Webdunia - Bharat's app for daily news and videos

Install App

ಡಾ.ವಿ.ಕೃ.ಗೋಕಾಕ್‌

ಇಳಯರಾಜ
ಕನ್ನಡ ಸಾಹಿತ್ಯಲೋಕದ ದಿಗ್ಗಜರಲ್ಲಿ ಡಾ.ವಿ.ಕೃ.ಗೋಕಾಕ್‌ ಒಬ್ಬರು. ಇವರು ಸಾಹಿತ್ಯ ಕ್ಷೇತ್ರದಲ್ಲಿಯಂತೆಯೇ ಭಾಷಾ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದವರು.

ಕನ್ನಡ ಸಾಹಿತ್ಯ ಚಳುವಳಿಗಳಲ್ಲೊಂದಾದ ನವೋದಯ ಕಾಲದ ಸಾಹಿತ್ಯಕಾರರಲ್ಲಿ ಪ್ರಮುಖರಿವರು. ಕವಿ, ನಾಟಕಕಾರ, ಕಾದಂಬರಿಕಾರ, ವಿಮರ್ಶಕ, ಕಥೆಗಾರ ಮಂತಾದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೈಯಾಡಿಸಿದವರು;'ವಿನಾಯಕ' ಎಂಬ ಕಾವ್ಯ ನಾಮ ಹೊಂದಿದ್ದರು. ಶಿಕ್ಷಕ, ಆಡಳಿತಗಾರರಾಗಿ ವೃತ್ತಿ ಜೀವನ ನಡೆಸಿದವರು..

ವಿನಾಯಕ ಕೃಷ್ಣ ಗೋಕಾಕ್‌ ಅವರು ವಿ.ಕೃ.ಗೋಕಾಕ್‌ ಎಂದೇ ಸುಪರಿಚಿತರಾಗಿದ್ದರು. ಈಗ ಹಾವೇರಿ ಜಿಲ್ಲೆಯ ಭಾಗವಾಗಿರುವ ಸವಣೂರಿನ ಲ್ಲಿ 1909 ಆಗಸ್ಟ್ 9ರಂದು ಜ್ಯೋತಿಷಿ ಕೃಷ್ಣರಾಯ ಹಾಗೂ ಸುಂದರಮ್ಮ ದಂಪತಿಯ ಮಗನಾಗಿ ಜನಿಸಿದರು. ಬಾಲ್ಯಕಾಲದಲ್ಲೇ ಇವರು ಗಳಗನಾಥರ ಕಾದಂಬರಿಗಳಿಂದ ಪ್ರಭಾವಿತರಾಗಿದ್ದರು. ಪ್ರಾಥಮಿಕ ವಿದ್ಯಾಭ್ಯಾಸದ ಬಳಿಕ ಇವರು ಧಾರವಾಡದ ಕರ್ನಟಕ ವಿಶ್ವವಿದ್ಯಾಲಯದಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಮುಗಿಸಿದರು.

ಇಂಗ್ಲಿಷ್‌ ಸಾಹಿತ್ಯದಲ್ಲಿ ಅಪಾರ ಅನುಭವವನ್ನು ಪಡೆದಿದ್ದ ಗೋಕಾಕರು, ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದವರು ಬಳಿಕ, ಕರ್ನಾಟಕ ವಿಶ್ವ ವಿದ್ಯಾಲಯದ ಉಪಕುಲಪತಿಗಳಾಗಿ, ಸಿಮ್ಲಾದ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಅಡ್ವಾನ್ಸ್ ಸ್ಟಡೀಸ್‌ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಭಾರತೀಯ ಜ್ಞಾನ ಪೀಠ ಪ್ರಶಸ್ತಿ ಸಮಿತಿಯ ಅಧ್ಯಕ್ಷರಾಗಿ , ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿಯೂ ಸಾಹಿತ್ಯಸೇವೆಗಾಗಿ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದ ಡಾ.ವಿ.ಕೃ.ಗೋಕಾಕರು ಸೇವೆ ಸಲ್ಲಿಸಿದ್ದರು. ರಾಜ್ಯ ಭಾಷಾ ನೀತಿಯನ್ನು ಕುರಿತು ಚರ್ಚಿಸಲು ರಚಿಸಲಾದ ಸಮಿತಿಯಲ್ಲಿ ನೇಮಕಗೊಂಡು ಕನ್ನಡಕ್ಕೆ ಅಗ್ರ ಸ್ಥಾನಮಾನ ನೀಡುವಲ್ಲಿ ಶ್ರಮಿಸಿದವರು. ಆ ಬಳಿಕದ ಕನ್ನಡಕ್ಕಾಗಿ ನಡೆದ ಹೋರಾಟ ಗೋಕಾಕ್‌ ಚಳುವಳಿ ಎಂದೇ ಹೆಸರು ಪಡೆಯಿತು.

ಡಾ.ವಿ.ಕೃ.ಗೋಕಾಕರಿಗೆ ಭಾರತದ ಶ್ರೇಷ್ಠತಮ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ಲಭಿಸಲು ಕಾರಣವಾದ ಕೃತಿ 'ಭಾರತ ಸಿಂಧು ರಶ್ಮಿ' ಎಂಬ ಮಹಾಕಾವ್ಯ. ಈ ಮಹಾಕಾವ್ಯವು ಎರಡು ಸಂಪುಟಗಳಲ್ಲಿದ್ದು , 12 ಖಂಡಗಳನ್ನು ಹೊಂದಿದೆ.

ಡಾ. ಗೋಕಾಕರ ಇತರ ಕೃತಿಗಳೆಂದರೆ- ಸಮುದ್ರಗೀತಗಳು, ದ್ಯಾವಾಪೃಥಿವಿ, ಕಲೋಪಾಸಕ, ಬಾಳದೇಗುಲದಲ್ಲಿ, ಹಿಗ್ಗು, ಅಭ್ಯುದಯ,ಉಗಮ, ಪೂರ್ಣನಾಭ, ನವ್ಯಕವತೆಗಳು,ಪಯಣ, ತ್ರಿವಿಕ್ರಮರ ಆಕಾಶಗುಂಟೆ, ಮುಂತಾದ ಕವನ ಸಂಕಲನಗಳು.

ಸಮುದ್ರದಂಡೆಯಿಂದ, ಸಮುದ್ರದೀಚೆಯಿಂದ, ಇಂದಿಲ್ಲ ನಾಳೆ ಮುಂತಾದ ಪ್ರವಾಸ ಕಥನಗಳು. ವಿಮರ್ಶಕ ವೈದ್ಯ, ಯುಗಾಂತರ, ಮುನಿದಮಾರಿ, ಜನನಾಯಕ ನಾಟಕಗಳು, ಇಂದಿನ ಸಾಹಿತ್ಯದ ಗೊತ್ತುಗುರಿಗಳು,ಕಲೆಯ ನೆಲೆ, ಕವಿ ಕಾವ್ಯ ಮಹೋನ್ನತಿ, ನವ್ಯತೆ ಹಾಗೂ ಕಾವ್ಯ ಜೀವನ, ಸೌಂದರ್ಯ ಮೀಮಾಂಸೆ ಮುಂತಾದ ಕೃತಿಗಳು ಹಾಗೂ ಸಮರಸವೇ ಜಿವನ ಎಂಬ ಕಾದಂಬರಿಯನ್ನೊಳಗೊಂಡಿವೆ.

ನವೋದಯದ ಕನಸುಗಾರರಾಗಿದ್ದ ಡಾ.ವಿ.ಕೃ.ಗೋಕಾಕ್‌ ದೇಶದ ಪದ್ಮಪ್ರಶಸ್ತಿ ಪಡೆದವರು. ಇವರ ಪತ್ನಿ ಶಾರದಾ ಬಾಯಿ. ಸಾಹಿತ್ಯಿಕವಾಗಿ ಸಾಮಾಜಿಕವಾಗಿ ಸಮೃದ್ಧ ಜೀವನವನ್ನು ಕಂಡಿದ್ದ ವಿ.ಕೃ.ಗೋಕಾಕರು 1992ರಲ್ಲಿ ವಿಧಿವಶರಾದರು .

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments