Webdunia - Bharat's app for daily news and videos

Install App

ವಿ. ಸೀತಾರಾಮಯ್ಯ

Webdunia
' ವೀಸಿ' ಎಂಬ ಹೆಸರಿನಲ್ಲಿ ಕನ್ನಡ ಸಾಹಿತ್ಯದಲ್ಲಿ ಹೆಸರು ಪಡೆದಿರುವ ವಿ. ಸೀತಾರಾಮಯ್ಯ(1899-1983) ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ಬೂಧಿಗೆರೆಯಲ್ಲಿ.

ಹೆಸರಾಂತ ಪ್ರಾಧ್ಯಪಕರಾಗಿದ್ದ ವೀಸಿ ಅವರು ವಿವಿಧ ಕಾಲೇಜಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಕೊನೆಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ ನಿವೃತ್ತರಾದರು

ನಿವೃತ್ತಿಯ ನಂತರವು ಆಕಾಶವಾಣಿಯಲ್ಲಿ ಮತ್ತು ಹೊನ್ನಾವರದ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದರು.

ವೀಸಿ ಅವರದು ಬಹುಮುಖ ಪ್ರತಿಭೆ. ಪ್ರಸಿದ್ದ ಕವಿ ಮಾತ್ರವಲ್ಲದೇ ಉತ್ತಮ ವಿಮರ್ಶಕರು, ನಾಟಕಕಾರರು ಹಾಗೂ ಪ್ರಬಂಧಕಾರರೆಂದು ಅವರು ಹೆಸರು ಪಡೆದಿದ್ದಾರೆ. '

ಪಂಪಾಯಾತ್ರೆ'ಅವರ ಮೊದಲ ಕೃತಿ. ಇದು ಪ್ರವಾಸ ಸಾಹಿತ್ಯದ ಪ್ರಕಾರದಲ್ಲಿ ಮೊತ್ತ ಮೊದಲಿನದೆಂಬ ಕೀರ್ತಿಯನ್ನು ಪಡೆದಿದೆ.ಅದುವರೆಗೆ ಈ ಪ್ರಕಾರದಲ್ಲಿ ಆಧುನಿಕ ಶೈಲಿಯಲ್ಲಿ ಯಾವುದೇ ಪ್ರವಾಸಕಥನ ಕನ್ನಡದಲ್ಲಿ ಬಂದಿರಲಿಲ್ಲ.

ಗೀತೆಗಳು' ವೀಸಿಯವರ ಭಾವಗೀತೆಗಳ ಸಂಗ್ರಹ. 'ಮೃಗಶಾಲೆಯ ಸಿಂಹಗಳು' 'ಮನೆ ತುಂಬಿಸುವುದು' 'ಗಡಿದಾಟು' 'ಶಿಲ್ಪಿ' 'ಕ್ರೋಧ ಕೇತನ' ಮುಂತಾದವು ಅವರ ಪ್ರಸಿದ್ದ ಕವನಗಳು. ಇವುಗಳಲ್ಲಿ ವೀಸಿಯವರ ಸ್ವತಂತ್ರ ಮನೋಭಾವವನ್ನು ಕಾಣಬಹುದು.

ಆರ್ಥವಿಲ್ಲದ ಹಳೆಯ ಕಂದಾಚಾರಗಳಿಗೆ ಅವರು ಬೆಲೆ ನೀಡುತ್ತಿರಲಿಲ್ಲ. ಸದಾ ತಮ್ಮ ಓದುಗರನ್ನು ದೃಷ್ಟಿಯಲ್ಲಿರಿಸಿಕೊಂಡು ಸಾಹಿತ್ಯವನ್ನು ರಚಿಸುತ್ತಿದ್ದರು.

ವಿಮರ್ಶೆಯ ಕ್ಷೇತ್ರದಲ್ಲಿ ವೀಸಿಯವರದು ದೊಡ್ಡ ಹೆಸರು. 'ಸಾಹಿತ್ಯ ವಿಮರ್ಶೆಗಳಲ್ಲಿ ಅರ್ಥ ಮತ್ತು ಮೌಲ್ಯ' ಅವರ ಪ್ರಸಿದ್ದವಾದ ವಿಮರ್ಶಾ ಕೃತಿ. ಹಾಗೇಯೇ 'ಆಗ್ರಹ' 'ಚ್ಯವನ' 'ಶ್ರೀಶೈಲ ಶಿಖರ' ಅವರ ಪ್ರಸಿದ್ದ ನಾಟಕಗಳು. ಆರ್ಥಿಕ ಕ್ಷೇತ್ರಕ್ಕೆ ಅವರ ಕಾಣಿಕೆ 'ಹಣದ ಪ್ರಪಂಚ' 'ಸತ್ಯಮತ್ತು ಮೌಲ್ಯ' ಎಂಬ ಕೃತಿಯಲ್ಲಿ ವೀಸಿಯವರ ತಾತ್ವಿಕ ಚಿಂತನೆ ಹರಿದಿದೆ.

ಪತ್ರಿಕಾ ಕ್ಷೇತ್ರದಲ್ಲಿ ವೀಸಿಯವರು ದುಡಿದಿದ್ದಾರೆ. ಪ್ರಬುದ್ಧ ಕರ್ನಾಟಕದ ಸಂಪಾದಕರಾಗಿ ಉತ್ತಮ ಕೆಲಸ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ನಿಕಟ ಸಂಪರ್ಕವಿರಿಸಿಕೊಂಡಿದ್ದ ವೀಸಿಯವರು 'ಕನ್ನಡ ನುಡಿ'ಯ ಸಂಪಾದಕರಾಗಿ ಅದರ ಪ್ರಗತಿಗೆ ಕಾರಣವಾಗಿದ್ದಾರೆ.

ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರಾಗಿದ್ದ ವೀಸಿಯವರು ಇಂಗ್ಲಿಷಿನಲ್ಲಿಯೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಪಂಪ ವಾಲ್ಮಿಕಿ, ರಾಮಾಯಣ, ಪುರಂದರದಾಸ, ಎಂ.ವಿಶ್ವೇಶ್ವರಯ್ಯ ಮುಂತಾದವುಗಳು ಅವುಗಳಲ್ಲಿ ಮುಖ್ಯವಾಗಿವೆ.

ವೀಸಿಯವರ 'ಅದಲು ಬದಲು' ಕವನ ಸಂಕಲನಕ್ಕೆ 1973ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ಮತ್ತು 'ಮಹನೀಯರು' ಕೃತಿಗೆ ರಾಜ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ವೀಸಿಯವರ ಸಮಗ್ರ ಕೃತಿಗಳಿಗೆ ಮನ್ನಣೆ ನೀಡಿ ಮೈಸೂರು ವಿಶ್ವವಿದ್ಯಾಲಯ ಇವರಿಗೆ 1976ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು.

ಕುಮಟಾದಲ್ಲಿ ನಡೆದ 36 ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ವೀಸಿಯವರು ಕನ್ನಡದ ಒಬ್ಬ ಪ್ರಬುದ್ಧ ಲೇಖಕರೆಂದು ಹೆಸರು ಗಳಿಸಿದವರು.

ಡಾ. ವಿ.ಗೋಪಾಲಕೃಷ್ಣ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments