Select Your Language

Notifications

webdunia
webdunia
webdunia
webdunia

ನಾವು ದಿನನಿತ್ಯ ಬಳಸುವ ವಸ್ತುಗಳೆಲ್ಲಾ ವಿದೇಶಿ, ಸ್ವದೇಶಿ ವಸ್ತುಗಳು ಎಲ್ಲಿವೆ?

foreing goods
ನವದೆಹಲಿ , ಬುಧವಾರ, 19 ಆಗಸ್ಟ್ 2015 (16:28 IST)
  • ಗುಣವರ್ಧನ ಶೆಟ್ಟಿ 
 
ಈಸ್ಟ್ ಇಂಡಿಯಾ  ಕಂಪನಿ ದೇಶೀಯ ಕೈಗಾರಿಕೆಗಳನ್ನು ನಾಶ ಮಾಡಿ ಇಲ್ಲಿ ಅವರದ್ದೇ ಉತ್ಪನ್ನಗಳನ್ನು ಮಾರಿದಾಗ ಗಾಂಧೀಜಿ ಸ್ವದೇಶಿ ಆಂದೋಲನ ಆರಂಭಿಸಿದರು. ವಿದೇಶಿ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ಚಳವಳಿಗೆ ಚಾಲನೆ ಸಿಕ್ಕಿತು. ಸ್ವದೇಶಿ ಆಂದೋಲನವು ಸ್ವಯಂ ನಿರ್ಮಿತ ಸರಕುಗಳ ಬಳಕೆಗೆ ಗಮನಹರಿಸಿ ವಿದೇಶಿ ಸರಕುಗಳ ಖರೀದಿಯನ್ನು ಬಹಿಷ್ಕರಿಸಲು ಕರೆ ನೀಡಿತು. ಆಗ  ಬ್ರಿಟಿಷ್ ಸಾಮ್ರಾಜ್ಯವನ್ನು ಉರುಳಿಸಿ ದೇಶೀಯ ಉದ್ಯಮಗಳಿಗೆ ಪುನಶ್ಚೇತನ ನೀಡುವ ಮೂಲಕ ಸ್ವಾವಲಂಬಿಯಾಗಬೇಕೆಂಬುದು ಗಾಂಧೀಜಿಯ ಗುರಿಯಾಗಿತ್ತು. 

ಇಂದು ಈಸ್ಟ್ ಇಂಡಿಯಾ ಕಂಪನಿ ದೇಶದಲ್ಲಿ ಅಸ್ತಿತ್ವದಲ್ಲಿಲ್ಲದಿದ್ದರೂ, ಅನೇಕ ವಿದೇಶಿ ಕಂಪನಿಗಳು ನಮ್ಮ ದೇಶದಲ್ಲಿ ವ್ಯವಹಾರ ನಡೆಸಿವೆ.  ನಾವು ದಿನ ನಿತ್ಯ ಬಳಸುತ್ತಿರುವ ಗೃಹೋಪಯೋಗಿ ವಸ್ತುಗಳತ್ತ ಒಮ್ಮೆ ಕಣ್ಣು ಹಾಯಿಸೋಣ. ಸ್ನಾನ ಮಾಡುವುದಕ್ಕೆ ನಾವು ಬಳಸುವ ಲಕ್ಸ್ ಯೂನಿ ಲಿವರ್ ಕಂಪನಿಯ ಉತ್ಪನ್ನವಾಗಿದ್ದು, ಸಿಂಗಾಪುರದಲ್ಲಿ ಮುಖ್ಯ ಕಚೇರಿ ಹೊಂದಿದೆ.

 ನಾವು ಬಟ್ಟೆ ಒಗೆಯುವುದಕ್ಕೆ ಬಳಸುವ ರಿನ್ ಸೋಪ್ ಉತ್ಪನ್ನದ ಮಾಲೀಕರು ಹಿಂದೂಸ್ತಾನ್ ಯೂನಿಲಿವರ್ ಲಿ. ಇದರ ಮಾಲೀಕತ್ವ ಕೂಡ ಯೂನಿಲಿವರ್ ಕಂಪನಿ ಹೊಂದಿದೆ.  ಹಿಂದುಸ್ತಾನ ಯೂನಿಲಿವರ್ ಅನ್ನಪೂರ್ಣ ಉಪ್ಪು ಮತ್ತು ಅಟ್ಟಾ, ಬ್ರೂ ಕಾಫಿ, ಬ್ರೂಕ್ ಬಾಂಡ್(2 ರೋಸಸ್, ತಾಜ್ ಮಹಲ್, ರೆಡ್ ಲೇಬಲ್) ಚಹಾ, ಕಿಸಾನ್ ಕೆಚಪ್, ಜಾಮ್, ಲಿಪ್ಟನ್ ಟೀ,  ಡೊಮೆಕ್ಸ್  ವೀಲ್ ಡಿಟರ್ಜೆಂಟ್, ಕ್ಲೋಸ್ ಅಪ್  ಟೂತ್ ಪೇಸ್ಟ್, ಡೆನಿಮ್ ಶೇವಿಂಗ್ ಉತ್ಪನ್ನ, ಹಮಾಮ್, ಲಕ್ಮೆ  ಹೀಗೆ ಅನೇಕ ಉತ್ಪನ್ನಗಳನ್ನು ತಯಾರಿಸುತ್ತದೆ. ಇವೆಲ್ಲಾ ಮಾರಾಟಗಳಿಂದ ಸಿಕ್ಕಿದ ಲಾಭದ ಹಣ ವಿದೇಶಕ್ಕೆ ಹರಿದುಹೋಗುತ್ತದೆಯೇ ಹೊರತು ನಮ್ಮ ದೇಶದ ಅರ್ಥವ್ಯವಸ್ಥೆಗೆ ಉಪಯೋಗವಿಲ್ಲ. 
 ವಿದೇಶಿ ಕಂಪನಿಗಳು ಮತ್ತು ಸ್ವದೇಶಿ ಕಂಪನಿಗಳ ಉತ್ಪನ್ನಗಳು ಯಾವುದೆಂದು ಕೆಳಗಿವೆ
 
ಟೂತ್ ಪೇಸ್ಟ್ ಮತ್ತು ದಂತ ಮಂಜನ್
ವಿದೇಶಿ ಕಂಪನಿಗಳ ಬ್ರಾಂಡ್ -ಕಾಲ್ಗೇಟ್, ಕ್ಲೋಸ್ ಅಪ್, ಪೆಪ್ಸೋಡೆಂಟ್, ಸಿಬಾಕಾ, ಆಕ್ವಾ ಫ್ರೆಷ್,
ಭಾರತದ ಕಂಪನಿಗಳ ಬ್ರಾಂಡ್- ಪತಂಜಲಿ ಎಂಡಿಎಚ್, ವಜ್ರದಂತಿ, ಬೈದ್ಯನಾಥ್, ನೀಮ್, ಬಬೂಲ್, ಪ್ರಾಮಿಸ್
ಟೂತ್ ಬ್ರಷ್
ವಿದೇಶಿ ಕಂಪನಿಗಳ ಬ್ರಾಂಡ್ -ಕಾಲ್ಗೇಟ್, ಕ್ಲೋಸ್ ಅಪ್, ಪೆಪ್ಸೋಡೆಂಟ್, ಆಕ್ವಾ ಫ್ರೆಷ್, ಸಿಬಾಕಾ
ಭಾರತದ ಕಂಪನಿಗಳು- ಪ್ರಾಮಿಸ್, ಅಜಯ್, ಅಜಂತಾ, ರಾಯಲ್ ಕ್ಲಾಸಿಕ್
ಸ್ನಾನದ ಸೋಪ್
ವಿದೇಶಿ ಕಂಪನಿಗಳ ಬ್ರಾಂಡ್ - ಸರ್ಫ್, ರಿನ್, ಸನ್‌ಲೈಟ್, ವೀಲ್ ,ಏರಿಯಲ್, ಹಾಂಕೊ, ರಿವೀಲ್, ಆಮ್ವೆ ಕ್ವಾಂಟಮ್
ಭಾರತದ ಕಂಪನಿಗಳ ಬ್ರಾಂಡ್- ಟಾಟಾ ಶುದ್, ನೀಮ್ ಮೋದಿ, ಕೇರ್, ಸಹರಾ, ಸ್ವಸ್ತಿಕ್, ವಿಮಲ್, ಫೆನಾ
ಶೇವಿಂಗ್ ಕ್ರೀಮ್
ವಿದೇಶಿ ಬ್ರಾಂಡ್- ಓಲ್ಡ್ ಸ್ಪೈಸ್, ಪಾಮೋಲಿವ್, ಪಾಂಡ್ಸ್, ಜಿಲೆಟ್
ಸ್ವದೇಶಿ ಬ್ರಾಂಡ್- ಪಾರ್ಕ್ ಅವೆನ್ಯೂ, ಪ್ರೀಮಿಯಂ, ಎಮಾಮಿ, ಬಾಲ್‌ಸಾರಾ
ಶೇವಿಂಗ್ ಬ್ಲೇಡ್
ವಿದೇಶಿ ಬ್ರಾಂಡ್- ಜಿಲೆಟ್ 7 ಒ ಕ್ಲಾಕ್, ವಿಲ್ಮಾನ್, ವಿಲ್ಟೇಜ್
ಭಾರತದ ಕಂಪನಿ - ಟೋಪಾಜ್, ಸೂಪರ್ ಮ್ಯಾಕ್ಸ್, ಲೇಸರ್, ಸಿಲ್ವರ್ ಪ್ರಿನ್ಸ್
 
 ಮೇಲಿನ ವಸ್ತುಗಳನ್ನು ಪರಿಶೀಲಿಸಿದಾಗ ನಾವು ಸ್ವದೇಶಿ ಬ್ರಾಂಡ್‌ಗಳಿಗಿಂತ ವಿದೇಶಿ ಬ್ರಾಂಡ್‌ಗಳನ್ನೇ ಹೆಚ್ಚಾಗಿ ಬಳಸುವುದು ಕಂಡುಬರುತ್ತದೆ. ಭಾರತದ ಕಂಪನಿಗಳು ಈ ಗುಣಮಟ್ಟದ ಬ್ರಾಂಡ್‌ಗಳ ತಯಾರಿಕೆಯಲ್ಲಿ ಹಿಂದುಳಿದಿರುವುದು ಏಕೆ ಎನ್ನುವುದೇ ಪ್ರಶ್ನೆಯಾಗಿದೆ. ಜನರು ಸಹಜವಾಗಿ ಉತ್ತಮ ಬ್ರಾಂಡ್‌ಗಳಿಗೆ ಆಕರ್ಷಿತರಾಗುತ್ತಾರೆ. ಆದರೆ ಭಾರತದ ಕಂಪನಿಗಳಿಗೆ ವಿದೇಶಿ ಕಂಪನಿಗಳ ಜೊತೆ ಪೈಪೋಟಿ ನೀಡಲು ಯಾಕೆ ಸಾಧ್ಯವಾಗುತ್ತಿಲ್ಲ. ಭಾರತದ ಕಂಪನಿಗಳ ಉತ್ಪನ್ನಗಳು ಹೆಚ್ಚೆಚ್ಚು ಜನರಿಂದ ಬಳಕೆಯಾದರೆ ನಮ್ಮ ದೇಶದ ಅರ್ಥವ್ಯವಸ್ಥೆಯೂ ಸುಧಾರಣೆಯಾಗುತ್ತದೆ. ಭಾರತದ ಕಂಪನಿಗಳು ತಾವು ತಯಾರಿಸುವ ವಸ್ತುಗಳ ಗುಣಮಟ್ಟ ಏರಿಕೆಗೆ ಯಾಕೆ ಪ್ರಯತ್ನಿಸುತ್ತಿಲ್ಲ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. 

Share this Story:

Follow Webdunia kannada