Webdunia - Bharat's app for daily news and videos

Install App

ಕಿಸಾನ್ ಸಮ್ಮಾನ್ ಯೋಜನೆ ಪುಟಗೋಸಿ ಎಂದ ಸಂಸದ

Webdunia
ಶನಿವಾರ, 30 ಮಾರ್ಚ್ 2019 (09:30 IST)
ಚಿಕ್ಕಬಳ್ಳಾಪುರ : ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನೀಡಲಾಗುತ್ತಿದ್ದ 6 ಸಾವಿರ ರೂ ಪುಟಗೋಸಿಗೆ ಹೋಲಿಸುವುದರ ಮೂಲಕ ಸಂಸದ ವೀರಪ್ಪ ಮೊಯ್ಲಿ ಟೀಕೆ ಮಾಡಿದ್ದಾರೆ.

ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ, ಯುಪಿಎ ಆಡಳಿತವಾಧಿಯಲ್ಲಿದ್ದ ನರೇಗಾ ಯೋಜನೆಯನ್ನ ಜಾರಿ ಮಾಡಿದ್ದೆವು. ಪ್ರತಿಯೊಬ್ಬ ಕೂಲಿಯಾಳುವಿಗೆ ಒಂದು ದಿನಕ್ಕೆ 212 ರೂ. ನೀಡುತ್ತಿದ್ದೇವು. ಒಂದು ಕುಟುಂಬದಲ್ಲಿ 5 ಮಂದಿ ಇದ್ದರೆ 1,500 ರೂ. ಹಣ ಸಿಗುತಿತ್ತು. ಆದರೆ ದೇಶದ ಪ್ರಧಾನಿ ಮೋದಿ ಮೊನ್ನೆ ಜಾರಿ ಮಾಡಿದ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಪುಟಗೋಸಿ 6 ಸಾವಿರ ರೂ. ಹಣ ಕೊಡುತ್ತಾರಂತೆ. ಅದು ಆರು ಕಂತಿನಲ್ಲಿ ಹಾಕುತ್ತಾರಂತೆ  ಎಂದು ವ್ಯಂಗ್ಯವಾಡಿದ್ದಾರೆ.

 

ಅಲ್ಲದೇ ಮೋದಿ ದುರ್ಬಲ ಪ್ರಧಾನಿಯಾಗಿದ್ದು, ದೇಶದ ಬಗ್ಗೆ ಪಾಕಿಸ್ತಾನದವರಿಗೆ ಭಯ ಹೋಗಿ ಬಿಟ್ಟಿದೆ. ಸರ್ಜಿಕಲ್ ಸ್ಟ್ರೈಕ್ ನಲ್ಲಿ ಎಷ್ಟು ಉಗ್ರಗಾಮಿಗಳು ಸತ್ತಿದ್ದಾರೆಂದು ಲೆಕ್ಕ ಕೊಡಲಿಕ್ಕೆ ಆಗುತ್ತಿಲ್ಲ. ಆದರೆ ಸುಮ್ಮನೆ ಬಡಾಯಿ ಕೊಚ್ಚಿಕೊಳುತ್ತಾರೆ ಎಂದು ಕಿಡಿಕಾರಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments