Select Your Language

Notifications

webdunia
webdunia
webdunia
webdunia

ಕ್ಲಾಸ್ ರೂಂನಲ್ಲಿ ವಿದ್ಯಾರ್ಥಿಗಳೆದುರೇ ಪ್ರಿಯತಮೆಯನ್ನು ಸುಟ್ಟು ತಾನೂ ಬೆಂಕಿ ಹಚ್ಚಿಕೊಂಡ ಪ್ರೇಮಿ

ಕ್ಲಾಸ್ ರೂಂನಲ್ಲಿ ವಿದ್ಯಾರ್ಥಿಗಳೆದುರೇ ಪ್ರಿಯತಮೆಯನ್ನು ಸುಟ್ಟು ತಾನೂ ಬೆಂಕಿ ಹಚ್ಚಿಕೊಂಡ ಪ್ರೇಮಿ
Kottayam , ಗುರುವಾರ, 2 ಫೆಬ್ರವರಿ 2017 (14:18 IST)
ಕೊಟ್ಟಾಯಂ: ಪ್ರೇಮ ಎನ್ನುವುದು ಮನುಷ್ಯರನ್ನು ಯಾವ ಮಟ್ಟಕ್ಕೆ ಇಳಿಸುತ್ತದೆ ಎನ್ನುವುದಕ್ಕೆ ಇದು ಮತ್ತೊಂದು ಉದಾಹರಣೆ. ಪ್ರಿಯತಮೆಯನ್ನು ಆಕೆಯ ಕ್ಲಾಸ್ ರೂಂ ನಲ್ಲೇ ಜೀವಂತ ದಹನ ಮಾಡಿ ತಾನೂ ಬೆಂಕಿಗೆ ಆಹುತಿಯಾಗಿದ್ದಾನೆ.
 

ಕೇರಳದ ಕೊಟ್ಟಾಯಂನ ಎಸ್ಎಂಇ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಘಟನೆಯಿದು. 20 ವರ್ಷದ ಯುವತಿಯನ್ನು ಯುವಕ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಆಕೆ ಒಪ್ಪದ ಕಾರಣ ತರಗತಿಗೇ ಬಂದು ಇತರ ವಿದ್ಯಾರ್ಥಿಗಳ ಎದುರಲ್ಲೇ ಜೀವಂತ ಸುಟ್ಟಿದ್ದಾನೆ.

ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕಿ ಉಳಿಯಲಿಲ್ಲ. ಇದೇ ವೇಳೆ ಯುವತಿಯನ್ನು ರಕ್ಷಿಸಲು ಪ್ರಯತ್ನ ಪಟ್ಟ ಇಬ್ಬರು ವಿದ್ಯಾರ್ಥಿಗಳೂ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಯುವಕನೂ ಇದೇ ಕಾಲೇಜಿನ ಮಾಜಿ ವಿದ್ಯಾರ್ಥಿಯೆನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೂರನೆಯ ಮಹಾಯುದ್ಧಕ್ಕೆ ಮೋದಿ ತಯಾರಿ ಮಾಡಿಕೊಳ್ಳಲಿ: ಪೂಜಾರಿ ಸಲಹೆ