ಚುನಾವಣಾ ಫಲಿತಾಂಶದ ವೇಳೆ ಸಮ್ಮಿಶ್ರ ತೀರ್ಪು ಹೊರಬಿದ್ದುದೇ ಆದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕೆ ಎಂಬ ಆಯ್ಕೆಯನ್ನು ಜೆಡಿಎಸ್ ವರಿಷ್ಠ ದೇವೇಗೌಡ ಮುಕ್ತವಾಗಿಸಿದ್ದಾರೆ.
ಇದೀಗ ಪ್ರಾಥಮಿಕ ಅಂಶಗಳು ಮಾತ್ರ, ಸ್ಪಷ್ಟ ಚಿತ್ರಣ ದೊರೆತ ಬಳಿಕವಷ್ಟೆ ಈ ಕುರಿತು ಮಾತಾಡಬಹುದು ಎಂದು ಹೇಳಿದ್ದಾರೆ.
"ಬಿಜೆಪಿ ಅಥವಾ ಕಾಂಗ್ರೆಸ್- ಎರಡೂ ಪಕ್ಷದೊಂದಿಗೂ ಕೈಜೋಡಿಸಲು ನಾವು ಬಯಸುವುದಿಲ್ಲ. ನಿನ್ನೆಯೂ ಸಹ ಜೆಡಿಎಸ್ ಅಸ್ಪ್ರಶ್ಯ ಎಂಬುದಾಗಿ ಅವರು ಹೇಳಿದ್ದಾರೆ. ಕಾದು ನೋಡೋಣ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ತಮ್ಮ ಪಕ್ಷದ ಸೋಲಿಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ ಕುಮಾರಸ್ವಾಮಿ, ಆರಂಭದಿಂದಲೂ ಮಾಧ್ಯಮಗಳು ತಮಗೆ ವಿರುದ್ಧವಾಗಿ ಬರೆದಿವೆ ಎಂದು ಕುಮಾರ ಸ್ವಾಮಿ ಹೇಳಿದ್ದಾರೆ.
ಹಣ ಮತ್ತು ಹೆಂಡದ ಕಾರ್ಯ
ಮತದಾನ ಫಲಿತಾಂಶವು ಬಿಜೆಪಿಗೆ ಮುನ್ನಡೆಯ ಸುಳಿವು ನೀಡುತ್ತಿರುವಂತೆ, ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕರು, ಹಣ ಮತ್ತು ಹೆಂಡದ ಗೆಲುವು ಎಂದು ಆಪಾದಿಸಿದ್ದಾರೆ. ಕೆಲವು ಅರ್ಹಮತದಾರರಿಗೆ ಮತದಾನಕ್ಕೆ ಅವಕಾಶ ನೀಡದಿರುವುದು ಮುಂತಾದ ಅಂಶಗಳನ್ನು ಬೆಟ್ಟು ಮಾಡುತ್ತಿದ್ದಾರೆ.