Webdunia - Bharat's app for daily news and videos

Install App

ವಿಧಾನಸಭಾ ಚುನಾವಣೆ: ಮತದಾನ ಸುಖಾಂತ್ಯ

Webdunia
ಗುರುವಾರ, 22 ಮೇ 2008 (19:18 IST)
PTI
ಕರ್ನಾಟಕ ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಗುರುವಾರ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. 690 ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿ ಮತಯಂತ್ರದಲ್ಲಿ ದಾಖಲಾಗಿದೆ. ಇದುವರೆಗೆ ಬಂದಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಒಟ್ಟಾರೆಯಾಗಿ ಶೇ. 60ರಷ್ಟು ಮತದಾನ ದಾಖಲಾಗಿರುವ ಬಗ್ಗೆ ವರದಿಯಾಗಿದೆ.

ಜಿಲ್ಲಾವಾರು ನೋಡಿದರೆ, ಇತ್ತೀಚೆಗೆ ಬಾಂಬ್ ಸ್ಫೋಟಗೊಂಡ ಹುಬ್ಬಳ್ಳಿಯಲ್ಲಿ ಅತಿ ಹೆಚ್ಚು ಮತದಾನವಾಗಿರುವ ಕುರಿತು ವರದಿ ಬಂದಿದೆ. ಇಲ್ಲಿ ಶೇ.64ರಷ್ಟು ಮತದಾನವಾಗಿದ್ದರೆ, ಬಿಜಾಪುರದಲ್ಲಿ ಶೇ.55ರಷ್ಟು ಮತ ಚಲಾವಣೆಯಾಗುವ ಮೂಲಕ ಅತಿ ಕಡಿಮೆ ಮತದಾನವಾದ ಜಿಲ್ಲೆ ಎಂದು ಗುರುತಿಸಿಕೊಂಡಿದೆ.

ಉಳಿದಂತೆ ಬೆಳಗಾವಿಯಲ್ಲಿ ಶೇ.62, ಗುಲ್ಬರ್ಗಾದಲ್ಲಿ ಶೇ.58, ಬಾಗಲಕೋಟೆಯಲ್ಲಿ ಶೇ.62, ಹಾವೇರಿಯಲ್ಲಿ ಶೇ.59, ಬೀದರ್‌ನಲ್ಲಿ ಶೇ.57 ಹಾಗೂ ಗದಗದಲ್ಲಿ ಶೇ.63ರಷ್ಟು ಮತದಾನವಾಗಿರುವ ಬಗ್ಗೆ ವರದಿ ಬಂದಿದೆ. ಎರಡನೇ ಹಂತದ ಚುನಾವಣೆಯಲ್ಲಿ ಶೇ. 67.8ರಷ್ಟು ದಾಖಲಾಗಿತ್ತು.

8 ಜಿಲ್ಲೆಗಳ ಶೇಕಡಾವಾರು ಮತದಾನ (ಶೇಕಡಾವಾರು)
ಬೆಳಗಾವಿ-62
ಹುಬ್ಬಳ್ಳಿ-ಧಾರವಾಡ-64
ಬಾಗಲಕೋಟೆ-62
ಗದಗ-63
ಹಾವೇರಿ-59
ಗುಲ್ಬರ್ಗಾ-58
ಬಿಜಾಪುರ-55
ಬೀದರ್-57
ಒಟ್ಟಾರೆ ಸರಾಸರಿ 60

ಈ ಮಧ್ಯೆ ಬಿಜಾಪುರದಲ್ಲಿ ನಕಲಿ ಮತದಾನಕ್ಕೆ ಯತ್ನ ನಡೆಸಿರುವ ಬಗ್ಗೆ ವರದಿ ಬಂದಿದೆ. ಕಾಲಿಬಾಗ್ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಅಪ್ಪುಪಟ್ಟಣ ಶೆಟ್ಟಿ ಅವರಿಂದ ಈ ಯತ್ನ ನಡೆದಿದ್ದು, ಮತಗಟ್ಟೆ ಅಧಿಕಾರಿಗಳು ಇದನ್ನು ತಡೆದಿದ್ದಾರೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉಳಿದ ಅನ್ನ ಮರುದಿನ ಸೇವನೆ ಮಾಡ್ತೀರಾ ಹಾಗಿದ್ದರೆ ಡೇಂಜರ್ ಏನು ನೋಡಿ

ಮಕ್ಕಳಲ್ಲಿನ ಏಕಾಗ್ರತೆ, ನೆನಪು ಶಕ್ತಿ ಸಮಸ್ಯೆಗೆ ಬ್ರಾಹ್ಮಿ ರಾಮಬಾಣ

ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಎಚ್.ಪಿ.ವಿ. ಕ್ಯಾನ್ಸರ್ ಸಾರ್ವಜನಿಕ ಅರಿವಿನ ಅಭಿಯಾನಕ್ಕೆ ಚಾಲನೆ

ಮಳೆಗಾಲದಲ್ಲಿ ಸಿಗುವ ಈ ಹಣ್ಣು ಸಿಕ್ಕರೆ ಮಿಸ್ ಮಾಡದೆ ಸೇವನೆ ಮಾಡಿ

ಮಳೆಗಾಲದಲ್ಲಿ ಕಟ್ಟುನಿಟ್ಟಾಗಿ ದೂರವಿಡಲೇ ಬೇಕಾದ ಆಹಾರಗಳು

Show comments