Article Election 08 %e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b2%be %e0%b2%86%e0%b2%af%e0%b3%8b%e0%b2%97%e0%b2%a6 %e0%b2%aa%e0%b2%b0%e0%b2%bf%e0%b2%b6%e0%b3%80%e0%b2%b2%e0%b2%a8%e0%b3%86 108042900031_1.htm

Daily Horoscope

Select Your Language

Notifications

webdunia
webdunia
webdunia
webdunia

ಚುನಾವಣಾ ಆಯೋಗದ ಪರಿಶೀಲನೆ

ಚುನಾವಣಾ ಆಯೋಗ
ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣಾ ತಯಾರಿಯ ಪರೀಶೀಲನೆಗೆ ಆಗಮಿಸಿರುವ ಕೇಂದ್ರ ಚುನಾವಣಾ ಆಯೋಗವು ಮಂಗಳವಾರ ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿತು.

ರಾಜ್ಯದಲ್ಲಿ ನ್ಯಾಯ ಸಮ್ಮತ ಚುನಾವಣೆಗೆ ಸಕಲ ಸಿದ್ಧತೆಗಳ ಪರೀಶೀಲನೆ ಬಳಿಕ ಮುಖ್ಯ ಆಯುಕ್ತರಾದ ಎಂ. ಗೋಪಾಲಸ್ವಾಮಿ ನೇತೃತ್ವದ ಆಯೋಗವು ರಾಜ್ಯದ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಸಮಾಲೋಚನೆ ನಡೆಸಿತು.

ಈ ಸಂದರ್ಭದಲ್ಲಿ ಜನರಲ್ಲಿ ಧಾರ್ಮಿಕ ಭಾವನೆಯ ಕಿಚ್ಚು ಹೊತ್ತಿಸುತ್ತಿರುವ ಬಿಜೆಪಿ ಯತ್ನಕ್ಕೆ ಕಡಿವಾಣ ಹಾಕುವಂತೆ ಕಾಂಗ್ರೆಸ್ ವಿನಂತಿಸಿದರೆ, ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ವಿಧಿಸಲಾಗಿರುವ ಕಟ್ಟುನಿಟ್ಟಿನ ವಾತಾವರಣವನ್ನು ಸಡಿಲಿಸಬೇಕೆಂಬುದು ಬಿಜೆಪಿ, ಹಾಗೂ ರಾಜಕೀಯ ಪಕ್ಷಗಳು ರಾಜರೋಷವಾಗಿ ಹಣ-ಹೆಂಡವನ್ನು ಹಂಚುವುದನ್ನು ತಡೆಗಟ್ಟಬೇಕೆಂಬುದು ಎಡಪಕ್ಷಗಳು ಆಗ್ರಹಿಸಿದವು.

ಅಲ್ಲದೆ, ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲು ವಾಹನಗಳ ಅನುಮತಿ ನೀಡಬೇಕೆಂದು ಅನೇಕ ರಾಜಕೀಯ ಪಕ್ಷಗಳ ನಾಯಕರು ಅಯೋಗದ ಮುಂದೆ ಮನವಿ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Share this Story:

Follow Webdunia kannada