Publish Date: Thu, 24 Apr 2008 (12:09 IST)
Updated Date: Thu, 24 Apr 2008 (12:08 IST)
ಬುಧವಾರ ರಾತ್ರಿ ಇಲ್ಲಿನ ಚಿಕ್ಕಜಂತಕಲ್ ಎಂಬಲ್ಲಿ ಜೆಡಿಎಸ್ ಪಕ್ಷದ ಟೀಶರ್ಟ್ ಹಾಗೂ ಧ್ವಜ ಕೊಂಡೊಯ್ಯತ್ತಿದ್ದ ಆಪಾದನೆಯ ಹಿನ್ನೆಲೆಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮತ್ತು ಜೆಡಿಎಸ್ ಮುಖಂಡ ಎಸ್.ಬಿ. ಖಾದ್ರಿ ಅವರನ್ನು ಬಂಧಿಸಲಾಗಿದೆ.
ಜೆಡಿಎಸ್ ಪಕ್ಷದ ಚಿಹ್ನೆ ಹೊಂದಿದ ಸುಮಾರು 800 ಟೀಶರ್ಟ್ ಹಾಗೂ ಆರು ಸಾವಿರ ಧ್ವಜಗಳನ್ನು ಕೊಂಡೊಯ್ಯುತ್ತಿದ್ದ ವೇಳೆ ಪೊಲೀಸರು ಮೂವರನ್ನು ಬಂಧಿಸಿದರು. ಆಗ ಬಂಧಿತರು ಇದರ ಹಿಂದೆ ಅನ್ಸಾರಿ ಹಾಗೂ ಖಾದ್ರಿ ಅವರ ಕೈವಾಡವಿರುವುದನ್ನು ತಿಳಿಸಿದ್ದು, ಅದರಂತೆ ಪೊಲೀಸರು ಇವರಿಬ್ಬರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಚುನಾವಣಾ ಆಯೋಗ ಈ ಬಾರಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವಲ್ಲಿ ಹೊಸ ನೀತಿ ಸಂಹಿತೆಗಳನ್ನು ಜಾರಿಗೊಳಿಸುತ್ತಿದೆ. ಮತದಾರರಿಗೆ ಆಮಿಷ ಅಥವಾ ಬೆದರಿಕೆ ಒಡ್ಡುವಂತಹ ಎಸ್ಎಂಎಸ್ ಕಳುಹಿಸುವ ವಿರುದ್ಧವೂ ಚುನಾವಣಾ ಆಯೋಗ ನೀತಿ ಸಂಹಿತೆ ಜಾರಿಗೊಳಿಸಿದೆ.