ಬಿಜೆಪಿ ಅಧ್ಯಕ್ಷ ಡಿ.ವಿ.ಸದಾನಂದ ಗೌಡರೊಂದಿಗಿನ ಮುನಿಸಿನಿಂದಾಗಿ ಪಕ್ಷದ ಟಿಕೆಟ್ ವಂಚಿತರಾದ ಮಾಜಿ ಬಿಜೆಪಿ ಶಾಸಕಿ ಶಕುಂತಳಾ ಶೆಟ್ಟಿಯವರು ಬಂಡಾಯ ಅಭ್ಯರ್ಥಿಯಾಗಿ ಪುತ್ತೂರು ಕ್ಷೇತ್ರವನ್ನೇ ಪ್ರತಿನಿಧಿಸಿದ್ದರೂ, ಬಿಜೆಪಿಯ ಅಧಿಕೃತ ಅಭ್ಯರ್ಥಿ ಮಲ್ಲಿಕಾ ಪ್ರಸಾದ್ ವಿರುದ್ಧ ಸೋಲನ್ನಪ್ಪಿದ್ದಾರೆ.
ಶಕುಂತಳಾ ಶೆಟ್ಟಿಯವರಿಗೆ ಮಾಜಿ ಶಾಸಕ ರಾಂ ಭಟ್ ಅವರು ಬೆಂಬಲ ನೀಡಿದ್ದರು. ಸದಾನಂದ ಗೌಡ ವಿರೋಧಿ ಬಿಜೆಪಿ ಕಾರ್ಯಕರ್ತರೂ ಶೆಟ್ಟಿಯವರ ಪರವಾಗಿ ನಿಂತಿದ್ದರು. ಟಿಕೆಟ್ ವಂಚಿತೆ ಎಂಬ ಅನುಕಂಪವೂ ಶಕುಅಕ್ಕನ ಕೈಹಿಡಿಯಲಿಲ್ಲ.
ಚುನಾವಣೆ ಘೋಷಣೆಯ ಬಳಿಕವಷ್ಟೆ ಪ್ರಸಿದ್ಧಿಗೆ ಬಂದ ಮಲ್ಲಿಕಾ ಪ್ರಸಾದ್ ಪ್ರಥಮ ಸ್ಫರ್ಧೆಯಲ್ಲೇ ಜಯಭೇರಿ ಹೊಡೆದಿದ್ದಾರೆ.
ಗೆದ್ದ ಬೇಬ್ಯಣ್ಣ
ಕಳೆದ ಚುನಾವಣೆಯಲ್ಲಿ ತನ್ನ ಸಮುದಾಯದ ನಾಗರಾಜ್ ಶೆಟ್ಟಿ ವಿರುದ್ಧ ಸೋಲುಂಡು ನೇಪಥ್ಯಕ್ಕೆ ಸರಿದಿದ್ದ ಮಾಜಿ ಸಾರಿಗೆ ಸಚಿವ ರಮಾನಾಥ ರೈ ಬಂಟ್ವಾಳ ಕ್ಷೇತ್ರದಿಂದ ಗೆದ್ದು ಬಂದಿದ್ದಾರೆ.