Select Your Language

Notifications

webdunia
webdunia
webdunia
webdunia

ಮದುವೆ ಊಟದ ಮೆನುವಿನಲ್ಲಿ ಮಾಂಸಾಹಾರ ಇಲ್ಲವೆಂದು ಮದುವೆ ನಿರಾಕರಿಸಿದ ವರ..!

ಮದುವೆ ಊಟದ ಮೆನುವಿನಲ್ಲಿ ಮಾಂಸಾಹಾರ ಇಲ್ಲವೆಂದು ಮದುವೆ ನಿರಾಕರಿಸಿದ ವರ..!
ಲಖನೌ , ಶುಕ್ರವಾರ, 28 ಏಪ್ರಿಲ್ 2017 (14:40 IST)
ಮದುವೆಯ ಊಟದ ಮೆನುವಿನಲ್ಲಿ ಮಾಂಸಾಹಾರ ಇಲ್ಲವೆಂಬ ಕಾರಣಕ್ಕೆ ಜಗಳ ತೆಗೆದ ವರ ಮದುವೆ ನಿರಾಕರಿಸಿ ಹೊರಟು ಹೋದ ಘಟನೆ ಉತ್ತರ ಪ್ರದೇಶದ ಕುಲ್ಹೇದಿ ಹಳ್ಳಿಯಲ್ಲಿ ನಡೆದಿದೆ.

 ಮದುವೆ ಊಟದಲ್ಲಿ ಕೇವಲ ಸಸ್ಯಾಹಾರಿ ಊಟ ಬಡಿಸಿದ್ದನ್ನ ಗಮನಿಸಿದ ವರ ಜಗಲಳ ತೆಗದು ಮದುವೆ ನಿರಾಕರಿಸಿದ್ದಾನೆ. ಹಲವು ಕಸಾಯಿಖಾನೆಗಳು ಬಂದ್ ಆಗಿರುವುದರಿಂದ ಮಾಂಸದ ಕೊರತೆಯಿಂದ ಹೀಗಾಗಿದೆ ಎಂದು ವಧು ಕಡೆಯವರು ಗೋಗರೆದರೂ ವರ ಕೇಳಲಿಲ್ಲ. ಬಳಿಕ ಪಂಚಾಯ್ತಿ ನಡೆದು ರಾಜೀ ಸಂಧಾನಕ್ಕೆ ಮುಂದಾದಾಗ ಇಂತಹವನ ಜೊತೆ ನಾನು ವಿವಾಹವಾಗುದಿಲ್ಲ ಎಂದು ವಧು ಹೇಳಿದ್ದಾಳೆ.

ಇಷ್ಟೆಲ್ಲ ಆದ ಬಳಿಕ ಮದುವೆಗೆ ಬಂದಿದ್ದ ಅತಿಥಿಯೊಬ್ಬ ಯುವತಿಯನ್ನ ವರಿಸಲು ಮುಂದೆ ಬಂದಿದ್ದಾನೆ. ವಧು ಒಪ್ಪಿಗೆ ಮೇರೆಗೆ ಹಿರಿಯ ಸಮ್ಮುಖದಲ್ಲಿ ವಿವಾಹ ನೆರವೇರಿದೆ.

ಅಕ್ರಮ ಕಸಾಯಿ ಖಾನೆಗಳಿಗೆ ಸಿಎಂ ಆದಿತ್ಯಾನಾಥ್ ನಿಷೇಧ ಹೇರಿದ ಬಳಿಕ ಮಾಸಂದ ಬೆಲೆ ಗಗನಕ್ಕೇರಿದೆ. ಕೆ.ಜಿ 150 ರೂ.ಗೆ ಮಾರಾಟ ಮಾಡಲಾಗುತ್ತಿದ್ದ ಬೀಫ್ ಅನ್ನ 400 ರೂಪಾಯಿಗೆ ಮಾರಲಾಗುತ್ತಿದೆಯಂತೆ. ಮಟನ್ ಬೆಲೆ 350 ರೂ.ನಿಂದ 600 ರೂ,ಗೆ ಏರಿಕೆಯಾಗಿದೆಯಂತೆ. ಚಿಕನ್ ಸಹ ಈ ಹಿಂದೆ ಬೆಲೆಗಿಂತ ಡಬಲ್ ಬೆಲೆಗೆ ಅಂದರೆ 260 ರೂಪಾಯಿಯಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ: ಬಿಜಪಿ ಕಚೇರಿಯ ಕಂಪ್ಯೂಟರ್ ಆಪರೇಟರ್ ವಜಾ