ಭಾವಿ ಪ್ರಧಾನಿ ನರೇಂದ್ರ ಮೋದಿಗೆ ದೆಹಲಿಯಲ್ಲಿ ಭವ್ಯ ಸ್ವಾಗತ
Publish Date: Sat, 17 May 2014 (15:31 IST)
Updated Date: Sat, 17 May 2014 (15:34 IST)
ಲೋಕಸಭೆ ಚುನಾವಣೆಯಲ್ಲಿ ಐತಿಹಾಸಿಕ ಜಯಗಳಿಸಿದ ಬಿಜೆಪಿಯ ಭಾವಿ ಪ್ರಧಾನಿ ನರೇಂದ್ರ ಮೋದಿ ದೆಹಲಿಗೆ ಆಗಮಿಸುತ್ತಿದ್ದಂತೆ ಸಾವಿರಾರು ಕಾರ್ಯಕರ್ತರು ಸಂತಸ ಸಂಭ್ರಮದಿಂದ ಸ್ವಾಗತಿಸಿದರು.
ಮೋದಿ ಗುಜರಾತ್‌ನಿಂದ ಇಂದು ಬೆಳಿಗೆ 11 ಗಂಟೆಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ನಿಲ್ದಾಣದ ಹೊರಗಡೆ ಬೆಳಿಗ್ಗೆಯಿಂದ ಕಾಯುತ್ತಿದ್ದ ಕಾರ್ಯಕರ್ತರು ಮೋದಿಯನ್ನು ಕಾಣುತ್ತಲೇ ಸಂತಸ ವ್ಯಕ್ತಪಡಿಸಿ ಬಿಜೆಪಿ ಕಚೇರಿಯವರೆಗೆ ಮೆರವಣಿಗೆಯಲ್ಲಿ ಸಾಗಿದರು.
ಮೋದಿ ನಮ್ಮ ಸಿಂಹ. ದೇಶದ ಜನತೆಗಾಗಿ ಕಾರ್ಯನಿರ್ವಹಿಸುತ್ತಾರೆ. ಅಭಿವೃದ್ಧಿಗಾಗಿ ಪ್ರತಿಯೊಬ್ಬ ಭಾರತೀಯನಿಗಾಗಿ ದುಡಿಯುತ್ತಾರೆ ಎಂದು ರಸ್ತೆಯ ಬದಿಯಲ್ಲಿರುವ ಅಂಗಡಿಯ ಮಾಲೀಕ ಓಂ ದತ್ತ್ ಘೋಷಣೆಗಳನ್ನು ಕೂಗಿದರು.
ಬ್ಲ್ಯೂ ಜಾಕೆಟ್ ಮತ್ತು ಶರ್ಟ್ ಧರಿಸಿದ್ದ ಮೋದಿ ಜನಸಮೂಹವನ್ನು ಕಂಡು ಕಾರಿನಿಂದ ಹೊರಬಂದು ಅಭಿಮಾನಿಗಳತ್ತ ಕೈ ಬೀಸಿದಾಗ ಅನೇಕ ಕಾರ್ಯಕರ್ತರು ಆ ದೃಶ್ಯವನ್ನು ಮೊಬೈಲ್‌ಗಳಲ್ಲಿ ಸೆರೆಹಿಡಿದರು.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೊಸ ಉದ್ಯೋಗ ಸೃಷ್ಠಿ, ಅಭಿವೃದ್ಧಿ ಮತ್ತು ಪಾರದರ್ಶಕ ಸರಕಾರ ನೀಡುವ ಭರವಸೆಗೆ ಸ್ಪಂದಿಸಿದ ಜನತೆ 30 ವರ್ಷಗಳ ನಂತರ ಮೊದಲ ಬಾರಿಗೆ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ್ದಾರೆ.
Rajesh patil
Publish Date: Sat, 17 May 2014 (15:31 IST)
Updated Date: Sat, 17 May 2014 (15:34 IST)