Select Your Language

Notifications

webdunia
webdunia
webdunia
webdunia

ಬುಧವಾರ ದೇಶಾದ್ಯಂತ ಗಣೇಶೋತ್ಸವ ಸಂಭ್ರಮ

ಬುಧವಾರ ದೇಶಾದ್ಯಂತ ಗಣೇಶೋತ್ಸವ ಸಂಭ್ರಮ
WD
ಗಣಪತಿ ಹಿಂದೂ ಧರ್ಮದ ಎಲ್ಲಾ ಅನುಯಾಯಿಗಳಲ್ಲೂ ಬಹಳ ಜನಪ್ರಿಯವಾದ ದೇವತೆ. ಬದುಕಿನ ವಿಘ್ನಗಳನ್ನು ನಿವಾರಿಸುವ ದೇವನಾಗಿರುವುದರಿಂದ ಎಲ್ಲಾ ವರ್ಗದ ಜನಕ್ಕೂ ಬೇಕಾದವನು. ಜನ ಗಣಪತಿಯನ್ನು ಪೂಜಿಸುವುದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ವರಪ್ರದಾತ ಎಂದು ಹಾಗೂ ತಮ್ಮ ಎಲ್ಲಾ ವ್ಯವಹಾರಗಳಲ್ಲೂ ಜಯ ಅಥವಾ ಸಿದ್ದಿಯನ್ನು ಕರುಣಿಸುವ ಸಿದ್ದಿ ಎಂದು ಯಾವ ಕಾರ್ಯದ ಆರಂಭ ಮಾಡುವಾಗಲೂ, ಗಣಪತಿಗೆ ಅಗ್ರಪೂಜೆ, ಸಮಗ್ರಜ್ಞಾನವನ್ನೂ ವಿವೇಕವನ್ನೂ, ಸಾಹಿತ್ಯಲಲಿತ ಕಲೆಗಳಲ್ಲಿ ಕುಶಲತೆಯನ್ನು ನೀಡುವ ದೇವನೂ ಕೂಡ ಗಣಪತಿ. ಆದುದರಿಂದಲೇ ಗಣಪತಿ ಚತುರ್ಥಿ ವ್ರತ ಅಥವಾ ಗಣೇಶೋತ್ಸವಕ್ಕೆ ಅತ್ಯಂತ ಮುಖ್ಯ ಸ್ಥಾನವಿದೆ.

ಪ್ರತೀ ವರ್ಷ ಬಾದ್ರಪದಮಾಸದ ಶುಕ್ಲ ಚತುರ್ಥಿಯಿಂದ, ಚತುರ್ದಶಿವರೆಗೆ (ಅನಂತ ಪದ್ಮನಾಭ ವ್ರತ) ದೇಶಾದಾದ್ಯಂತ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ನಿಜಬಾದ್ರಪದ ಶುಕ್ಲ ಚತುರ್ಥಿ, ಸೆಪ್ಟೆಂಬರ್ 19 ರಂದು ಬುದವಾರ ಬಂದಿದ್ದು, ಗಣಪತಿ ವ್ರತ ಪ್ರಾರಂಭವಾಗಲಿದ್ದು, ಚತುರ್ದಶಿ (ಅನಂತ ಪದ್ಮನಾಭ ವ್ರತ) ಸೆಪ್ಟೆಂಬರ್ 29ನೇ ಶನಿವಾರ ದವರೆಗೆ ಒಟ್ಟು 11 ದಿವಸಗಳು ವ್ರತನಡೆಯುತ್ತದೆ. ಮುಖ್ಯವಾಗಿ ಈ ಪವಿತ್ರ 11 ದಿನವಸಗಳವರೆಗೆ ಗಣಪತಿಯ ಪೂಜಾವಿಧಿಗಳನ್ನು ಮಾಡಿದಾಗ, ವಿಘ್ನಗಳನ್ನು ನಿವಾರಿಸಿ, ಸುಖ-ಸಂತೋಷವನ್ನು ನೀಡುತ್ತಾನೆ. ಈ 11 ದಿವಸಗಳಲ್ಲೂ ಪೂಜಾವಿಧಿಗಳನ್ನು ಮಾಡಲು ಕೆಲಸದ ಒತ್ತಡಗಳಿಂದ, ಸಮಯದ ಅಭಾವದಿಂದ, ತಾಳ್ಮೆ ಇಲ್ಲದಿರುವುದರಿಂದ ಹಾಗೂ ಇತರೆ ಕಾರಣಗಳಿಂದ ಸಾಧ್ಯವಾಗುವುದಿಲ್ಲ.

ಆದ್ದರಿಂದ ಕನಿಷ್ಟ 2 ದಿವಸಗಳಾದರೂ ಈ ವಿಶೇಷ ದಿವಸಗಳಲ್ಲಿ ಪೂಜಾ ವಿಧಿಗಳನ್ನು ಮಾಡಿದರೆ. ಸಾಕಾಗುವುದು. ಜ್ಯೋತಿಷ್ಯದ ಪ್ರಕಾರ. ಕುಂಡಲಿಯಲ್ಲಿ ಲಗ್ನದಿಂದ ಅಷ್ಟಮಸ್ಥಾನ ವಿಘ್ನವನ್ನುಂಟುಮಾಡುವ ರಾಶಿ, ಚತುರ್ಥಸ್ಥಾನ ಸುಖ. ಸಂತೋಷ ಸ್ಥಾನವಾಗಿದೆ. ವಿಘ್ನವನ್ನು ಹೋಗಲಾಡಿಸಿ, ಸುಖ ಸಂತೋಷವನ್ನು ವೃದ್ದಿಮಾಡಲು, ಆಯಾಯವ್ಯಕ್ತಿಗಳ ಕುಂಡಲಿಯಲ್ಲಿ ಲಗ್ನದಿಂದ ಅಷ್ಟಮ ಸ್ಥಾನಾಧಿಪತಿಯ ವಾರದ ದಿವಸ ಸಕಲವಿಘ್ನಗಳನ್ನು ನಿವಾರಿಸಲು ಮತ್ತು ಚತುರ್ಥ ಸ್ಥಾನದಪತಿಯ ವಾರದ ದಿವಸ, ಹೆಚ್ಚಿನ ಸುಖ, ಸಂತೋಷವನ್ನು ನೀಡಲು ಈ 2 ದಿವಸಗಳಾದರೂ ಗಣಪತಿಯ ಪೂಜಾವಿಧಿಗಳನ್ನು ಮಾಡಲೇಬೇಕಾಗುತ್ತದೆ.

ಉದಾಹರಣೆಗೆ ಮೇಷಲಗ್ನದವರಿಗೆ, ಸುಖ ಸಂತೋಷವನ್ನು ನೀಡುವ ಚತುರ್ಥರಾಶಿ ಕಟಕರಾಶಿಯಾಗಿದ್ದು ಅಧಿಪತಿ ಚಂದ್ರನಾಗಿರುವುದರಿಂದ ಚಂದ್ರನ ವಾರ ಸೋಮವಾರ ಮತ್ತು ಅಷ್ಟಮಸ್ಥಾನ ವಿಘ್ನವನ್ನುಂಟುಮಾಡುವ ರಾಶಿ ವೃಶ್ಚಿಕ ರಾಶಿಯಾಗಿದ್ದು, ಅಧಿಪತಿ ಕುಜನಾಗಿರುವುದರಿಂದ ಕುಜನವಾರ ಮಂಗಳವಾರವಾಗಿರುವುದರಿಂದ ಈ ಮೇಷಲಗ್ನದವರು ಸೋಮವಾರ ದಿವಸ, ಸುಖ ಸಂತೋಷ ವೃದ್ದಿಗಾಗಿ ಮತ್ತು ಮಂಗಳವಾರದ ದಿವಸ ವಿಘ್ನಗಳನ್ನು ನಿವಾರಿಸಲು ಈ ಎರಡು ದಿವಸಗಳಲ್ಲಿ ಗಣಪತಿಯ ಪೂಜಾವಿಧಿಗಳನ್ನು ಮಾಡಬೇಕು. ಕ್ರಮವಾಗಿ 12 ಲಗ್ನದವರ ಚತುರ್ಥಸ್ಥಾನ ಮತ್ತು ಅಷ್ಟಮ ಸ್ಥಾನದ ಅಧಿಪತಿಗಳ ವಾರಗಳನ್ನು ಸುಲಭವಾಗಿ ತಿಳಿದು ಈ 2 ದಿವಸಗಳಂದು ಗಣಪತಿ ಪೂಜಾವಿಧಿಗಳನ್ನು ನೆರವೇರಿಸಲು ಈ ಕೆಳಗೆ ಕೊಡಲಾಗಿದೆ.

ಮೇಷ ಲಗ್ನ: ಸೋಮವಾರ - ಮಂಗಳವಾರ
ವೃಷಭ ಲಗ್ನ: ಭಾನುವಾರ - ಗುರುವಾರ
ಮಿಥುನ ಲಗ್ನ: ಬುಧವಾರ - ಶನಿವಾರ
ಕಟಕ ಲಗ್ನ: ಶುಕ್ರವಾರ - ಶನಿವಾರ
ಸಿಂಹ ಲಗ್ನ: ಮಂಗಳವಾರ - ಗುರುವಾರ
ಕನ್ಯಾ ಲಗ್ನ: ಗುರುವಾರ - ಮಂಗಳವಾರ
ತುಲ ಲಗ್ನ: ಶನಿವಾರ - ಶುಕ್ರವಾರ
ವೃಶ್ಚಿಕ ಲಗ್ನ: ಶನಿವಾರ - ಬುಧವಾರ
ಧನ ಲಗ್ನ: ಗುರುವಾರ - ಸೋಮವಾರ
ಮಕರ ಲಗ್ನ: ಮಂಗಳವಾರ - ಭಾನುವಾರ
ಕುಂಭ ಲಗ್ನ: ಶುಕ್ರವಾರ - ಬುಧವಾರ
ಮೀನ ಲಗ್ನ: ಬುಧವಾರ - ಶುಕ್ರವಾರ

ಆರ್. ಸೀತಾರಾಮಯ್ಯ,
ಜೋತೀಷ್ಕರು,
ಮೋ: 94490 48340
ಪೋನ್: 08182-227344

Share this Story:

Follow Webdunia kannada