Article Election 08 %e0%b2%ae%e0%b2%a4%e0%b2%97%e0%b2%9f%e0%b3%8d%e0%b2%9f%e0%b3%86%e0%b2%97%e0%b3%86 %e0%b2%ac%e0%b2%be%e0%b2%b0%e0%b2%a6 %e0%b2%ae%e0%b2%a4%e0%b2%a6%e0%b2%be%e0%b2%b0%e0%b2%b0%e0%b3%81 108051000020_1.htm

Daily Horoscope

Select Your Language

Notifications

webdunia
webdunia
webdunia
webdunia

ಮತಗಟ್ಟೆಗೆ ಬಾರದ ಮತದಾರರು

ತುಮಕೂರಿನಲ್ಲಿ ಕೇಬಲ್ ಕಟ್!!

ತುಮಕೂರು
ಜನರು ಮತಗಟ್ಟೆಗೆ ಬಾರದಿದ್ದರೆ ಏನು ಮಾಡಬೇಕು. ಕೇಬಲ್ ಕಟ್ ಮಾಡಬೇಕು! ಇದು ತಮಾಷೆಯಲ್ಲ. ಮೊದಲ ಹಂತದ ಚುನಾವಣೆ ನಡೆಯುತ್ತಿರುವ ತುಮಕೂರಿನ ಅಭ್ಯರ್ಥಿಗಳು ಕಂಡುಕೊಂಡ ಉಪಾಯ.

ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆಯುವಲ್ಲಿಂದ ಹಿಡಿದು ಕ್ಷೇತ್ರದಲ್ಲೆಲ್ಲಾ ಅಲೆದು ಪ್ರಚಾರ ಮಾಡಿದ ಅರ್ಭ್ಯರ್ಥಿಗಳಿಗೆ ಮತದಾನದ ದಿನ ಜನ ಮನೆಯಿಂದ ಹೊರಗೇ ಬಾರದಿದ್ದಾಗ ಎದೆಯಲ್ಲಿ ಡವ ಡವ.

ಕಾರಣವೇನೆಂದು ಹುಡುಕಿದರೆ, ರಜೆ ಸಿಕ್ಕ ಖುಷಿಯಲ್ಲಿ ಜನ ಮನೆಯಲ್ಲೇ ಆರಾಮಾಗಿ ಟಿವಿ ನೋಡುತ್ತಾ ಕುಳಿತರು. ಆದರೆ ಅಭ್ಯರ್ಥಿಗಳು ಹಾಗೆ ಕೂರಲು ಸಾಧ್ಯವಿಲ್ಲ. ಇಂದು ಕುಳಿತರೆ ಮುಂದಿನ ಚುನಾವಣೆ ಬರುವವರೆಗೆ ನಾವು ಇಲ್ಲಿಯೇ ಕೂರಬೇಕಾಗಬಹುದೆಂಬ ಆತಂಕ.

ಕೊನೆಗೆ ಅಭ್ಯರ್ಥಿಗಳು ಕಂಡುಕೊಂಡಿದ್ದು ಕೇಬಲ್ ಪ್ರಸಾರ ಸ್ಥಗಿತಗೊಳಿಸುವ ದಾರಿ. ವರ್ಷಗಳ ನಂತರ ಬರುವ ಚುನಾವಣೆಯಲ್ಲಿ ಮತಚಲಾಯಿಸಿ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಬೇಕಾದ ಜನ ಟಿವಿ ನೋಡುತ್ತಾ ಕಾಲ ಕಳೆದರೆ ಹೇಗೆ?

Share this Story:

Follow Webdunia kannada