Select Your Language

Notifications

webdunia
webdunia
webdunia
webdunia

ನಾಡಹಬ್ಬ ದಸರಾದಲ್ಲಿ ಶೋಭಾ ಕರಂದ್ಲಾಜೆ-ರಾಮದಾಸ್ ಜಟಾಪಟಿ

ನಾಡಹಬ್ಬ ದಸರಾದಲ್ಲಿ ಶೋಭಾ ಕರಂದ್ಲಾಜೆ-ರಾಮದಾಸ್ ಜಟಾಪಟಿ
ಮೈಸೂರು , ಗುರುವಾರ, 29 ಸೆಪ್ಟಂಬರ್ 2011 (12:35 IST)
ಅರಮನೆ ನಗರಿಯಲ್ಲಿನ ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನೆಯ ದಿನವೇ ಜಿಲ್ಲಾ ಉಸ್ತುವಾರಿ ಸಚಿವ ಎ.ಎಸ್.ರಾಮದಾಸ್ ಮತ್ತು ಇಂಧನ ಸಚಿವೆ ಶೋಭಾ ಕರಂದ್ಲಾಜೆ ನಡುವೆ ಜಟಾಪಟಿ ನಡೆದ ಪ್ರಸಂಗ ಬುಧವಾರ ನಡೆಯಿತು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ದಸರಾ ವಸ್ತು ಪ್ರದರ್ಶನ ಮತ್ತು ಆಹಾರ ಮೇಳದ ಉದ್ಘಾಟನೆಯ ವೇಳೆ ಈ ಘಟನೆ ನಡೆಯಿತು. ಆಹಾರ ಮೇಳೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸಚಿವ ರಾಮದಾಸ್ 15 ನಿಮಿಷ ತಡವಾಗಿ ಆಗಮಿಸಿದರು. ಅಷ್ಟರಲ್ಲಿ ಸಚಿವೆ ಶೋಭಾ ಕರಂದ್ಲಾಜೆ ದೋಸೆ ಹಾಕುವ ಮೂಲಕ ಉದ್ಘಾಟನೆ ನೆರವೇರಿಸಿದರು. ಇದರಿಂದ ಮುನಿಸಿಕೊಂಡ ರಾಮದಾಸ್, ವೇದಿಕೆ ಏರಿ ಒಬ್ಬರೇ ಕುಳಿತುಕೊಂಡರು!

ಬಳಿಕ ಜಿಲ್ಲಾ ಪಂಚಾಯ್ತಿ ಸಿಇಓ ಸತ್ಯವತಿ ಹಾಗೂ ಆಹಾರ ಇಲಾಖೆ ಉಪ ನಿರ್ದೇಶಕಿ ಕುಮುದ ಗಿರೀಶ್ ಸಚಿವರಲ್ಲಿ ವಿನಂತಿ ಮಾಡಿಕೊಂಡಾಗ ರಾಮದಾಸ್ ಕೂಡ ದೋಸೆ ಹಾಕುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ನಂತರ ವಸ್ತು ಪ್ರದರ್ಶನ ಉದ್ಘಾಟನಾ ಸಂದರ್ಭದಲ್ಲಿ ಇದು ವಿಕೋಪಕ್ಕೆ ಹೋಯಿತು. ರಾಮದಾಸ್ ಉದ್ಘಾಟನೆಗೆ ಕರೆಯದೇ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ ಕೆ.ಆರ್.ಕ್ಷೇತ್ರದ ಕಾರ್ಯಕರ್ತರು ವಸ್ತು ಪ್ರದರ್ಶನ ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ವಸ್ತು ಪ್ರದರ್ಶನ ಆವರಣದಲ್ಲಿ ಸಂಜೆ 4ಗಂಟೆಗೆ ಕಾರ್ಯಕ್ರಮ ಏರ್ಪಾಡಾಗಿತ್ತು. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕಾರ್ಯಕ್ರಮ ಉದ್ಘಾಟಿಸಬೇಕಿತ್ತು. ಆದರೆ ಅವರು ವಿದೇಶದಲ್ಲಿ ಇರುವುದರಿಂದ ಅವರು ಬರಲು ಸಾಧ್ಯವಾಗಲಿಲ್ಲ. ಇಂಧನ ಸಚಿವೆ ಶೋಭಾ ಕಾರ್ಯಕ್ರಮ ಉದ್ಘಾಟಿಸಿದರು.

ಸಮೀಪದ ದಸರಾ ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಆಗಮಿಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಾಮದಾಸ್ ಗೇಟಿನ ಮುಂಭಾಗದಲ್ಲಿ ಕಾರು ನಿಲ್ಲಿಸಿದರು. ಅವರನ್ನು ಯಾರೂ ಕರೆಯಲಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಆರಂಭದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಶೋಭಾ ಅವರಿಗೆ ಘೇರಾವ್ ಮಾಡಲು ವಸ್ತು ಪ್ರದರ್ಶನ ಆವರಣದ ಗೇಟಿನ ಮುಂಭಾಗದಲ್ಲಿ ಕಾದು ಕುಳಿತಿದ್ದರು. ಇದನ್ನು ಅರಿತ ಶೋಭಾ ವಸ್ತು ಪ್ರದರ್ಶನ ಆವರಣದ ಮತ್ತೊಂದು ಗೇಟಿನಲ್ಲಿ ಹೊರಟು ಹೋದರು. ಇದರಿಂದ ಕೋಪಗೊಂಡ ವಸ್ತು ಪ್ರದರ್ಶನ ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Share this Story:

Follow Webdunia kannada