Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಗೆ ಯಾರು ಮತ ಚಲಾಯಿಸುತ್ತಾರೆ ಎಂಬುದು ಪ್ರಧಾನಿ ಮೋದಿಗೆ ತಿಳಿಯುತ್ತದೆ- ಬಿಜೆಪಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ

ಕಾಂಗ್ರೆಸ್ ಗೆ ಯಾರು ಮತ ಚಲಾಯಿಸುತ್ತಾರೆ ಎಂಬುದು ಪ್ರಧಾನಿ ಮೋದಿಗೆ ತಿಳಿಯುತ್ತದೆ- ಬಿಜೆಪಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ
ಗುಜರಾತ್ , ಬುಧವಾರ, 17 ಏಪ್ರಿಲ್ 2019 (11:17 IST)
ಗುಜರಾತ್ : ಕಾಂಗ್ರೆಸ್ ಮತ ಚಲಾಯಿಸಿದರೆ ಪ್ರಧಾನಿ ಮೋದಿ ತಿಳಿಯುತ್ತದೆ ಎಂದು ಗುಜರಾತ್ ಬಿಜೆಪಿ ಶಾಸಕ ರಮೇಶ್ ಕಾತ್ರಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ದಹೋದ್ ಕ್ಷೇತ್ರದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮಾತನಾಡಿರುವ ರಮೇಶ್ ಕಾತ್ರಾ, ಬಾರಿ ಮತಗಟ್ಟೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುತ್ತಿದ್ದು, ಹೀಗಾಗಿ ಮೋದಿ ಅವರಿಗೆ ಯಾರು ಕಾಂಗ್ರೆಸ್ ಗೆ ಮತ ನೀಡಿದ್ದಾರೆ. ಯಾರು ಬಿಜೆಪಿಗೆ ಮತ ನೀಡಿದ್ದಾರೆ ಎಂಬುದು ತಿಳಿಯುತ್ತದೆ ಎಂದು ಹೇಳಿದ್ದಾರೆ.


ಅಲ್ಲದೆ ಈ ಸಿಸಿ ಕ್ಯಾಮರಾದಲ್ಲಿ ಭಾವಚಿತ್ರದ ಆಧಾರದ ಮೇರೆಗೆ ಬಿಜೆಪಿಗೆ ಮತ ಚಲಾಯಿಸಿದವರಿಗೆ ಉದ್ಯೋಗ ಸೇರಿದಂತೆ ಹಲವು ಸೌಕರ್ಯಗಳನ್ನು ನೀಡಲಾಗುವುದು. ಒಂದು ವೇಳೆ ಕಾಂಗ್ರೆಸ್ ಗೆ ಮತ ನೀಡಿದವರಿಗೆ ಯಾವುದೇ ಸಹಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.


ಇದು ವಿಪಕ್ಷಗಳ ಾಕ್ರೋಶಕ್ಕೆ ಕಾರಣವಾಗಿದ್ದು, ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸಚಿವೆಯ ಗುಣಗಾನ ಮಾಡಿದ ಕಾಂಗ್ರೆಸ್ ನಾಯಕ ಶಶಿತರೂರ್