Select Your Language

Notifications

webdunia
webdunia
webdunia
webdunia

ಗಿಡ ಮರಗಳು ಮತ್ತು ವಾಸ್ತು ಶಾಸ್ತ್ರ

ಗಿಡ ಮರಗಳು ಮತ್ತು ವಾಸ್ತು ಶಾಸ್ತ್ರ
ಚೆನ್ನೈ , ಶನಿವಾರ, 22 ನವೆಂಬರ್ 2014 (15:20 IST)
1. ಗಿಡ ಮರಗಳನ್ನು ನೆಡುವಾಗ ಅವುಗಳು ಮನೆಯ ಅತೀ ಸಮೀಪದಲ್ಲಿರದಂತೆ ಜಾಗ್ರತೆ ವಹಿಸಿ, ಮುಳ್ಳಿನ ಗಿಡಗಳನ್ನು ಆದಷ್ಟು ದೂರವಿರಿಸಿ.
2. ಪೂರ್ವ ಭಾಗದಲ್ಲಿ ಫಲ ಕೊಡುವ ವೃಕ್ಷಗಳನ್ನು ನೆಡುವುದು ಉತ್ತಮವಲ್ಲ, ಅಲ್ಲಿ ವಟ ಅಥವಾ ಅಶ್ವತ್ಥ ಮರವನ್ನು ನೆಡುವುದು ಶುಭದಾಯಕವೆಂದೆನಿಸುವುದು.
2. ಪಶ್ಚಿಮ ಭಾಗದಲ್ಲಿ ಬಾಳೆ, ಮಾವು ಮೊದಲಾದವುಗಳನ್ನು ನೆಡುವುದು ಅಶುಭಕರ, 
3.ದಕ್ಷಿಣ ಭಾಗದಲ್ಲಿ ನಿಂಬೆಯಂತಹ ಗಿಡಗಳನ್ನು ನೆಡುವುದು ಬೇಡ, ಈ ಭಾಗದಲ್ಲಿ ಅತ್ತಿ ಮರವನ್ನು ಬೆಳೆಸಿದರೆ ಅದೃಷ್ಟವೆಂದೆನಿಸುವುದು.
4.ಉತ್ತರ ಭಾಗದಲ್ಲಿ ಎಂದೂ ಹಚ್ಚ ಹಸುರಾಗಿರುವ ಗಿಡಗಳನ್ನು ನೆಡಿರಿ, ಈ ಭಾಗದಲ್ಲಿ ಬಾಳೆ, ಅತ್ತಿ ಮೊದಲಾದ ಗಿಡಗಳನ್ನು ವರ್ಜಿಸಿ.
5.ಆಗ್ನೇಯ ದಿಕ್ಕಿನಲ್ಲಿ ದಾಳಿಂಬೆ ಗಿಡ ನೆಡುವುದು ಶುಭ ಮತ್ತು ಹಾಲು ಕೊಡುವ, ಮುಳ್ಳಿನ ಗಿಡಗಳು ಅಶುಭವಾಗಿರುತ್ತವೆ.
6. ನೈಋತ್ಯ ದಿಕ್ಕಿನಲ್ಲಿ  ಹುಣಸೆ ಮರವನ್ನು ನೆಡುವುದು ಶುಭಕರ.
7.ವಾಯುವ್ಯ ದಿಕ್ಕಿನಲ್ಲಿ ಮರಗಳನ್ನು ಮತ್ತು ಮುಳ್ಳಿನ ಗಿಡಗಳನ್ನು ನೆಡುವುದು ಅಶುಭಕರ.
8.ಈಶಾನ್ಯ ದಿಕ್ಕಿನಲ್ಲಿ ನೆಲ್ಲಿಕಾಯಿಯ ಮರವು ಶುಭ ಹಾಗೂ ಬಾಳೆಗಿಡವು ಅಶುಭಕರವಾಗಿರುತ್ತದೆ.
9.ಮನೆಗೆ ತಾಗಿಕೊಂಡು ಇರುವ ಬಳ್ಳಿಗಳನ್ನು ಹರಡುವ ಗಿಡಗಳನ್ನು ಎಂದೂ ನೆಡಬೇಡಿ ಇವುಗಳು ಉರಗ ಅಥವಾ ಇನ್ನಿತರ ಕೀಟಗಳ ವಾಸಸ್ಥಾನವಾಗಿ ಬದಲಾದರೆ ಮನೆಗೆ ಅಪಾಯ.
10.ಹಳದಿ ಬಣ್ಣದ ಹೂಗಳನ್ನು ಬಿಡದ ಹರಿದಾಡುವ ಗಿಡಗಳು ಶುಭದಾಯಕವಾಗಿರುತ್ತವೆ.

Share this Story:

Follow Webdunia kannada