Publish Date: Fri, 16 May 2014 (16:06 IST)
Updated Date: Fri, 16 May 2014 (16:12 IST)
ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ಮತ್ತು ಬಿಜೆಪಿಯ ಬಿಎನ್ ಬಚ್ಚೇಗೌಡ ವಿರುದ್ಧ ಗೆಲ್ಲಲು ಹರಸಾಹಸ ಪಟ್ಟಿದ್ದಾರೆ. 'ಎತ್ತಿನಹೊಳೆ' ಯೋಜನೆಯನ್ನು ಜಾರಿಗೆ ತರುವ ಆಮಿಷ ಒಡ್ಡಿದ್ದ ವೀರಪ್ಪ ಮೊಯ್ಲಿ ತಮ್ಮ ಪ್ರಯತ್ನದಲ್ಲಿ ಯಶಸ್ಸು ಗಳಿಸಿದ್ದಾರೆ.
ಗೆಲ್ಲುವ ಹುಮ್ಮಸ್ಸಿನಿಂದ ಕಣಕ್ಕಿಳಿದಿದ್ದ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಮುಖಭಂಗ ಅನುಭವಿಸಿದ್ದಾರೆ. ಅತ್ತೂ ಕರೆದು ಮತದಾರರ ಸಹಾನುಭೂತಿಗೆ ಪ್ರಯತ್ನಿಸಿದ್ದ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಅವರಿಗೆ ವಿಧಾನಸಭೆಯೇ ಗಟ್ಟಿಯಾಗಿ ಉಳಿದಿದೆ.
ವೀರಪ್ಪ ಮೊಯ್ಲಿ ಎತ್ತಿನಹೊಳೆಯ ಆಸೆ ತೋರಿಸುವ ಮೂಲಕ ಮತದಾರರ ಮನವನ್ನು ಒಲಿಸಿಕೊಂಡು ಮತ ಗಿಟ್ಟಿಸಿದ್ದಾರೆ. ಆದರೆ ಎತ್ತಿನಹೊಳೆ ಯೋಜನೆ ಕಾರ್ಯಸಾಧ್ಯವಾಗುತ್ತದೆಯೇ ಎನ್ನುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ.