Article Election 08 %e0%b2%97%e0%b2%b3%e0%b2%97%e0%b2%b3%e0%b2%a8%e0%b3%86 %e0%b2%85%e0%b2%a4%e0%b3%8d%e0%b2%a4 %e0%b2%b8%e0%b2%bf%e0%b2%a6%e0%b3%8d%e0%b2%a6%e0%b2%b0%e0%b2%be%e0%b2%ae%e0%b2%af%e0%b3%8d%e0%b2%af 108042600039_1.htm

Daily Horoscope

Select Your Language

Notifications

webdunia
webdunia
webdunia
webdunia

ಗಳಗಳನೆ ಅತ್ತ ಸಿದ್ದರಾಮಯ್ಯ

ಸಿದ್ದರಾಮಯ್ಯ
ಬೆಂಗಳೂರು: ಚುನಾವಣಾ ಭಾಷಣ ಮಾಡುತ್ತಿದ್ದ ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಭಾವೋದ್ರೇಕಕ್ಕೊಳಗಾಗಿ ಅತ್ತ ಪ್ರಸಂಗ ಶನಿವಾರ ನಡೆದಿದೆ. ಸಿದ್ಧರಾಮಯ್ಯ ಸತತ 5 ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದು ಬಂದಿದ್ದರು. ಆದರೆ ಈ ಬಾರಿ ಕ್ಷೇತ್ರ ವಿಂಗಡೆಣೆಯಾದ ಕಾರಣ ವರುಣಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಅವರು ತಮ್ಮ ಭಾಷಣದಲ್ಲಿ, "ಕಳೆದ ಬಾರಿಯ ಉಪಚುನಾವಣೆಯಲ್ಲಿ ತೀವ್ರ ಪೈಪೋಟಿ ಇತ್ತು. ಜೆಡಿಎಸ್ ಆಮಿಷದ ಹೊಳೆಯನ್ನೇ ಹರಿಸಿತು. ಆದರೆ ಅವೆಲ್ಲವನ್ನು ಪರಿಗಣಿಸದೆ ನನ್ನನ್ನು ಗೆಲ್ಲಿಸಿದ್ದೀರಿ. ನಾನು ಯಾವುದೇ ರೀತಿಯಲ್ಲಿ ಸಿಡುಕಿ ರೇಗಿದರೂ, ಬೈದರೂ ಕೋಪ ಮಾಡದೇ ನನ್ನಲ್ಲಿ ವಿಶ್ವಾಸವಿಟ್ಟು ನನ್ನ ಕೈಹಿಡಿದು ನಡೆಸಿದ್ದೀರಿ, ನಿಮ್ಮ ಈ ಗುಣವನ್ನು ನಾನು ಯಾವತ್ತಿಗೂ ಮರೆಯಲ್ಲ" ಎಂದು ಕಣ್ಣೀರು ಹಾಕಿದರು.

ಮುಂದೆ ಮಾತನಾಡಿದ ಅವರು, "ಒಂದು ವೇಳೆ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಬಂದಾಗ ನನ್ನನ್ನು ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ನೀವು ಸೋಲಿಸಿದ್ದರೆ ನಾನು ಇವತ್ತು ರಾಜಕೀಯವಾಗಿ ಮೂಲೆಗುಂಪಾಗುತ್ತಿದೆ" ಎಂದರು. ಅನಿವಾರ್ಯ ಕಾರಣದಿಂದ ತಾನು ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. ಆದರೆ ಯಾವತ್ತಿಗೂ ನಿಮ್ಮನ್ನು ಮರೆಯೋದಿಲ್ಲ ಎಂದು ಭಾವುಕರಾದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇವತ್ತು ನಾನು ಸ್ಪರ್ಧಿಸುತ್ತಿಲ್ಲವಾದರೂ ಕಾಂಗ್ರೆಸ್ನಿಂದ ಸ್ಪರ್ಧಿಸುವ ಅಭ್ಯಥಿಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಸಿದ್ದರಾಮಯ್ಯ ಗದ್ಗದಿತರಾಗುತ್ತಿದ್ದಂತೆ ಅಲ್ಲಿ ಮೌನ ಆವರಿಸಿತು. ತಮ್ಮ ನಾಯಕ ಅಳುವುದನ್ನು ನೋಡಿ ಕೆಲವು ಕಾರ್ಯಕರ್ತರ ಕಣ್ಣಲ್ಲೂ ನೀರು ಬಂತು.

Share this Story:

Follow Webdunia kannada