Article Election 08 %e0%b2%ad%e0%b2%b0%e0%b2%a3%e0%b2%bf %e0%b2%ac%e0%b2%bf%e0%b2%9c%e0%b3%86%e0%b2%aa%e0%b2%bf%e0%b2%97%e0%b3%86 %e0%b2%b8%e0%b3%87%e0%b2%b0%e0%b3%8d%e0%b2%aa%e0%b2%a1%e0%b3%86 108041900034_1.htm

Daily Horoscope

Select Your Language

Notifications

webdunia
webdunia
webdunia
webdunia

ಭರಣಿ ಬಿಜೆಪಿಗೆ ಸೇರ್ಪಡೆ?

ಭರಣಿ
ಟಿ.ನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ವತಿಯಿಂದ ಟಿಕೆಟ್ ಬಯಸಿದ್ದ ಭರಣಿಯವರಿಗೆ ಟಿಕೆಟ್ ಸಿಗದಿರುವ ಸಾಧ್ಯತೆಗಳೇ ಹೆಚ್ಚಾಗಿರುವುದರಿಂದ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿ ಮುಖಂಡ ವೆಂಕಯ್ಯನಾಯ್ಡುರವರು ಈಗಾಗಲೇ ರಾಜ್ಯ ಪ್ರವಾಸವನ್ನು ಕೈಗೊಂಡಿದ್ದು ಅವರ ಸಮ್ಮುಖದಲ್ಲಿ ಭರಣಿಯವರು ಬಿಜೆಪಿಗೆ ಸೇರಲಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗಷ್ಟೇ ಹುದ್ದೆಗೆ ರಾಜೀನಾಮೆ ನೀಡಿದ್ದ ಭರಣಿಯವರನ್ನು ಸೆಳೆಯಲು ಬಿಜೆಪಿ ಪ್ರಾರಂಭದಿಂದಲೇ ಯತ್ನಿಸಿದ್ದರೂ ಅವರು ಮಾತ್ರ ಕಾಂಗ್ರೆಸ್ ಕಡೆಗೆ ಒಲವು ತೋರಿದ್ದರು. ತಮ್ಮ ಹುಟ್ಟೂರಾದ ಟಿ.ನರಸೀಪುರದಿಂದ ಸ್ಪರ್ಧಿಸಲು ಡಾ| ಎಚ್.ಸಿ.ಮಹದೇವಪ್ಪನವರಿಗೆ ಟಿಕೆಟ್ ದೊರೆಯಲಿದೆ ಎಂಬ ಸುಳಿವು ಸಿಕ್ಕುತ್ತಿದ್ದಂತೆ ನಿರಾಶರಾದ ಭರಣಿ ಈಗ ಕಮಲಮುಖಿಯಾಗಿದ್ದಾರೆ ಎಂಬುದು ವಿಶೇಷ.

ಬಿಜೆಪಿಯ ಹಿರಿಯ ನಾಯಕರೊಂದಿಗೆ ಚರ್ಚೆಯಾದ ನಂತರ ಬೆಂಗಳೂರಿನ ಯಾವುದಾದರೊಂದು ಮೀಸಲು ಕ್ಷೇತ್ರದಲ್ಲಿ ಭರಣಿ ಸ್ಪರ್ಧೆಗಿಳಿಯಲಿದ್ದಾರೆ ಎಂದು ತಿಳಿದುಬಂದಿದೆ.

Share this Story:

Follow Webdunia kannada