ಆಕರ್ಷಕ ಖಾಸಗಿ ದರ್ಬಾರ್:
ಮೈಸೂರು ದಸರಾ ಮಹೋತ್ಸವಕ್ಕೆ 200ವರ್ಷಗಳ ಇತಿಹಾಸವಿದ್ದು,ಅಲ್ಲದೇ ದಸರಾದಲ್ಲಿ ನಡೆಯುವ ಮಹಾರಾಜರ ಖಾಸಗಿ ದರ್ಬಾರ್ ವಿಶೇಷ ಕಾರ್ಯಕ್ರಮವಾಗಿದೆ.
ಅಂಬಾ ವಿಲಾಸ ಅರಮನೆಯಲ್ಲಿ ನವರಾತ್ರಿಯ ಒಂಬತ್ತು ದಿನಗಳು ನಡೆಯುವ ಒಂದು ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ದಸರಾ ಆರಂಭಕ್ಕೂ ಮುನ್ನ ನಾಲ್ಕು ಟನ್ ಭಾರದ ಮೈಸೂರಿನ ಅತ್ಯಂತ ಪುರಾತನವಾದ ರತ್ನಖಚಿತ ಸಿಂಹಾಸನವನ್ನು ಅಣಿಗೊಳಿಸಲಾಗುತ್ತದೆ. ಒಡೆಯರ್ ಮನೆತನದ ರಾಜರಾದ ಶ್ರೀಕಂಠದತ್ತ ಒಡೆಯರ್ ಪೂಜಾವಿಧಾನಗಳನ್ನು ನೆರವೇರಿಸಿ,ಸುಮಾರು ನಲವತ್ತೈದು ನಿಮಿಷಗಳ ಕಾಲ ಖಾಸಗಿ ದರ್ಬಾರ್ ನಿರ್ವಹಿಸುವುದು ಸಂಪ್ರದಾಯ.