ಸೂರ್ಯ ಉದಯಿಸುವುದಕ್ಕೂ ಮುನ್ನವೇ ತೇಜಸ್ವಿ ಪ್ರಚಾರ

Webdunia
ಸೋಮವಾರ, 8 ಏಪ್ರಿಲ್ 2019 (18:03 IST)
ಹಬ್ಬದ ದಿನದಂದು ಭರ್ಜರಿ ಪ್ರಚಾರ ನಡೆಸಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಬಿಜೆಪಿ ಅಭ್ಯರ್ಥಿ ತೇಜಸ್ವಿ ಇಂದು ಸಹ ಸೂರ್ಯ ಉದಯಿಸುವುದಕ್ಕೂ ಮುನ್ನವೇ ಮತಯಾಚನೆಗೆ ಇಳಿದಿದ್ದರು. ಬೆಳಗ್ಗೆಯಿಂದಲೇ ಅಬ್ಬರದ ಪ್ರಚಾರದಲ್ಲಿ ಮಗ್ನರಾಗಿ ಮತದಾರರ ಗಮನ ಸೆಳೆದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ತೆರೆದ ವಾಹನದಲ್ಲಿ ಬೆಳಗ್ಗೆ 6 ಗಂಟೆಗೆ ಆರಂಭವಾದ ಚುನಾವಣಾ ರ್ಯಾಲಿಯು ರಾಜ್ ಕುಮಾರ್ ವಾರ್ಡ್, ಅಂಬೇಡ್ಕರ್ ಸ್ಟೇಡಿಯಂ, ಅಗ್ರಹಾರ ದಾಸರಹಳ್ಳಿ, ಗೋವಿಂದರಾಜನಗರ, ಅಮರಜ್ಯೋತಿನಗರ, ಕಾವೇರಿಪುರ, ಪಟ್ಟೇಗಾರ ಪಾಳ್ಯ, ಮೂಡಲಪಾಳ್ಯ, ನಾಗರಬಾವಿ, ಪ್ರಮುಖ ಬೀದಿಗಳಲ್ಲಿ ಮಿಂಚಿನ ಸಂಚಾರ ನಡೆಸಿದರು.

ತೇಜಸ್ವಿ ಸೂರ್ಯರವರಿಗೆ ಶಾಸಕ ವಿ.ಸೋಮಣ್ಣ,  ಮಾಜಿ ಮೇಯರ್ ಶಾಂತಕುಮಾರಿ, ಉಮೇಶ್ ಶೆಟ್ಟಿ, ಅರುಣ್ ಸೋಮಣ್ಣ, ಬಿಬಿಎಂಪಿ ಬಿಜೆಪಿ ಸದಸ್ಯರು ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದ್ದರು.

ತೇಜಸ್ವಿ ಸೂರ್ಯ ರವರಿಗೆ ಮಹಿಳೆಯರನ್ನು ಒಳಗೊಂಡಂತೆ, ಬಿಜೆಪಿ ಕಾರ್ಯಕರ್ತರು ನೂರಾರು ದ್ವಿಚಕ್ರ ವಾಹನಗಳಲ್ಲಿ ಬೈಕ್ ರ್ಯಾಲಿ ನಡೆಸುವ ಮೂಲಕ ಬೆಂಬಲ ಸೂಚಿಸಿದರು. 



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿಮ್ಮ ಮಗನೇ ಚಿನ್ನ ಕದ್ದಿದ್ದು ಎಂದಿದ್ದಕ್ಕೆ ಜೀವನೇ ತೆಗೆದ್ಬಿಟ್ಟ

ಇವರಿಗಿಂತ, ಇಂದಿರಾ ಗಾಂಧಿಗೆ ಧೈರ್ಯ ಜಾಸ್ತಿಯಾಗಿತ್ತು: ರಾಹುಲ್ ಗಾಂಧಿ ಕಿಡಿ

ಮಗಳ ಶವ ಮುಂದಿಟ್ಟು ಲಂಚಕ್ಕೆ ಬೇಡಿಕೆ: ತಂದೆಯ ಭಾವುಕ ಪೋಸ್ಟ್ ಬೆನ್ನಲ್ಲೇ ಪೊಲೀಸರಿಗೆ ಶಾಕ್‌

ಡೆಹ್ರಾಡೂನ್‌ನಲ್ಲಿ ಮೂರು ಆಭರಣ ಬಿಟ್ಟು ಬೇರೆ ಧರಿಸಿದ್ರೆ ಬೀಳುತ್ತೆ ₹50ಸಾವಿರ ದಂಡ

ಬಿಜೆಪಿ ಶಾಸಕ ರವಿಕುಮಾರ್ ಸಿಎಂ ಕಾರಿನಲ್ಲಿ ಇದ್ದಿದ್ದು ಯಾಕೆ: ನಿಜ ಕಾರಣ ಬಯಲು

ಮುಂದಿನ ಸುದ್ದಿ
Show comments