Webdunia - Bharat's app for daily news and videos

Install App

ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ '80s ಟ್ರೆಂಡ್ ಫೋಟೋ': ಏನಿದು, ಮಾಡುವುದು ಹೇಗೆ

ಕೃಷ್ಣವೇಣಿ ಕೆ
ಗುರುವಾರ, 10 ಸೆಪ್ಟಂಬರ್ 2026 (12:09 IST)
ಇತ್ತೀಚೆಗೆ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ 1980ರ ದಶಕದ ಶೈಲಿಯ ಫೋಟೋಗಳು ವೈರಲ್ ಆಗುತ್ತಿವೆ. ಜನರು ತಮ್ಮ ಪ್ರಸ್ತುತ ಫೋಟೋಗಳನ್ನು 80ರ ದಶಕದ ಬಾಲಿವುಡ್ ಅಥವಾ ಹಾಲಿವುಡ್ ಶೈಲಿಯ, ಕ್ಲಾಸಿಕ್ ಹೇರ್‌ಸ್ಟೈಲ್, ವರ್ಣರಂಜಿತ ಬಟ್ಟೆಗಳು, ಮತ್ತು ಹಳೆಯ ಕಾಲದ ಯರ್‌ಬುಕ್ (Yearbook) ಅಥವಾ ಸಿನಿಮಾ ಪೋಸ್ಟರ್ ಶೈಲಿಗೆ ಬದಲಾಯಿಸಿಕೊಂಡು ಪೋಸ್ಟ್ ಮಾಡುತ್ತಿದ್ದಾರೆ.
 
ಈ ವೈರಲ್ ಟ್ರೆಂಡ್ ಎಂದರೇನು ಮತ್ತು ನಿಮ್ಮ ಫೋಟೋವನ್ನು ಸಹ 80ರ ದಶಕದ ವೈಬ್‌ಗೆ ಹೇಗೆ ಬದಲಾಯಿಸಿಕೊಳ್ಳುವುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
 
ಏನಿದು 80's ಟ್ರೆಂಡ್ ಫೋಟೋ?
ಇದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿ ರಚಿಸಲಾಗುವ ಫೋಟೋ ಆಗಿದೆ. 1980ರ ದಶಕದಲ್ಲಿ ಜನಪ್ರಿಯವಾಗಿದ್ದ:
 
ಪಫ್ ಮತ್ತು ಕರ್ಲ್ಡ್ ಹೇರ್‌ಸ್ಟೈಲ್‌ಗಳು 
 
ಬ್ರೈಟ್ ಡೆನಿಮ್ ಜಾಕೆಟ್‌ಗಳು, ಕಲರ್‌ಫುಲ್ ಸ್ವೆಟರ್‌ಗಳು ಮತ್ತು ಚರ್ಮದ ಜಾಕೆಟ್‌ಗಳು
 
ಸಾಫ್ಟ್ ರೆಟ್ರೋ ಫಿಲ್ಟರ್‌ಗಳು 
 
ಹಳೆಯ ಶಾಲಾ ಯರ್‌ಬುಕ್ ಅಥವಾ ಸಿನಿಮಾ ಪೋಸ್ಟರ್ ಹಿನ್ನೆಲೆಗಳನ್ನು ಈ ಎಐ ತಂತ್ರಜ್ಞಾನವು ನಿಮ್ಮ ಮುಖಕ್ಕೆ ಕಷ್ಟವಿಲ್ಲದೆ ಹೊಂದಿಸುತ್ತದೆ.
 
80's AI ಫೋಟೋ ಮಾಡುವುದು ಹೇಗೆ?
 
ಈ ರೀತಿಯ ಫೋಟೋಗಳನ್ನು ಮಾಡಲು EPIK, Remini, Photoleap, ಅಥವಾ ChatGPT / Midjourney ನಂತಹ ಎಐ ಆ್ಯಪ್‌ಗಳನ್ನು ಬಳಸಬಹುದು.
 
EPIK ಅಥವಾ Remini ಆ್ಯಪ್ ಡೌನ್‌ಲೋಡ್ ಮಾಡಿ:
 
ನಿಮ್ಮ ಮೊಬೈಲ್‌ನ ಪ್ಲೇ ಸ್ಟೋರ್ (Play Store) ಅಥವಾ ಆ್ಯಪ್ ಸ್ಟೋರ್‌ನಿಂದ EPIK ಅಥವಾ Remini ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ.
 
AI Yearbook / 80s Retro ಆಯ್ಕೆಮಾಡಿ:
 
ಆ್ಯಪ್ ಓಪನ್ ಮಾಡಿದ ತಕ್ಷಣ ಹೋಮ್ ಸ್ಕ್ರೀನ್‌ನಲ್ಲಿ 'AI Yearbook' ಅಥವಾ '80s Retro Vintage' ಎಂಬ ಆಪ್ಷನ್ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
 
ನಿಮ್ಮ ಫೋಟೋಗಳನ್ನು ಅಪ್‌ಲೋಡ್ ಮಾಡಿ:
 
ನಿಮ್ಮ ಮುಖ ಸ್ಪಷ್ಟವಾಗಿ ಕಾಣಿಸುವ 8 ರಿಂದ 12 ವಿಭಿನ್ನ ಆಂಗಲ್‌ನ ಸೆಲ್ಫಿ ಅಥವಾ ಫೋಟೋಗಳನ್ನು ಗ್ಯಾಲರಿಯಿಂದ ಸೆಲೆಕ್ಟ್ ಮಾಡಿ.
 
ಶೈಲಿಯನ್ನು ಆಯ್ಕೆಮಾಡಿ:
 
ಪುರುಷ/ಮಹಿಳೆ ಆಯ್ಕೆಮಾಡಿ, '80s Vintage' ಅಥವಾ 'Retro High School' ಥೀಮ್ ಸೆಲೆಕ್ಟ್ ಮಾಡಿ.
 
Generate ಬಟನ್ ಕ್ಲಿಕ್ ಮಾಡಿ:
 
ಎಐ ತಂತ್ರಜ್ಞಾನವು ಕೆಲವು ಸೆಕೆಂಡುಗಳಲ್ಲಿ ನಿಮ್ಮ ಮುಖವನ್ನು 80ರ ದಶಕದ ವಿಭಿನ್ನ ಲುಕ್‌ಗಳಿಗೆ ಬದಲಾಯಿಸಿ 10-60 ಮಾದರಿಯ ಫೋಟೋಗಳನ್ನು ನೀಡಿಬಿಡುತ್ತದೆ.
 
ಸೇವ್ ಮತ್ತು ಶೇರ್ ಮಾಡಿ:
 
ನಿಮಗೆ ಇಷ್ಟವಾದ ಫೋಟೋಗಳನ್ನು ಡೌನ್‌ಲೋಡ್ ಮಾಡಿಕೊಂಡು, ಹಿನ್ನೆಲೆಯಲ್ಲಿ 80ರ ದಶಕದ ಹಿಟ್ ಹಿಂದಿ/ಕನ್ನಡ ಹಾಡುಗಳನ್ನು ಸೇರಿಸಿ ಇನ್‌ಸ್ಟಾಗ್ರಾಮ್ ರೀಲ್ಸ್ ಅಥವಾ ಸ್ಟೋರಿಯಲ್ಲಿ ಶೇರ್ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ರಾಹುಲ್ ಗಾಂಧಿ ಟ್ರಾನ್ಸಫರ್ ಉದ್ಘಾಟನೆಗೆ ಇಷ್ಟೊಂದು ಸದ್ದು ಗದ್ದಲವಾ: ಬಿಜೆಪಿ, ನೆಟ್ಟಿಗರ ಟಾಂಗ್

ಬೈಕ್ ಚಲಾಯಿಸುತ್ತಾ ರೊಮ್ಯಾನ್ಸ್ ಮಾಡುತ್ತಿದ್ದ ಜೋಡಿ: ತಕ್ಕ ಪಾಠ ಕಲಿಸಿದ ಪಬ್ಲಿಕ್ video

ಬ್ಯಾಚುಲರ್ ಪಾರ್ಟಿಯಲ್ಲಿ ಎಕ್ಸ್ ಲವರ್ ಗಳ ದಂಡು: ವಿಡಿಯೋ ನೋಡಿ ಮುದವೆಯನ್ನೇ ಕ್ಯಾನ್ಸಲ್ ಮಾಡಿದ ವರ Video

ಗಂಡನ ಜೊತೆ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡುತ್ತಲೇ ಮಾವನ ಕೊಲೆಗೆ ಸ್ಕೆಚ್: ಸೊಸೆಯ ಖತರ್ನಾಕ್ ಕೆಲಸ ಕೇಳಿದ್ರೆ ಶಾಕ್ ಆಗ್ತೀರಿ: ವೈರಲ್ Video

ಕೆಜಿಎಫ್ ನ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ, ಹೊಡೆದ ರಭಸಕ್ಕೆ ಪ್ರಜ್ಞೆ ತಪ್ಪಿದ ವಿದ್ಯಾರ್ಥಿನಿ

ಮುಂದಿನ ಸುದ್ದಿ
Show comments