Select Your Language

Notifications

webdunia
webdunia
webdunia
webdunia

ಹಳಿ ಮೇಲೆ ಬಿದ್ದರೂ ಬದುಕುಳಿದ ನವಜಾತ ಶಿಶು!

ಹಳಿ ಮೇಲೆ ಬಿದ್ದರೂ ಬದುಕುಳಿದ ನವಜಾತ ಶಿಶು!
ಇಂದೋರ್ , ಶುಕ್ರವಾರ, 5 ಜೂನ್ 2015 (12:55 IST)
ನವಜಾತ ಶಿಶುವೊಂದು ರೈಲು ಹಳಿಯ ಮೇಲೆ ಬಿದ್ದರೂ ಪವಾಡಸದೃಶವಾಗಿ ಬದುಕುಳಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.


7 ತಿಂಗಳ ಗರ್ಭಿಣಿಯಾಗಿದ್ದ ಖಾರ್ಗಾಂವ್ ನಿವಾಸಿ ರಾನು ವರ್ಮಾ ತನ್ನ ಪತಿಯ ಜತೆ ಇಂದೋರ್‌ನಿಂದ ಸುಜಾಲ್ಪುರ್‌ಗೆ ಹೋಗುವವರಿದ್ದು, ಪಂಚವಳಿ ಎಕ್ಸಪ್ರೆಸ್‌ ಏರಿ ಅವರಿಬ್ಬರು ಕುಳಿತಿದ್ದರು. ರೈಲು ಹೊರಡಲು ಕೆಲವೇ ಕ್ಷಣಗಳು ಇರುವಾಗ ರಾನುಗೆ ಹೊಟ್ಟೆನೋವು ಕಾಣಿಸಿಕೊಂಡಿತು. ಅದು ಪ್ರಸವ ವೇದನೆಯೆಂದು ತಿಳಿಯದೇ ರಾನು ಶೌಚಾಲಯಕ್ಕೆ ತೆರಳಿದ್ದಾಳೆ. ಅಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ತಕ್ಷಣ ಆಕೆ ಸಹಾಯಕ್ಕಾಗಿ ಕೂಗಿ ಕೊಂಡಿದ್ದಾಳೆ. ಆದರೆ ಮಗು ಶೌಚಾಲಯದ ರಂಧ್ರದಿಂದ ಹಳಿಯ ಮೇಲೆ ಉರುಳಿದೆ. 
 
ತನ್ನ ಪತ್ನಿಯ ಕೂಗನ್ನು ಕೇಳಿದ ರಾನುವಿನ ಪತಿ ಉಳಿದ ಪ್ರಯಾಣಿಕರ ನೆರವಿನೊಂದಿಗೆ ಮಗುವನ್ನು ಎತ್ತಿದ್ದಾನೆ. ತಕ್ಷಣ ಮಗು ಮತ್ತು ತಾಯಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. 
 
ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಆದರೆ ಮಗು ಅವಧಿಪೂರ್ವ ಜನಿಸಿದ್ದರಿಂದ ತೀವೃ ನಿಗಾವಣೆಯಲ್ಲಿ ಇರಿಸಲಾಗಿದೆ ವೈದ್ಯರು ತಿಳಿಸಿದ್ದಾರೆ. 

Share this Story:

Follow Webdunia kannada