್ದಿ ಪಡೆದಿರುವ ಶುಭ ಹಲವು ಪ್ರಶಸ್ತಿಗಳ ವಿಜೇತೆ. 1998ರಲ್ಲಿ 34ನೇ ಚಿಕಾಗೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶಿಷ್ಟ ಸಾಧನೆಗೆಂದು ಗೋಲ್ಡನ್ ಪ್ಲೇಕ್ ಅವಾರ್ಡ್ ಗಳಿಸಿದ ಶುಭ 2000ರ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದರು. ಮಧ್ಯಕಾಲೀನ ಆಧ್ಯಾತ್ಮಿಕ, ಸೂಫಿಸಿ ಹಾಡುಗಳ ಅದರಲ್ಲೂ ವಿರಳವಾಗಿ ಕೇಳಿಬರುವ ವೈಶ್ಣವ ಪುಷ್ಟಿಮಾರ್ಗದ ಕವಿಗಳ, ನಿರ್ಗುಣಿ ಕಬೀರರ, ನಾಮದೇವರ, ಅಮೀರ್ ಖುಸ್ರುವಿನ ಹಾಡುಗಳನ್ನು ಇವರು ಹಾಡುವ ಪರಿ ಅನನ್ಯ.

ರವಿಕಿರಣ್: ಕರ್ಣಾಟಕ ಶಾಸ್ತ್ರೀಯ ಸಂಗೀತದ ಖ್ಯಾತ ಕಲಾವಿದ ರವಿಕಿರಣ್ ಅವರು ಬಾಲ್ಯದಿಂದಲೇ ತಮ್ಮ ಪ್ರತಿಭೆ ಮೆರೆದವರು. 5 ವರ್ಷದ ಎಳೆಯ ಬಾಲಕನಾಗಿದ್ದಾಗಲೇ ತಮ್ಮ ಮೊದಲ ಕಛೇರಿ ನಡೆಸಿಕೊಟ್ಟ ಈ ಕಲಾವಿದ 10ನೇ ವಯಸಿನಲ್ಲಿಯೇ 21 ತಂತಿಗಳ ಚಿತ್ರವೀಣೆಯ ಅಭ್ಯಾಸಕ್ಕೆ ತೊಡಗಿದರು. 1999ರಿಂದಲೂ ಗಾಯನ-ವಾದನ ಎರಡರಲ್ಲೂ ಪಾಂಡಿತ್ಯಪೂರ್ಣ ಸಂಗೀತ ನೀಡುತ್ತಿರುವರು. ಕೇವಲ ಸಂಗೀತ ಪ್ರದರ್ಶನಕ್ಕೆ ಸೀಮಿತಗೊಳ್ಳದೆ ಶಾಸ್ತ್ರೀಯ ಸಂಗೀತವನ್ನು ಕುರಿತ ಅಪ್ರಿಶಿಯೇಟಿಂಗ್ ಕರ್ನಾಟಿಕ್ ಮ್ಯೂಸಿಕ್, ಪರ್ಫೆಕ್ಟಿಂಗ್ ಕರ್ನಾಟಿಕ್ ಮ್ಯೂಸಿಕ್- ಲೆವೆಲ್ 1-11 ಎಂಬ ಎರಡು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ.

ಇಂಟರ್ನ್ಯಾಶನಲ್ ಫೌಂಡೇಶನ್ ಫಾರ್ ಕರ್ನಾಟಿಕ್ ಮ್ಯೂಸಿಕ್ ಎಂಬ ಸೇವಾಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯ ಮೂಲಧ್ಯೇಯ- ಲಿಸಂಗೀತದ ಸೇವೆ- ಸಂಗೀತದಿಂದ ಸೇವೆ.

ತರುಣ್ ಭಟ್ಟಾಚಾರ್ಯ: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕರಷ್ಟೇ ಅಲ್ಲದೆ, ಸಂತೂರ್ ವಾದಕರೂ ಆದ ತರುಣ್, ಸಂತೂರ್ ವಾದನದಲ್ಲಿ ಬದಲಾವಣೆ ತಂದ ಮೊದಲಿಗರೆಂದೇ ಪ್ರಸಿದ್ಧರು. ಅಪರೂಪದ ಮೈಹರ್ ಘರಾನದ ಕೆಲವೇ ಸಂಗೀತಗಾರರಲ್ಲಿ ಒಬ್ಬರು. ತಂದೆ ರಬಿ ಭಟ್ಟಾಚಾರ್ಯ, ದುಲಾಲ್ ರಾಯ್, ಸಿತಾರ್ ವಿದ್ವಾಂಸ ಪಂಡಿತ್ ರವಿಶಂಕರ್ ಇವರಲ್ಲಿ ಶಿಕ್ಷಣ ಪಡೆದವರು. ಬಹುಮುಖಪ್ರತಿಭೆಗೆ ಪ್ರಸಿದ್ಧರಾದ ತರುಣ್, ಸಹಪಾಠಿಯಾದ ರವಿಕಿರಣ್ ಅವರೊಂದಿಗೆ ಅನೇಕ ಜುಗಲ್ಬಂದಿಗಳನ್ನು ನಡೆಸಿಕೊಟ್ಟಿದ್ದಾರೆ. ಇವರು ಕರ್ಣಾಟಕ ಸಂಗೀತದ ಅನೇಕ ರಾಗಗಳಲ್ಲೂ ಪ್ರವೀಣರು.

ಡಾ. ಎಲ್ ಸುಬ್ರಹ್ಮಣ್ಯಮ್: ಭಾರತೀಯ ಸಂಗೀತ ಶಾಸ್ತ್ರದ ಪಾಗನಿನಿ ಎಂದು ಹೆಸರು ಪಡೆದಿರುವ ಸುಬ್ರಹ್ಮಣ್ಯಮ್ ರನ್ನು ಭಾರತೀಯ ವೈಲಿನ್ ದೇವತೆ ಎಂದೂ ಕರೆಯುವರು. ಕರ್ಣಾಟಕ ಶಾಸ್ತ್ರೀಯ ಸಂಗೀತ ಮತ್ತು ಪಾಶ್ಚಾತ್ಯ ಶಾಸ್ತ್ರೀಯಸಂಗೀತ ಎರಡರಲ್ಲೂ ಸ್ನಾತಕೋತ್ತರ ಪದವಿ ಪಡೆದಿರುವ ವಿದ್ವಾಂಸರಿವರು. ಹಲವು ಕರ್ಣಾಟಕೀ ರಚನೆಗಳ ಜೊತೆಗೆ ಕೆಲವು ಸಿಂಫೋನಿಗಳನ್ನು ರಚಿಸಿರುವ ಸುಬ್ರಹ್ಮಣ್ಯಮ್ ಅನೇಕ ಸಂಗೀತ ಸಂಬಂಧಿ ಪುಸ್ತಕಗಳನ್ನೂ ಬರೆದಿರುವರು. ಇವರ ಸಂಗೀತ ರಚನೆಗಳನ್ನು ವಿಶ್ವಖ್ಯಾತ ರಂಗಭೂಮಿಗಳಲ್ಲಿ ನಾಟ್ಯ ಸಂಸ್ಥೆಗಳ ಮೂಲಕ ಪ್ರಸ್ತುತಪಡಿಸಲಾಗಿದೆ. ಅದರಲ್ಲೊಂದನ್ನು ಗ್ರ್ಯಾಮಿ ಪ್ರಶಸ್ತಿಗೂ ಹೆಸರಿಸಲಾಗಿತು.

ಸುಬ್ರಹ್ಮಣ್ಯಮ್‌ಗೆ ಪಾಶ್ಚಾತ್ಯ ದೇಶಗಳಿಂದಷ್ಟೇ ಅಲ್ಲದೆ ಭಾರತದಲ್ಲೂ ಪ್ರಶಂಸೆ ಹರಿದು ಬಂದಿದೆ. ಚೆನ್ನೈ ಗವರ್ನರ್ ವೈಲಿನ್ ಚಕ್ರವರ್ತಿ ಎಂಬ ಬಿರುದು ಕೊಟ್ಟರೆ ಭಾರತ ಸರಕಾರವು 1988ರಲ್ಲಿ ಲಿಪದ್ಮಶ್ರ್ತ್ರೀಳಿ ಮತ್ತು 2001ರಲ್ಲಿ ಪದ್ಮಭೂಷಣ ಪ್ರಶಸ್ತಿ ಕೊಟ್ಟು ಸನ್ಮಾನಿಸಿದೆ.

ಉಸ್ತಾದ್ ಅಮ್ಜದ್ ಅಲಿ ಖಾನ್ : ವಿಶ್ವವಿಖ್ಯಾತ ಉಸ್ತಾದ್ ಅಮ್ಜದ್ ಅಲಿ ಖಾನರ ಹೆಸರು ಸರೋದ್ ವಾದ್ಯದೊಂದಿಗೆ ಹೆಣೆದುಕೊಂಡುಬಿಟ್ಟಿದೆ. ಸರೋದ್ ವಾದನದ ನವೀನ ರೀತಿಯ ಬಳಕೆಗೆ, ಅದರಲ್ಲಿ ವಿವಿಧ ಪ್ರಯೋಗಗಳಿಗೆ ಪ್ರಸಿದ್ಧರಾಗಿರುವ ಅಮ್ಜದ್‌ರವರು ಬಂಗೇಶ್ ಪರಂಪರೆಯಲ್ಲಿ 6ನೇ ತಲೆಮಾರಿನವರು. ಇವರ ವಂಶದ ಪೂರ್ವಿಕರು ಸರೋದ್ ವಾದ್ಯವನ್ನು ರಚಿಸಿದವರೆಂದು ಪ್ರತೀತಿ.

ಅಂದಿನ ಗ್ವಾಲಿಯರ್ ಸಂಸ್ಥಾನದ ಲಿಆಸ್ಥಾನ ವಿದ್ವಾನ್ಳಿರಾಗಿದ್ದ ತಂದೆಯವರಲ್ಲಿ ಅಮ್ಜದರ ಬಾಲ್ಯದ ಸಂಗೀತ ಶಿಕ್ಷಣ ನಡೆದಿತ್ತು. ಭಾರತದ ಉನ್ನತ ಪ್ರಶಸ್ತಿಗಳು- ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಇವಷ್ಟೇ ಅಲ್ಲದೆ ಇತರ ಖ್ಯಾತ ಪ್ರಶಸ್ತಿಗಳು-ಯುನೆಸ್ಕೊ ಪ್ರಶಸ್ತಿ, ಯುನಿಸೆಫು್ನ ನ್ಯಾಶನಲ್ ಅಂಬಾಸಿಡರ್ ಪದವಿ, ವರ್ಲ್ಡ್ ಎಕನಾಮಿಕ್ ಫೋರಮ್‌ನ ಕ್ರಿಸ್ಟಲ್ ಅವಾರ್ಡ್ ಇವರಿಗೆ ಸಂದಿವೆ.

ನೈವೆಲಿ ಸಂತಾನಗೋಪಾಲನ್: ಕರ್ಣಾಟಕ ಸಂಗೀತ ವಲಯದಲ್ಲಿ ತಮ್ಮದೇ ವಿಶಿಷ್ಟ ಸ್ಥಾನ ಗಳಿಸಿರುವ ಈ ವಿದ್ವಾಂಸರದು ಬಹುಮುಖ ಪ್ರತಿಭೆ. ಭಕ್ತಿ-ಭಾವಪೂರ್ಣ ಹಾಡುಗಾರಿಕೆಗೆ ಹೇಳಿಮಾಡಿಸಿದಂತೆ ಇವರ ಸಂಗೀತ ಮನೋಧರ್ಮ. ಸಂಗೀತದ ಹೊಸಹೊಸ ಆಯಾಮಗಳನ್ನು ಹುಡುಕಿ ತೋರಿಸುವ ಇವರ ಪ್ರತಿಭೆ ಅನುಪಮ. ಇದರಿಂದಾಗಿ ಜಗತ್ತಿನ ಸಂಗೀತ ಪ್ರೇಮಿಗಳ ಮನದಲ್ಲಿ ಮನೆಮಾಡಿರುವ ಸಂತಾನಗೋಪಾಲನ್ ಅನೇಕ ಪ್ರಸಸ್ತಿಗಳನ್ನು ಗಳಿಸಿರುವುದಲ್ಲದೆ ಹಲವು ಪ್ರಮುಖ ದೇವಸ್ಥಾನಗಳಲ್ಲಿ ಆಸ್ಥಾನ ವಿದ್ವಾನ್‌ರಾಗಿ ನಿಯುಕ್ತರಾಗಿದ್ದಾರೆ.

ಮಹಾಶಿವರಾತ್ರಿ ಕಲಾವಿದರು
ಕೈಲಾಶ್ ಖೇರ್: ಜನಪ್ರಿಯ ಹಿನ್ನೆಲೆ ಗಾಯಕ, ಪಾಪ್ ಸಂಗೀತಕಾರ ಕೈಲಾಶ್ ಖೇರ್ 2002ರಲ್ಲಿ, ತಮ್ಮ ಗಾಯಕವೃತ್ತಿ ಆರಂಭಿಸಿದಾಗಿನಿಂದಲೂ ಭಾರತೀಯ ಜನತೆಗೆ ಪ್ರೀತಿಪಾತ್ರರಾಗಿದ್ದಾರೆ. ಅವರ ಅಲ್ಲಾ ಕೆ ಬಂದೇ ಹಾಡಿನ ಸುಮಧುರ ಸಂಗೀತ ಇವತ್ತಿಗೂ ಜನಾದರ ಕಾಯ್ದುಕೊಂಡಿದೆ. ಹಲವು ಹಿಂದಿ ಚಲಚಿತ್ರಗಳಲ್ಲಿ ಹಾಡಿರುವ 50ಕ್ಕೂ ಮೀರಿದ ಗೀತೆಗಳ ಈ ಗಾಯಕ ಎ.ಆರ್. ರೆಹಮಾನ್ ರಂತಹ ಸಂಗೀತ ನಿರ್ದೇಶಕರ ಅಚ್ಚುಮೆಚ್ಚಿನ ಹಿನ್ನೆಲೆ ಗಾಯಕ. ಇವರು ಹಾಡಿರುವ ಹಾಡುಗಳು ಹಿಂದಿನ ಸೂಫಿ ಗಾಯನ ಶೈಲಿಯ ಮನೋಹರತೆ ಹೊಂದಿದ್ದು, ನೇರ ಅಂತರಾತ್ಮಕ್ಕೇ ಇಳಿಯುವ ಭಾವತೀವ್ರತೆಯುಳ್ಳವು.

ಕಲೋನಿಯಲ್ ಕಸಿನ್ಸ್: ಖ್ಯಾತ ಗಾಯಕ-ಸಂಗೀತರಚನಕಾರರಾದ ಹರಿಹರನ್- ಲೆಸ್ಲಿ ಲೆವಿಸ್ ಜೋಡಿಯು ಎರಡು ದಶಕದಿಂದಲೂ ಸಂಗೀತ ಜಗತ್ತಿನಲ್ಲಿ ತನ್ನ ಜನಪ್ರಿಯತೆ ಕಾಯ್ದುಕೊಂಡಿದೆ. ಹರಿಹರನ್ ಶಾಸ್ತ್ರೀಯ ಸಂಗೀತದಲ್ಲಿ ಪರಿಣತರಾಗಿದ್ದು ಅನೇಕ ಚಲನಚಿತ್ರ ಗೀತೆಗಳನ್ನು, ಗಜಲ್‌ಗಳನ್ನು ಹಾಡಿದ್ದಾರೆ. ಹಲವಾರು ಗಜಲ್ ಅಲ್ಬಮ್‌ಗಳನ್ನು ಹೊರತಂದಿದ್ದಾರೆ.

ಲೆಸ್ಲಿ ಸಂಗೀತ ರಚನಕಾರರು ಮತ್ತು ಗಿಟಾರ್ ವಾದಕರು. ಆಶಾ ಭೊಸ್ಲೆ ಹಾಗೂ ಆಲಿಶ ಚಿನಾಯ್ ಸಂಗಡ ಕೆಲಸ ಮಾಡಿದ್ದಾರೆ. ಪಾಶ್ಚಾತ್ಯ ಮತ್ತು ಶಾಸ್ತ್ರೀಯ ಸಂಗೀತವನ್ನು ಮೇಳೈಸಿ ರಚಿಸಿರುವ ಫ್ಯೂಶನ್ ರೀತಿಯ ಗೀತೆಗಳು ಇಂದಿಗೂ ಕೇಳಿಬರುತ್ತವೆ. 1996ರ ಅಕ್ಟೌಬರ್ನಲ್ಲಿ ಹೊರಬಂದ ಅವರದೇ ಹೆಸರಿನ ಲಿಕಲೋನಿಯಲ್ ಕಸಿನ್ಸ್ಳಿ ಗೆ ಲಿಎಮ್ ಟಿ ವಿ ಏಶಿಯಾ ವ್ಯೂಯರ್ಸ್ ಛಾಯ್ಸ್ ಮತ್ತು ಯು ಎಸ್ ಬಿಲ್ಬೋರ್ಡ್ಸ್ ವ್ಯೂಯರ್ಸ್ ಅವಾರ್ಡ್ ಸಿಕ್ಕಿತು. ಅಂದಿನ ದಾಖಲೆಗಳನ್ನು ಮುರಿದ ಈ ಆಲ್ಬಮ್‌ನ ಹಿಂದೆಯೇ ಮತ್ತೆರಡು ಆಲ್ಬಮ್‌ಗಳು -ವೇ ವಿ ಡು ಇಟ್ ವಿತ್ ಯು ಮತ್ತು ಆತ್ಮ -ರಚಿತವಾದವು.

ಉಸ್ತಾದ್ ವಾಸಿಫುದ್ದೀನ್ ದಾಗರ್:ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಧ್ರುಪದ್ ಗಾಯನ ಕಲಾವಿದ ಉಸ್ತಾದ್ ವಾಸಿಫುದ್ದೀನ್ ದಾಗರ್ ತಾನಸೇನರಿಗೆ ಗುರುವಾಗಿದ್ದ ಸ್ವಾಮಿ ಹರಿದಾಸ್ ದಾಗರ್ ಅವರ ದೀರ್ಘ ಪರಂಪರೆಗೆ ಸೇರಿದವರು.

ಉಸ್ತಾದ್ ದಾಗರರ ಸಂಗೀತ ಶಿಕ್ಷಣ ಅವರ ತಂದೆ ಹಾಗೂ ಚಿಕ್ಕಪ್ಪನವರಲ್ಲಿ ನಡೆದು, ಇಬ್ಬರ ಶೈಲಿಯೂ ಇವರಲ್ಲಿ ಕೂಡಿ, ಎರಡನ್ನೂ ಮೀರಿಸುವ ಹೊಸದೊಂದು ಶೈಲಿ ಇವರದಾಯಿತು. ಇವರ ಎಲ್ಲ ಸಂಗೀತ ಕಾರ್ಯಕ್ರಮಗಳಲ್ಲಿ ಈ ನವೀನತೆ ವಿಜೃಂಭಿಸಿದೆ.

ಉಸ್ತಾದ್ ವಾಸಿಫುದ್ದೀನ್ ದಾಗರ್ ದೇಶ ವಿದೇಶಗಳಲ್ಲಿ ತಮ್ಮ ಗಾಯನ ಪ್ರಸ್ತುತಪಡಿಸಿದ್ದಾರೆ. ಯುನೆಸ್ಕೊ ಪರವಾಗಿ ಫ್ರಾನ್ಸ್‌ನಲ್ಲಿ 2001ರಲ್ಲಿ ವರ್ಲ್ಡ್ ಫೆಸ್ಟಿವಲ್ ಆಫ್ ಸೇಕ್ರೆಡ್ ಮ್ಯೂಸಿಕ್‌ನ ಅಂಗವಾಗಿ ದಲೈಲಾಮಾದಲ್ಲಿ ಭಾಗವಹಿಸಿದ್ದರು.

Share this Story:

Follow Webdunia kannada