Webdunia - Bharat's app for daily news and videos

Install App

ವಿಶ್ವ ಎಮೋಜಿ ದಿನ; ಇದರ ಇತಿಹಾಸ ನಿಮಗೆ ಗೊತ್ತಾ?

Webdunia
ಶನಿವಾರ, 17 ಜುಲೈ 2021 (11:15 IST)
ಇಂದು ವಿಶ್ವ ಎಮೋಜಿ ದಿನ (ಎಮೊಟೈಕನ್). ಅನೇಕರು ಫೇಸ್ಬುಕ್ ಮೆಸೆಂಜರ್, ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂ, ಟೆಲಿಗ್ರಾಂ ಆ್ಯಪ್ಗಳಲ್ಲಿ ಎಮೋಜಿ ಬಳಸುವ ಮೂಲಕ ತಮ್ಮ ಭಾವನೆಗಳನ್ನು ವೇಗವಾಗಿ ವ್ಯಕ್ತಪಡಿಸುತ್ತಾರೆ. ಆದರೆ ಈ ಎಮೋಜಿ ಪ್ರಾರಂಭವಾಗಿದ್ದು ಯಾವಾಗ? ಎಲ್ಲಿ? ಇದರ ಇತಿಹಾಸವೇನು?. ಇಲ್ಲಿದೆ ಮಾಹಿತಿ

ಸ್ಮಾರ್ಟ್ಫೋನ್, ಡೆಸ್ಕ್ಟಾಪ್ನಲ್ಲಿ ಬೇರೆಯವರೊಂದಿಗೆ ಸಂವಹನ ಮಾಡುವಾಗ ನಮ್ಮ ಭಾವನೆಗಳನ್ನು ಅತ್ಯಂತ ಸಂಕ್ಷಿಪ್ತವಾಗಿ ಪರದೆಯ ಮೇಲೆ ಮೂಡಿಸಲು ರೂಪಗೊಂಡ ಆಧುನಿಕ ಸಾಧನವನ್ನು 'ಎಮೊಟೈಕನ್' ಎಂದು ಕರೆಯುತ್ತಾರೆ. 'ಎಮೋಶನ್' ಮತ್ತು 'ಐಕಾನ್' ಪದಗಳನ್ನು ಸೇರಿಸಿ ರೂಪಿಸಿರುವ ಪದವಾಗಿದೆ. 'ಸ್ಕಾಟ್ ಪಾಲ್ಮನ್', ಎಂಬವರು ಇದನ್ನು ಮೊದಲು ರೂಪಿಸಿದರು. ನಂತರ ಕಾಲಕ್ರಮದಲ್ಲಿ ಬೇರೆ ಬೇರೆ ವಿಧದ 'ಎಮೊಟೈಕನ್' ಗಳು ಬರಲಾರಂಭಿಸಿದವು.

ಎಮೋಜಿ ಜಪಾನ್ ದೇಶದಲ್ಲಿ ಮೊದಲು ಬೆಳಕಿಗೆ ಬಂದವು. 1990ರ ದಶಕದ ಕೊನೆಯಲ್ಲಿ 'ಎನ್.ಟಿ.ಟಿ ಡೊಕೊಮೊ' ಎಂಬ ಕಂಪೆನಿ ಪರಿಚಯಿಸಿತು. ಜಪಾನ್ ಉತ್ಪಾದಿಸಿದ ಕೆಲವು ಸ್ಮಾರ್ಟ್ಫೋನ್ನಲ್ಲಿ ಎಮೋಜಿಗಳನ್ನು ಪರಿಚಯಿಸಲಾಯಿತು. ಆನಂತರ ಉಳಿದ ದೇಶಗಳು ಬಗೆ ಬಗೆ ವಿನ್ಯಾಸದಲ್ಲಿ ಎಮೋಜಿ ಪ್ರಾರಂಭಿಸಿದರು. ಇಂದು ಹೆಚ್ಚಿನವರು ಎಮೋಜಿ ಬಳಸುತ್ತಾರೆ. 4 ಪದಗಳಲ್ಲಿ ಹೇಳುವ ಸಂಗತಿಯನ್ನು ಒಂದು ಎಮೋಜಿ ಮೂಲಕ ತಿಳಿಸುತ್ತಿದ್ದಾರೆ. 2000 ವೇಳೆಗೆ ಎಮೋಜಿ ಬಳಕೆ ಭಾರೀ ಚಾಲ್ತಿಗೆ ಬಂತು.
ಸಂದೇಶಗಳ ಮೂಲಕ ನಡೆಸುವ ಸಂವಹನಗಳಿಗಿಂತ ಎಮೋಜಿಗಳು ವೇಗವಾಗಿ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಹಾಗಾಗಿ ಎಮೋಜಿ ಇಂದು ಹೆಚ್ಚು ಬಳಕೆಯಲ್ಲಿದೆ. 2010ರ ಎಮೋಜಿ ಯುನಿಕೋಡ್ ಪ್ರಾರಂಭವಾಯಿತು. ಆ ಸಮಯದಲ್ಲಿ 625 ಸ್ಟ್ಯಾಂಡರ್ಡ್ ಎಮೋಜಿಗಳಿದ್ದವು. ಈಗ ಸುಮಾರು 3 ಸಾವಿರಕ್ಕೂ ಅಧಿಕ ಎಮೋಜಿಗಳನ್ನು ಬಳಕೆಯಲ್ಲಿದೆ.
2011ರಲ್ಲಿ ಆ್ಯಪಲ್ ತನ್ನ ಐಒಎಸ್ ಕೀಬೋರ್ಡ್ನಲ್ಲಿ ಎಮೋಜಿಯನ್ನು ಸೇರಿಸಿತು. ಆನಂತರ ಆ್ಯಂಡ್ರಾಯ್ಡ್ ಕೂಡ ಈ ಆಯ್ಕೆಯನ್ನು ನಕಲು ಮಾಡಿತು.
ಎಮೋಜಿಗಳ ಬಳಕೆ ಹೆಚ್ಚಾಗಿದ್ದು ವ್ಯಾಟ್ಸ್ಆ್ಯಪ್ ಬಂದ ಮೇಲೆ. ವಿಶ್ವದಾದ್ಯಂತ ಅನೇಕರು ವಾಟ್ಸ್ಆ್ಯಪ್ ಅನ್ನು ಬಳಸುತ್ತಿದ್ದಾರೆ. ಹಾಗಾಗಿ ವ್ಯಾಟ್ಸ್ಆ್ಯಪ್ ಕೂಡ ಬಳಕೆದಾರರಿಗೆ ಸಂದೇಶವನ್ನು ಸುಲಭವಾಗಿ ಕಳುಹಿಸಲು ಎಮೋಜಿ ಆಯ್ಕೆಯನ್ನು ನೀಡಿತು. ಅದರ ಜೊತೆಗೆ ವಾಯ್ಸ್ ಮೆಸೇಜ್, ಸ್ಟಿಕ್ಕರ್ ಆಯ್ಕೆಯನ್ನೂ ನೀಡಿತು.
2014ರಲ್ಲಿ ಎಮೋಜಿ ಕುರಿತಾಗಿ ಆಕ್ಷೇಪಗಳು ಶುರುವಾಯಿತು. ಸಾಮಾಜಿಕ ಹೋರಾಟಗಾರರು ಎಮೋಜಿ ಲಿಂಗ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ್ದರು. ಎಮೋಜಿಗಳಲ್ಲಿ ಬಿಳಿಯ ವ್ಯಕ್ತಿಗಳನ್ನೇಕೆ ಪ್ರತಿನಿಧಿಸುವಂತೆ ನಿರ್ಮಿಸುತ್ತಿದ್ದೀರಿ? ಕಪ್ಪು ಬಣ್ಣದ ಎಮೋಜಿಗಳನ್ನು ನಿರ್ಮಿಸಿ ಎಂಬ ಪ್ರಶ್ನೆಗಳು ಹುಟ್ಟಿಕೊಂಡವು. ನಂತರ ಎಮೋಜಿ ಯುನಿಕೋಡ್ ಬಳಕೆದಾರರೇ ಬಣ್ಣವನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡಿತು. ಹೀಗೆ ಎಮೋಜಿ ಇಂದು ಎಲ್ಲಾ ಸ್ಮಾರ್ಟ್ಫೋನ್ಗಳಲ್ಲಿ ಅಡಕವಾಗಿದೆ. ಹೆಚ್ಚಿನವರು ಎಮೋಜಿ ಬಳಸುತ್ತಿದ್ದಾರೆ. ಸಮಯವನ್ನು ಉಳಿಸಲು ಮತ್ತು ಸಂದೇಶವನ್ನು ವೇಗವಾಗಿ ರವಾನಿಸಲು ಎಮೋಜಿ ಇಂದು ಸಹಾಯಕವಾಗಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ