ದೇವೇಗೌಡ- ಕುಮಾರಸ್ವಾಮಿಯ ನಡುವಿನ ಜಗಳ ಬೀದಿಗೆ ತಂದ ಬಿಜೆಪಿ ಶಾಸಕ

Webdunia
ಸೋಮವಾರ, 15 ಏಪ್ರಿಲ್ 2019 (10:22 IST)
ಬೆಂಗಳೂರು : ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರನ್ನು ಅವರ ಪುತ್ರ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮನೆಯಿಂದ ಆಚೆಗೆ ಹಾಕಿದ್ದರು ಎಂದು ಚಿಕ್ಕನಾಯಕನಹಳ್ಳಿ ಬಿಜೆಪಿ ಶಾಸಕ ಮಾಧುಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ತಂದೆ, ಮಗನ ನಡುವೆ ಭಿನ್ನಾಭಿಪ್ರಾಯವಾಗಿದ್ದ ಕಾರಣ ಕುಮಾರಸ್ವಾಮಿ ದೇವೇಗೌಡರನ್ನು ಮನೆಯಿಂದ ಹೊರಗೆ ಹಾಕಿದ್ದರು. ಕುಮಾರ ಪಾರ್ಕ್ ಬಳಿ ಬಾಡಿಗೆ ಮನೆಯೊಂದರಲ್ಲಿ ದೇವೇಗೌಡರು ವಾಸವಾಗಿದ್ದರು. ಆಗ ಅವರ ತಂದೆಗೆ ಊಟ ಕೊಟ್ಟಿದ್ದು ನಾವು, ಅವರ ಮಕ್ಕಳಲ್ಲ. ಆದರೆ ಈಗ ತಮ್ಮ ತಂದೆಯನ್ನೇ ಮನೆಯಿಂದ ಹೊರಹಾಕಿದ ಕುಮಾರಸ್ವಾಮಿ ನನ್ನ ಬಗ್ಗೆ ಮಾತನಾಡುತ್ತಾರೆ. ಕುಮಾರಸ್ವಾಮಿ ಈಗ ನನ್ನ ಬಳಿ ಬರಲಿ, ಯಾಕಪ್ಪ ನಿಮ್ಮ ಅಪ್ಪನನ್ನು ಹೊರಗೆ ಹಾಕಿದ್ದೆ ಎಂದು ಅವರಿಗೆ ಕೇಳುತ್ತೇನೆ ಎಂದು  ಮಾಧುಸ್ವಾಮಿ ಕಿಡಿಕಾರಿದ್ದಾರೆ.

 

ದೇವೇಗೌಡರು ಭಾಷಣ ಮಾಡುವಾಗ ಕಲ್ಲಲ್ಲಿ ಒಡೆದಿದ್ದರು. ನಾನು ಎದೆ ಕೊಟ್ಟು ನಿಂತಿದ್ದೆ. ಆಗ ಗೌಡರು ನನ್ನನ್ನು ತಬ್ಬಿಕೊಂಡು ಅತ್ತಿದ್ದರು. ನನ್ನ ಮಕ್ಕಳಾಗಿದ್ದರೂ ಈ ರೀತಿ ಏಟು ತಿನ್ನುತ್ತಿರಲಿಲ್ಲ ಎಂದು ಹೇಳಿದ್ದರು. ವಿ.ಎಸ್. ಉಗ್ರಪ್ಪ, ದೇವೇಗೌಡರ ಬೆನ್ನು ಉಜ್ಜುತ್ತಿದ್ದರು. ಗೌಡರ ಮಾನಸಿಕ ಪುತ್ರರೆಂದೇ ಹೇಳಲಾಗಿದ್ದ ಬಿ.ಎಲ್. ಶಂಕರ್ ಪಕ್ಷವನ್ನೇ ಬಿಟ್ಟರು. ಹೀಗೆ ಅನೇಕರು ದೂರವಾಗಿದ್ದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೂರು ರಾಷ್ಟ್ರಗಳ ಪ್ರವಾಸ: ಅಮ್ಮಾನ್‌ಗೆ ಆಗಮಿಸಿದ ಪ್ರಧಾನಿ ಮೋದಿ

ದೆಹಲಿ ದಟ್ಟ ಹೊಗೆ, ಮಂಜು: ಇಂದು 40 ವಿಮಾನಗಳು ರದ್ದು

ವಿಳಂಬವಿಲ್ಲ, ನಿರ್ಲಕ್ಷ್ಯವಿಲ್ಲ, ಸಾಬೂಬುಗಳನ್ನು ಹೇಳಲಿಲ್ಲ

ಕಾಂಗ್ರೆಸ್ ಸಮಾವೇಶದಲ್ಲಿ ಮೋದಿ ಸಮಾಧಿ ಬಗ್ಗೆ ಮಾತು: ಸಂಸತ್ ನಲ್ಲಿ ಸೋನಿಯಾ ಕ್ಷಮೆಗೆ ಬಿಜೆಪಿ ಪಟ್ಟು

ವಿಚಾರಣೆ ಬಿಟ್ಟು ದೆಹಲಿಯಿಂದ ತುರ್ತಾಗಿ ರಾಜ್ಯಕ್ಕೆ ವಾಪಾಸ್ಸಾದ ಡಿಕೆ ಶಿವಕುಮಾರ್, ಕಾರಣ ಗೊತ್ತಾ

ಮುಂದಿನ ಸುದ್ದಿ
Show comments