Select Your Language

Notifications

webdunia
webdunia
webdunia
webdunia

ನಿಮಗಿದು ಗೊತ್ತಾ? ಭಾರತದಲ್ಲಿದೆ ಜಗತ್ತಿನ ಎರಡನೆಯ ಮಹಾಗೋಡೆ

ನಿಮಗಿದು ಗೊತ್ತಾ? ಭಾರತದಲ್ಲಿದೆ ಜಗತ್ತಿನ ಎರಡನೆಯ ಮಹಾಗೋಡೆ
ಭೋಪಾಲ್ , ಬುಧವಾರ, 18 ಜನವರಿ 2017 (12:10 IST)
ನೀವೆಲ್ಲ ಚೀನಾದ ಮಹಾಗೋಡೆಯ ಬಗ್ಗೆ ಕೇಳಿರುತ್ತೀರಾ. 8851 ಅತಿ ಉದ್ದದ ಈ ವಿಶ್ವಪ್ರಸಿದ್ಧ ಗೋಡೆ ಜಗತ್ತಿನ ಅತಿ ಉದ್ದದ ಗೋಡೆ ಎನ್ನಿಸಿಕೊಂಡಿದೆ. ಮತ್ತೀಗ ಅತಿ ಉದ್ದನೆಯ ಎರಡನೆಯ ಮಹಾ ಗೋಡೆ ಪತ್ತೆಯಾಗಿದೆ. ಅದು ಕೂಡ ನಮ್ಮ ದೇಶದಲ್ಲಿ.

 
ಇಲ್ಲಿಯವರೆಗೆ ರಾಜಸ್ಥಾನದ ಮೇವಾಡ ಪ್ರದೇಶದ ರಾಜ್ಸಾಮಂದ್ ಜಿಲ್ಲೆಯಲ್ಲಿರುವ ಕುಂಭಗಳನ್ನು ಸಾಲು ಸಾಲಾಗಿ ಹೊತ್ತು ನಿಂತ ಕುಂಭಲ್ಗಡ್ ಕೋಟೆ ಎರಡನೆಯ ಅತಿ ಉದ್ದದ ಗೋಡೆ ಎನ್ನಲಾಗುತ್ತಿತ್ತು. ಇದರ ಒಟ್ಟು ಉದ್ದ 38 ಕಿ.ಮೀ ಗೂ ಅಧಿಕವಾಗಿದೆ. ಆದರೆ ಇತ್ತೀಚಿಗೆ ಮಧ್ಯಪ್ರದೇಶದಲ್ಲಿ ಅತಿ ಉದ್ದದ ಗೋಡೆ ಪತ್ತೆಯಾಗಿದ್ದು ವಿಶ್ವದ ಎರಡೆಯ ಅತಿ ದೊಡ್ಡ ಗೋಡೆ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. 
 
ಮಧ್ಯಪ್ರದೇಶದ ಹೃದಯ ಭಾಗದಲ್ಲಿದ್ದು ರಾಯಸೇನಾ ಜಿಲ್ಲೆಯ ಗೋರಖ್ಪುರ ಗ್ರಾಮದ ದಟ್ಟಾರಣ್ಯದಿಂದ ಆರಂಭವಾಗಿ ಭೋಪಾಲದಿಂದ 100 ಕಿಮೀ ದೂರದಲ್ಲಿರುವ ಬಡಿ ಬರೇಲಿವರೆಗೆ ಚಾಚಿಕೊಂಡಿದೆ. ಇದರ ಒಟ್ಟು ಉದ್ದ 80ಕೀಲೋಮೀಟರ್‌ಗಿಂತ ಹೆಚ್ಚು.ಇದು ಭಾರತದ ಮಹಾಗೋಡೆ ಎಂದು ಸಂಶೋಧಕರು ಬಣ್ಣಿಸಿದ್ದಾರೆ.
 
1980ರ ದಶಕದಿಂದಲೇ ಸಂಶೋಧಕರೊಬ್ಬರಿಗೆ ಈ ಗೋಡೆ ಕುರಿತು ಮಾಹಿತಿ ಇತ್ತು. ಆದರೆ ಇತ್ತೀಚಿಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿವೆ. 1000 ವರ್ಷಗಳಷ್ಟು ಹಳೆಯದಾದ ಮಹಾಗೋಡೆಯ ಅವಶೇಷಗಳು ಸಿಕ್ಕಿವೆ. ಕೆಲವೆಡೆ ಗೋಡೆ 15 ಅಡಿ ನೆಲದಡಿ ಹೂಳಲ್ಪಟ್ಟಿದೆ. ಪುರಾತತ್ವ ಶಾಸ್ತ್ರಜ್ಞರ ಪ್ರಕಾರ ಇದು ಭಾರತದ ಅತಿ ಪುರಾತನ ಮತ್ತು ಉದ್ದದ ಮಹಾಗೋಡೆಯಾಗಿದ್ದು, ಇದನ್ನು 10 ಅಥವಾ 11ನೇ ಶತಮಾನದಲ್ಲಿ ನಿರ್ವಿುಸಿದ್ದಿರಬೇಕೆಂದು ಅಂದಾಜಿಸಿಲಾಗಿದೆ. ಇದರ ಎತ್ತರ 15ರಿಂದ 18 ಅಡಿ ಮತ್ತು ಅಗಲ 10 ರಿಂದ 15 ಅಡಿಗಳಷ್ಟಿದೆ.
 
ಗೋಡೆಯ ಬಳಿ ಹಾಳುಮನೆಯ ಅವಶೇಷಗಳು,ತುಂಡಾದ ಮೂರ್ತಿಗಳು, ಬಾವಿ ಮೆಟ್ಟಿಲುಗಳು ಹಾವಿನ ಲಾಂಛನಗಳುಳ್ಳ ನಾಗಕಲ್ಲುಗಳು ಪತ್ತೆಯಾಗಿವೆ. ಡ್ಯಾಮ್, ಗೋಧಿ ಹೊಲ, ಅರಣ್ಯ ಪ್ರದೇಶವನ್ನು ಹಾದು ಹೋಗಿರುವ ಈ ಗೋಡೆಯ ಕುರಿತಾದ
ಯಾವುದೇ ಮುದ್ರೆ ಶಾಸನ ಪತ್ತೆಯಾಗಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಿಗೇಡ್ ಸಭೆ ನಡೆಸುವ ಮೂಲಕ ಯಡ್ಡಿಗೆ ಸೆಡ್ಡು ಹೊಡೆದ ಈಶು!