Select Your Language

Notifications

webdunia
webdunia
webdunia
webdunia

ಅನ್ನದಾತನಿಗೆ ಆಸರೆಯಾಗಿದ್ದ ಸಚಿವ ಮಹದೇವಪ್ರಸಾದ್

ಅನ್ನದಾತನಿಗೆ ಆಸರೆಯಾಗಿದ್ದ ಸಚಿವ ಮಹದೇವಪ್ರಸಾದ್
Bangalore , ಬುಧವಾರ, 4 ಜನವರಿ 2017 (14:40 IST)
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಹಾಲಹಳ್ಳಿಯವರಾದ ಹೆಚ್. ಮಹದೇವಪ್ರಸಾದ್ ಅವರು ರಾಜ್ಯಶಾಸ್ತ್ರ ಪದವೀಧರರು. ವೃತ್ತಿಯಿಂದ ಕೃಷಿಕರಾಗಿದ್ದರು. ರಾಜಕೀಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದರು.
 
ಐದು ಬಾರಿ ಶಾಸಕರಾಗಿ ಆಯ್ಕೆ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರವನ್ನು 1994 ರಿಂದ 2013 ರವರೆಗೆ ಸತತ 5 ಬಾರಿ ಪ್ರತಿನಿಧಿಸಿ ವಿಜಯ ಪತಾಕೆಯನ್ನು ತನ್ನಲ್ಲೇ ಇರಿಸಿಕೊಂಡ ಹೆಗ್ಗಳಿಕೆ ಸಚಿವ ಮಹದೇವಪ್ರಸಾದ್ ಅವರದ್ದು. ಇದಕ್ಕೂ ಮುನ್ನ 1985 ಹಾಗೂ 1989 ರ ವಿಧಾನಸಭಾ ಚುನಾವಣೆಯಲ್ಲೂ ಗುಂಡ್ಲುಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2004 ರಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದರು. 2007 ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಸೇವೆ ಸಲ್ಲಿಸಿದರು.
 
ಶೂನ್ಯ ಬಡ್ಡಿದರದಲ್ಲಿ ಸಾಲ: ಪ್ರಸ್ತುತ ಸಿದ್ದರಾಮಯ್ಯ ನೇತೃತ್ವ ಸರ್ಕಾರದಲ್ಲಿ ಸಹಕಾರ ಮತ್ತು ಸಕ್ಕರೆ ಸಚಿವರಾಗಿ ನೇಮಕಗೊಂಡ ಮಹದೇವ ಪ್ರಸಾದ್ ಅವರು ಸಹಕಾರ ಕ್ಷೇತ್ರವನ್ನು ಬಲಪಡಿಸಲು ಹಾಗೂ ಕಬ್ಬು ಬೆಳೆಗಾರರಿಗೆ ಉತ್ತಮ ಬೆಲೆ ದೊರಕಿಸಲು ಸತತವಾಗಿ ಶ್ರಮಿಸಿದರು. ರೈತರ ಬೆನ್ನೆಲುಬಿನಂತಿರುವ ಸಹಕಾರ ಕ್ಷೇತ್ರದಲ್ಲಿ ಮಹತ್ವದ ಉಪಕ್ರಮಗಳ ಮೂಲಕ ಅನ್ನದಾತನ ಸಂಕಷ್ಟಕ್ಕೆ ಸ್ಪಂದಿಸಿದರು. ಇವರ ಅವಧಿಯಲ್ಲಿ,ಇಡೀ ದೇಶದಲ್ಲೇ ಮೊದಲ ಬಾರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ.ಗಳವರೆಗಿನ ಕೃಷಿ ಸಾಲವನ್ನು ನೀಡಲಾಯಿತು. 2015-16ನೇ ಸಾಲಿನಲ್ಲಿ 10 ಸಾವಿರ ಕೋಟಿ ರೂ.ಗಳ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ಸುಮಾರು 23 ಲಕ್ಷ ರೈತರಿಗೆ ನೀಡುವ ಗುರಿ ಮೀರಿದ ಸಾಧನೆಯನ್ನು ಸಹಕಾರ ಇಲಾಖೆ ಮಾಡಿದೆ. ಇದು ರೈತರ ಅಭ್ಯುದಯದ ಕುರಿತ ಅವರ ಬದ್ಧತೆಗೆ ಸಾಕ್ಷಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷಾಚರಣೆಯಂದು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ