Select Your Language

Notifications

webdunia
webdunia
webdunia
webdunia

ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು 20 ಅಡಿಯಿಂದ ಜಿಗಿದಳು!

ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು 20 ಅಡಿಯಿಂದ ಜಿಗಿದಳು!
NewDelhi , ಮಂಗಳವಾರ, 14 ಮಾರ್ಚ್ 2017 (12:10 IST)
ನವದೆಹಲಿ: ದೆಹಲಿಯಲ್ಲಿ ಮತ್ತೊಂದು ಘೋರ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಮಹಿಳೆ 20 ಅಡಿ ಎತ್ತರದಿಂದ ಜಿಗಿಯುವ ಸಾಹಸ ಮಾಡಿದ್ದಾಳೆ.

 
ಆಕೆ ಇಬ್ಬರು ಮಕ್ಕಳ ತಾಯಿ. ಅತ್ಯಾಚಾರಿಗಳಲ್ಲೊಬ್ಬಾತ ವಿಕಾಸ್ ಆಕೆಯ ಪರಿಚಯದವನೇ. ಈ ಕಾರಣಕ್ಕೆ ಕಚೇರಿ ಮುಗಿಸಿ ಮನೆಗೆ ಬರುವಾಗ ಆತನ ಆಹ್ವಾನಕ್ಕೆ ಮಣಿದು ಕಾರು ಏರಿದ್ದಳು. ದಾರಿ ಮಧ್ಯೆ ಇನ್ನಿಬ್ಬರು ಆರೋಪಿಗಳೂ ಸೇರಿಕೊಂಡರು.

ಮೂವರು ಸೇರಿಕೊಂಡು ಮಹಿಳೆಯನ್ನು ತಮ್ಮ ಅಪಾರ್ಟ್ ಮೆಂಟ್ ಗೆ ಕರೆದೊಯ್ದರು. ಅಲ್ಲಿ ಇನ್ನಿಬ್ಬರು ಆರೋಪಿಗಳೂ ಇದ್ದರು. ಫ್ಲ್ಯಾಟ್ ಗೆ ಕರೆದುಕೊಂಡು ಹೋದ ಮೇಲೆ ಬಲವಂತವಾಗಿ ಮದ್ಯಪಾನ ಮಾಡಿಸಿದ ಆರೋಪಿಗಳು ರಾತ್ರಿಯಿಂದ ಬೆಳಗಿನವರೆಗೆ ನಿರಂತರ ಅತ್ಯಾಚಾರವೆಸಗಿದರು.

ಬೆಳಗಿನ ಜಾವ, ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಫ್ಲ್ಯಾಟ್ ನ ಬಾಲ್ಕನಿಯಿಂದ ಜಿಗಿದ ಮಹಿಳೆ ಬೆತ್ತಲಾಗಿ ಸಹಾಯಕ್ಕಾಗಿ ಅಂಗಲಾಚುತ್ತಾ ರಸ್ತೆಯಲ್ಲೇ ಓಡಿದ್ದಳು. ಕೊನೆಗೂ ಪಾದಚಾರಿಯೊಬ್ಬರು ಪೊಲೀಸರಿಗೆ ದೂರು ನೀಡಿ, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದರು. ಇದೀಗ ಪೊಲೀಸರು ಎಲ್ಲಾ ಐವರು ಆರೋಪಿಗಳನ್ನೂ ಸೆರೆ ಹಿಡಿದ್ದಾರೆ. ಇವರೆಲ್ಲಾ ಸ್ಥಳೀಯ ಕಾಲ್ ಸೆಂಟರ್ ಗಳ ಉದ್ಯೋಗಿಗಳು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೋವಾ ಸರ್ಕಾರ ರಚನೆ ಬಿಕ್ಕಟ್ಟು: ಕಾಂಗ್ರೆಸ್ ಗೆ ಮುಖಭಂಗ