Select Your Language

Notifications

webdunia
webdunia
webdunia
webdunia

ಭಾರತ ವಿದೇಶಗಳ ಉತ್ಪನ್ನಗಳಿಗೆ ಪೈಪೋಟಿ ನೀಡುವುದು ಯಾವಾಗ?

ಭಾರತ ವಿದೇಶಗಳ ಉತ್ಪನ್ನಗಳಿಗೆ ಪೈಪೋಟಿ ನೀಡುವುದು ಯಾವಾಗ?
ನವದೆಹಲಿ , ಶುಕ್ರವಾರ, 16 ಅಕ್ಟೋಬರ್ 2015 (21:17 IST)
ಭಾರತ ರಾಕೆಟ್‌ ಹಾರಿಸುವ ತಂತ್ರಜ್ಞಾನದಲ್ಲಿ ಪ್ರಪಂಚದಲ್ಲೇ ಅಗ್ರಮಾನ್ಯವೆನಿಸಿದೆ. ವಿದೇಶಗಳು ತಮ್ಮ ಉಪಗ್ರಹಗಳನ್ನು ಭಾರತದ ರಾಕೆಟ್ ಮೂಲಕ ಹಾರಿಸಿ ಕಕ್ಷೆಯಲ್ಲಿ ಸ್ಥಿರಗೊಳಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾ ಎಂದು ವಿದೇಶಿ ಉದ್ಯಮಿಗಳಿಗೆ ಕರೆ ನೀಡಿದ್ದಾರೆ. ಭಾರತ ತೀವ್ರ ವೇಗದಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ. ಆದರೆ ದೇಶದಲ್ಲಿ ಮಾರಾಟವಾಗುವ ಬಹುತೇಕ ಸರಕುಗಳನ್ನು  ವಿದೇಶಿ ಉದ್ಯಮಗಳು ಉತ್ಪಾದಿಸಿದರೆ ಅದು ಅಭಿವೃದ್ಧಿಯಾಗುತ್ತದೆಯೇ ? ನಮ್ಮ   ಉದ್ಯಮಿಗಳು ಮನಸ್ಸು ಮಾಡಿದರೆ ವಿದೇಶಿ ಉತ್ಪನ್ನಗಳಿಗೆ ಪೈಪೋಟಿ ನೀಡುವ ಸರಕುಗಳನ್ನು ತಯಾರಿಸುವುದು ಕಷ್ಟವೇನಲ್ಲ. 
 
ಭಾರತದಲ್ಲಿ ಬಂಡವಾಳ ಹೂಡಿಕೆಯಾಗುತ್ತಿರುವ ವಲಯಗಳನ್ನು ಗಮನಿಸಿದಾಗ  ಅಮೆರಿಕ, ಚೀನಾ, ಜಪಾನ್ ದೇಶಗಳ ಉತ್ಪನ್ನಗಳು ಭಾರತದ ಮಾರುಕಟ್ಟೆಯಲ್ಲಿ ಬಿಕರಿಯಾಗುವುದನ್ನು ತಡೆಗಟ್ಟಲು ನೆರವಾಗುವ ವಲಯಗಳಿಗೆ ಬಂಡವಾಳ ಹೂಡಿಕೆಯಾಗುತ್ತಿಲ್ಲ. ಭಾರತ ಬಹುರಾಷ್ಟ್ರೀಯ ಕಂಪನಿಗಳಿಗೆ ರತ್ನ ಗಂಬಳಿ ಹಾಸಿ ನಿಮ್ಮ ಉತ್ಪನ್ನಗಳನ್ನು ನಮ್ಮ ದೇಶದಲ್ಲಿ ಮುಕ್ತವಾಗಿ ಮಾರಾಟ ಮಾಡಿ ಲಾಭವನ್ನು ನಿಮ್ಮ ದೇಶಕ್ಕೆ ಒಯ್ಯಿರಿ ಎಂದು ಬಹಿರಂಗವಾಗಿ ಸಾರುತ್ತಿದೆ. ಇಂದು ನಮ್ಮ ದೇಶದ ಪರಿಸ್ಥಿತಿ ಹೇಗಿದೆಯೆಂದರೆ ನಾವು ಖರೀದಿಸುವ ಟೂತ್ ಪೇಸ್ಟ್, ಮೈ ಸೋಪು, ಬಟ್ಟೆ ಸೋಪು, ಕ್ಲೀನಿಂಗ್ ಲಿಕ್ವಿಡ್, ಮೊಬೈಲ್ , ಕಂಪ್ಯೂಟರ್ ಎಲ್ಲವೂ ವಿದೇಶದಲ್ಲಿ ತಯಾರಾಗುವ ಸರಕುಗಳು.

 ನಮ್ಮ ದೇಶದ ಮಾರುಕಟ್ಟೆ ಅಗಾಧವಾಗಿದೆ. ಆದರೆ ಭಾರತೀಯ ಉದ್ಯಮಿಗಳು ಆ ಚಿಲ್ಲರೆ ವಲಯದ ಮಾರುಕಟ್ಟೆಯನ್ನು ಯಾಕೆ ಆಕ್ರಮಿಸುತ್ತಿಲ್ಲ. ವಿದೇಶಿ ಉತ್ಪನ್ನಗಳಿಗೆ ಪೈಪೋಟಿ ನೀಡುವ ಸರಕುಗಳನ್ನು ತಯಾರಿಸಲು ಭಾರತೀಯ ಉದ್ಯಮಿಗಳಿಗೆ ಸಾಧ್ಯವಿಲ್ಲವೇ ಅಥವಾ ನಮ್ಮ ದೇಶದ ಜನರು ವಿದೇಶಿ ಸರಕುಗಳೆಂದರೆ ಹಪಹಪಿಸುವ ಮನಸ್ಥಿತಿ ಹೊಂದಿದ್ದಾರೆಯೇ , ದೇಶೀಯ ಸರಕುಗಳೆಂದರೆ ತಿರಸ್ಕಾರದ ಭಾವನೆ ಹೊಂದಿದ್ದಾರೆಯೇ.  ಭಾರತಕ್ಕೂ ಚೀನಾಕ್ಕೂ ಇರುವ ವ್ಯತ್ಯಾಸವೇನೆಂದರೆ ಚೀನಾ ಸರಕುಗಳನ್ನು ತಯಾರಿಸಿ ವಿದೇಶಗಳಲ್ಲಿ ಮಾರಾಟ ಮಾಡಿದರೆ ಭಾರತೀಯರು  ವಿದೇಶಿ ಉತ್ಪನ್ನಗಳನ್ನ ಖರೀದಿಸಿ  ಹೆಮ್ಮೆಯಿಂದ ಬೀಗುತ್ತಾ ವಿದೇಶಿ ಬ್ರಾಂಡ್ ಬಳಸುತ್ತಿರುವುದಾಗಿ ಹೇಳುತ್ತಾರೆ. 
 
ಭಾರತ ನಿಜಕ್ಕೂ ಮಾರುಕಟ್ಟೆಯಾಗದೇ ಅದೊಂದು  ಶಕ್ತಿಯಾಗಿ ಬೆಳೆಯಬೇಕೆಂದರೆ   ವಿದ್ಯಾವಂತ ನಿರುದ್ಯೋಗಿಗಳಿಗೆ ಕೈತುಂಬಾ ಕೆಲಸ ಸಿಗಬೇಕು. ಇಲ್ಲಿ ತಯಾರಾದ ಉತ್ಪನ್ನಗಳಿಗೆ ವಿದೇಶಿ ನೆಲದಲ್ಲಿ ಮಾರುಕಟ್ಟೆ ಸಿಗುವಂತಾಗಬೇಕು. ಭಾರತದ ವಿದ್ಯಾವಂತರು, ಪ್ರತಿಭಾವಂತರು ಅಮೆರಿಕದ ಅಭಿವೃದ್ಧಿಗೆ ತಮ್ಮ ಬುದ್ಧಿಸಾಮರ್ಥ್ಯವನ್ನು ಧಾರೆಯೆರೆಯುವ ಬದಲಿಗೆ ಭಾರತದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಲ್ಲುವಂತಾಗಬೇಕು.  

Share this Story:

Follow Webdunia kannada