ಮಂಡ್ಯ : ನೂತನ ಸಚಿವ ಕೆ.ಸಿ. ನಾರಾಯಣಗೌಡ ಸಚಿವ ಸ್ಥಾನ ನೀಡಿದ ಬೆನ್ನಲ್ಲೇ ಜಿಲ್ಲೆಗೆ ಆಗಮಿಸಿ ಅಧಿಕಾರಿಗಳ ಸಭೆ ನಡೆಸಿದರು. ಮಂಡ್ಯದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ
ಸಭೆ ನಡೆಸಿ ಕೊರೊನಾ ಮೂರನೇ ಅಲೆ ಅಗತ್ಯತೆ ಬಗ್ಗೆ ಚರ್ಚಿಸಿದರು.
ಮುಂದಿನ ದಿನಗಳಲ್ಲಿ ನಡೆಯುವ ಮದುವೆಗೆ 30 ಜನರ ಮೇಲೆ ಸೇರಬಾರದು, ಮದುವೆಗಳಿಗೆ ಪೊಲೀಸ್ ಹಾಗೂ ತಹಶಿಲ್ದಾರ್ ಅನುಮತಿ ಕಡ್ಡಾಯವಾಗಿ ಪಡೆಯಲೇಬೇಕು ಅಲ್ಲದೆ, ನಾಲ್ಕು ತಾಲೂಕಿನಲ್ಲಿ ಆ್ಯಕ್ಸಿಜನ್ ಪ್ಲಾಂಟ್ ಸಿದ್ಧವಾಗಿದ್ದು, ಮೂರು ತಾಲೂಕಿನಲ್ಲಿ ಶೀಘ್ರವೇ ಆ್ಯಕ್ಸಿಜನ್ ಪ್ಲಾಂಟ್ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ ಅವರು, ನಮ್ಮ ಜಿಲ್ಲೆಯಲ್ಲಿ ಯಾವುದೇ ಆ್ಯಕ್ಸಿಜನ್ ಕೊರತೆ ಇಲ್ಲ. ಮೂರನೇ ಅಲೆ ಬಗ್ಗೆ ಪ್ರತಿವಾರ ಸಿಎಂ ಗಮನಕ್ಕೆ ತರಲಾಗುವುದು ಎಂದ ಕೆಸಿಎನ್ ತಿಳಿಸಿದರು.