Select Your Language

Notifications

webdunia
webdunia
webdunia
webdunia

ಈ ಕತ್ತೆಗೆ ಎರಡು ನ್ಯಾನೋ ಕಾರ್ ಬೆಲೆ

ಈ ಕತ್ತೆಗೆ ಎರಡು ನ್ಯಾನೋ ಕಾರ್ ಬೆಲೆ
ಚಂದೀಗಢ , ಶನಿವಾರ, 28 ಮಾರ್ಚ್ 2015 (17:41 IST)
2012ರಲ್ಲಿ ಬಿಕಾನೇರ್‌ನಿಂದ ಖರೀದಿಸಿ  ಕರೆತರಲಾದ ಶೇರು ಎಂಬ ಹೆಸರಿನ ಕತ್ತೆ ಪಂಜಾಬ್ ನಿವಾಸಿಯಾದ ಮೊಹಿಂದರ್ ಸಿಂಗ್  ಅದೃಷ್ಟವನ್ನೇ ಬದಲಿಸಿದೆ. 
ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ ಈ ಕತ್ತೆ  54 ಅಡಿ ಉದ್ದವಿದ್ದು ಅದರ ಬೆಲೆ 2 ನ್ಯಾನೋ ಕಾರ್‍‌ಗಳ ಬೆಲೆ(3 ಲಕ್ಷ)ಗೆ ಸರಿದೂಗುತ್ತಿದೆಯಂತೆ. 
 
ಹರಿಯಾಣಾದ ಜಾಜ್ಜಿರ್‌ನ ಬೇರಿಯಲ್ಲಿ ನಡೆದ ಪ್ರಸಿದ್ಧ ಪ್ರಾಣಿಗಳ ಹಬ್ಬದಲ್ಲಿ ಶೇರುವನ್ನು ಸಹ ಪ್ರದರ್ಶಿಸಲಾಗಿತ್ತು. ಹಲವರು 3 ಲಕ್ಷ ಕೊಟ್ಟು ಆತನನ್ನು ಖರೀಸಲು ಬಯಸಿದ್ದರು. ಆದರೆ ಶೇರು ಬೆಲೆಕಟ್ಟಲಾಗದ ಸಂಪತ್ತು ಎಂದ ಮಾಲೀಕ ಆತನನ್ನು ಮಾರಾಟ ಮಾಡಲು ಒಪ್ಪಲಿಲ್ಲ. 
 
ಕುದುರೆಗಳೊಂದಿಗೆ ಮಿಶ್ರತಳಿ ಸೃಷ್ಟಿಸಿ ಉತ್ತಮ ಗುಣಮಟ್ಟದ ಹೇಸರಗತ್ತೆಗಳನ್ನು ಉತ್ಪಾದಿಸಲು ಮಾತ್ರ ಶೇರುವನ್ನು ಆತನ ಮಾಲೀಕ ಬಳಸುತ್ತಿದ್ದಾನಂತೆ. ಒಂದು ಬಾರಿ ಸಂಯೋಗ ನಡೆಯಿಸಲು  5000 ಪಡೆದುಕೊಳ್ಳುವ ಸಿಂಗ್, ಸೀಸನ್ ಸಮಯದಲ್ಲಿ  2 ರಿಂದ 2.5 ಲಕ್ಷ  ರೂಪಾಯಿ ಗಳಿಸುತ್ತಾನೆ ಎಂದು ವರದಿಯಾಗಿದೆ. 
 
ಶೇರುವಿನ ಆಹಾರಕ್ಕೆ ಪ್ರತಿನಿತ್ಯ 400 ರೂಪಾಯಿ ವ್ಯಯಿಸುವ ಸಿಂಗ್, ದಿನಂಪ್ರತಿ 5ಕೆಜಿ ಕಡಲೆ, 1 ಕೆಜಿ ಬೆಲ್ಲವನ್ನು ಆತನಿಗೆ ನೀಡುತ್ತಾನೆ.  ಅಲ್ಲದೇ ಆರು ತಿಂಗಳ ಸಮಯದಲ್ಲಿ ಈ ದೈತ್ಯ ಕತ್ತೆಗೆ ಆತ ಸುಮಾರು 10 ಕೆಜಿ ದೇಸಿ ತುಪ್ಪವನ್ನು ತಿನ್ನಿಸುತ್ತಾನೆ.  ಮೊಹಿಂದರ್ ಪಂಜಾಬ್-ಹರಿಯಾಣಾ ಗಡಿಯಲ್ಲಿ ವಾಸಿಸುತ್ತಾನೆ. ಆದರೆ ಶೇರುವಿನ ಕೀರ್ತಿ ಸಿರ್ಸಾ, ಫತೇಹಬಾದ್, ಜಿಂದ್, ಹಿಸಾರ್‌ನಲ್ಲೆಲ್ಲಾ ವ್ಯಾಪಿಸಿದೆ. 

Share this Story:

Follow Webdunia kannada