Select Your Language

Notifications

webdunia
webdunia
webdunia
webdunia

ಸಿದ್ದುಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆಯಿಲ್ಲ: ಬಿಜೆಪಿ

ಸಿದ್ದುಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆಯಿಲ್ಲ: ಬಿಜೆಪಿ
ಧಾರವಾಡ , ಶುಕ್ರವಾರ, 16 ಮೇ 2014 (18:31 IST)
ಕಾಂಗ್ರೆಸ್ ಸೋಲಿನ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಿನಾಮೆ ನೀಡಲಿ ಎಂದು ಪ್ರತಿಪಕ್ಷದ ನಾಯಕ ಜಗದೇಶ್ ಶೆಟ್ಟರ್ ಅವರು ಶುಕ್ರವಾರ ಹೇಳಿದ್ದಾರೆ.
 
ಫಲಿತಾಂಶದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಶೆಟ್ಟರ್, ನಿರೀಕ್ಷೆಯಂತೆ ಬಿಜೆಪಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲವು ಕಂಡಿದೆ. ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಆಡಳಿತ ವೈಫಲ್ಯಕ್ಕೆ ಜನರು ತಕ್ಕ ಉತ್ತರ ನೀಡಿದ್ದಾರೆ. ಆಸ್ಸಾಂ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಗೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಪದತ್ಯಾಗ ಮಾಡಲಿ ಎಂದಿದ್ದಾರೆ.
 
ಮೋದಿ ಪ್ರಧಾನಿಯಾದರೆ ದೇಶ ತೊರೆಯುವುದಾಗಿ ಕೆಲವರು ಹೇಳಿಕೆ ನೀಡಿದ್ದರು. ಈಗೇನು ಮಾಡಬೇಕು ಎಂಬುದು ಅವರ ವಿವೇಚನೆಗೆ ಬಿಟ್ಟಿದ್ದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಡೆದು ಹೋಗಿದ್ದ ಬಿಜೆಪಿ ಈ ಸಲ ಒಗ್ಗಟ್ಟಾಗಿ ಎಲ್ಲರ ಬಳಿ ಹೋಗಿದ್ದರ ಫಲಿತಾಂಶ ಇದು. ರಾಜ್ಯದಲ್ಲಿ ಮೋದಿ ಅಲೆ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಮೇಶ್ವರ ಹೇಳಿದ್ದರು. ಇದು ಅಲೆಯಲ್ಲ ಸುನಾಮಿ. ಯುಪಿಎ ಸರ್ಕಾರದ ವೈಫಲ್ಯ, ಕಾಂಗ್ರೆಸ್ ಬಗ್ಗೆ ಇದ್ದ ಆಕ್ರೋಶ ಹಾಗೂ ಮೋದಿ ಅಲೆಯ ಪರಿಣಾಮ ಬಿಜೆಪಿ ಜಯಭೇರಿ ಬಾರಿಸಿದೆ ಎಂದು ಶೆಟ್ಟರ್ ಹೇಳಿದರು.


ಚುನಾವಣೆ ಫಲಿತಾಂಶಕ್ಕಾಗಿ ಕ್ಲಿಕ್ಕಿಸಿ


http://elections.webdunia.com/karnataka-loksabha-election-results-2014.htm


Share this Story:

Follow Webdunia kannada