Webdunia - Bharat's app for daily news and videos

Install App

ಮಹಿಳೆಯರಿಗೆ ದ್ವಿತೀಯ ಪಿಯುಸಿ ನಂತರ ಮನೆಯಿಂದಲೇ ಮಾಡಬಹುದಾದ ಉದ್ಯೋಗಗಳು, ಎಲ್ಲಿ ಸರ್ಚ್ ಮಾಡಬೇಕು

ಕೃಷ್ಣವೇಣಿ ಕೆ
ಗುರುವಾರ, 3 ಸೆಪ್ಟಂಬರ್ 2026 (13:33 IST)
ದ್ವಿತೀಯ ಪಿಯುಸಿ (10+2) ಶಿಕ್ಷಣ ಪೂರ್ಣಗೊಳಿಸಿದ ಮಹಿಳೆಯರಿಗೆ ಹಾಗೂ ಗೃಹಿಣಿಯರಿಗೆ ಸ್ವಾವಲಂಬಿಗಳಾಗಲು ಇಂದು ಹಲವು ಡಿಜಿಟಲ್ ಅವಕಾಶಗಳಿವೆ. ಉನ್ನತ ಪದವಿ ಇಲ್ಲದಿದ್ದರೂ, ಮೂಲಭೂತ ಕಂಪ್ಯೂಟರ್ ಜ್ಞಾನ, ಮೊಬೈಲ್ ಮತ್ತು ಉತ್ತಮ ಸಂಪರ್ಕ ಸಂವಹನ ಕೌಶಲ್ಯವಿದ್ದರೆ ಮನೆಯಲ್ಲಿಯೇ ಕುಳಿತು ಆಕರ್ಷಕ ಆದಾಯ ಗಳಿಸಬಹುದಾದ ಪ್ರಮುಖ ಉದ್ಯೋಗಗಳ ವಿವರ ಇಲ್ಲಿದೆ:
 

ಟೆಲಿಹಾಲಿಂಗ್ ಮತ್ತು ಕಸ್ಟಮರ್ ಸಪೋರ್ಟ್ (Telecalling & Customer Support): ಹಲವು ಕಂಪನಿಗಳು ಮತ್ತು ಇ-ಕಾಮರ್ಸ್ ಸಂಸ್ಥೆಗಳು ತಮ್ಮ ಗ್ರಾಹಕರ ಜೊತೆ ಮಾತನಾಡಲು ಮಹಿಳೆಯರನ್ನು ನೇಮಿಸಿಕೊಳ್ಳುತ್ತವೆ. ಹಿಂದಿ, ಇಂಗ್ಲಿಷ್ ಅಥವಾ ಪ್ರಾದೇಶಿಕ ಭಾಷೆಗಳಾದ ಕನ್ನಡದಲ್ಲಿ ಸರಾಗವಾಗಿ ಮಾತನಾಡಲು ಬಂದರೆ, ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುವ ಅಥವಾ ಸೇವೆಗಳ ವಿವರ ನೀಡುವ ಟೆಲಿಹಾಲಿಂಗ್ ಕೆಲಸ ಸುಲಭವಾಗಿ ಸಿಗುತ್ತದೆ.

ಡೇಟಾ ಎಂಟ್ರಿ ಮತ್ತು ಟ್ರಾನ್ಸ್‌ಕ್ರಿಪ್ಷನ್ : ಕಂಪ್ಯೂಟರ್ ಮತ್ತು ವೇಗದ ಟೈಪಿಂಗ್ ಜ್ಞಾನವಿರುವವರಿಗೆ ಡೇಟಾ ಎಂಟ್ರಿ ಅತ್ಯಂತ ಸೂಕ್ತ. ಕಂಪನಿಗಳ ದಾಖಲೆಗಳನ್ನು ಡಿಜಿಟಲ್ ರೂಪಕ್ಕೆ ತರುವುದು, ಎಕ್ಸೆಲ್ ಶೀಟ್ ನಿರ್ವಹಣೆ ಮುಂತಾದ ಕೆಲಸಗಳು ಇದರಲ್ಲಿರುತ್ತವೆ. ಆನ್‌ಲೈನ್ ಗಿಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಇಂತಹ ಕೆಲಸಗಳು ಯಥೇಚ್ಛವಾಗಿ ಲಭ್ಯ.

ಆನ್‌ಲೈನ್ ಬೋಧನೆ ಅಥವಾ ಟ್ಯೂಷನ್ : ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ್ದರೆ, ಪ್ರಾಥಮಿಕ ಹಾಗೂ ಪ್ರೌಢಶಾಲಾ (1 ರಿಂದ 10ನೇ ತರಗತಿ) ಮಕ್ಕಳಿಗೆ ಆನ್‌ಲೈನ್ ಮೂಲಕ ಶಾಲಾ ವಿಷಯಗಳನ್ನು ಅಥವಾ ಭಾಷೆಗಳನ್ನು ಕಲಿಸಬಹುದು. ಇದಲ್ಲದೆ ಕಲಿಷ್ಟವಲ್ಲದ ಕರಕುಶಲ ಕಲೆ ಅಥವಾ ಆನ್‌ಲೈನ್ ಯೋಗ ಕ್ಲಾಸ್ ಕೂಡ ನಡೆಸಬಹುದು.

ಸೋಷಿಯಲ್ ಮೀಡಿಯಾ ಅಸಿಸ್ಟೆಂಟ್ : ಸಣ್ಣ ಉದ್ಯಮಿಗಳು ಅಥವಾ ಯೂಟ್ಯೂಬರ್‌ಗಳ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಖಾತೆಗಳನ್ನು ನಿರ್ವಹಿಸುವುದು, ಕಾಮೆಂಟ್‌ಗಳಿಗೆ ಉತ್ತರಿಸುವುದು ಮತ್ತು ಸರಳ ಪೋಸ್ಟ್‌ಗಳನ್ನು (Canva ಬಳಸಿ) ವಿನ್ಯಾಸಗೊಳಿಸುವ ಕೆಲಸಗಳನ್ನು ಪಿಯುಸಿ ಅರ್ಹತೆಯ ಮೇಲೆಯೇ ಪಡೆಯಬಹುದು.

ಡಿಜಿಟಲ್ ರಿಸೆಲ್ಲಿಂಗ್ ಮತ್ತು ಅಫಿಲಿಯೇಟ್ ಮಾರ್ಕೆಟಿಂಗ್: ಮೀಶೋ (Meesho), ಗ್ಲೋರೋಡ್  ನಂತಹ ಆಪ್‌ಗಳ ಮೂಲಕ ಬಟ್ಟೆ, ಜ್ಯುವೆಲ್ಲರಿ ಅಥವಾ ಗೃಹಬಳಕೆ ವಸ್ತುಗಳನ್ನು ಯಾವುದೇ ಬಂಡವಾಳವಿಲ್ಲದೆ ವಾಟ್ಸಾಪ್ ಹಾಗೂ ಸೋಷಿಯಲ್ ಮೀಡಿಯಾಗಳ ಮೂಲಕ ಮಾರಾಟ ಮಾಡಿ ಕಮಿಷನ್ ಗಳಿಸಬಹುದು.

ಉದ್ಯೋಗ ಹುಡುಕಲು ಬಳಸಬಹುದಾದ ವಿಶ್ವಾಸಾರ್ಹ ವೇದಿಕೆಗಳು:

ಆಪ್‌ಗಳು: WorkIndia, Apna App, JobsInKannada, Indeed.

ಫ್ರೀಲ್ಯಾನ್ಸ್ ಸೈಟ್‌ಗಳು: Fiverr, Upwork, Freelancer.

 
ಗಮನಿಸಬೇಕಾದ ಎಚ್ಚರಿಕೆ: ಮನೆಯಿಂದಲೇ ಕೆಲಸ ನೀಡುತ್ತೇವೆ ಎಂದು ಹೇಳಿ ಮುಂಗಡವಾಗಿ ಹಣ ಕೇಳುವ ನಕಲಿ ಸಂಸ್ಥೆಗಳಿಂದ ದೂರವಿರಿ. ಯಾವುದೇ ನೈಜ ಕಂಪನಿಯು ಉದ್ಯೋಗ ನೀಡಲು ಹಣವನ್ನು ಕೇಳುವುದಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಂಚ ಗ್ಯಾರಂಟಿಗಳೇ ರಾಜ್ಯದ ಅಭಿವೃದ್ಧಿ ಎಂಬಂತೆ ರಾಜ್ಯದ ಕಾಂಗ್ರೆಸ್ ಸರಕಾರ ವರ್ತಿಸುತ್ತಿದೆ : ವಿಜಯೇಂದ್ರ

ತಂಗಿಯನ್ನು ಲವ್ ಮಾಡಿದ್ದಕ್ಕೆ ಸಹೋದರರ ಶಿಕ್ಷೆ: 37 ಸೆಕೆಂಡ್ ಗಳಲ್ಲಿ 83 ಬಾರಿ ಇರಿತ: ಭೀಕರ ದೃಶ್ಯ ವೈರಲ್ Video

ಸೋಶಿಯಲ್ ಮೀಡಿಯಾ ಪವರ್ ಇದು… ಬಡತನದಿಂದಾಗಿ ಒಂಟಿ ಕಾಲಿನಲ್ಲಿ ಒದ್ದಾಡುತ್ತಿದ್ದ ಬಾಲಕಿಗೆ ಕೊನೆಗೂ ಸಿಕ್ತು ಸಹಾಯ Video

ನಾನು ಬ್ರಹ್ಮಚಾರಿ ಎಂದು ಯುವತಿಯೊಂದಿಗೆ ಲಲ್ಲೆ ಹೊಡೆಯುತ್ತಿದ್ದ ಪತಿ: ಪತ್ನಿ ಎಂಟ್ರಿ ಹೊಡೆಯುತ್ತಿದ್ದ ಹಾಗೇ ಏನಾಯ್ತು video

ಭಾರತದಲ್ಲಿ ಯಾಕೆ ಹೆಂಗಸರು ಗಂಡು ಮಗುವೇ ಬೇಕೆಂದು ಆಸೆ ಪಡುತ್ತಾರೆ ಗೊತ್ತಿಲ್ಲ: ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments