Select Your Language

Notifications

webdunia
webdunia
webdunia
webdunia

ಮ್ಯಾಕ್ ಡೊನಾಲ್ಡ್ ಬರ್ಗರ್‌ನಲ್ಲಿ ಜಿರಳೆ

ಮ್ಯಾಕ್ ಡೊನಾಲ್ಡ್ ಬರ್ಗರ್‌ನಲ್ಲಿ ಜಿರಳೆ
ನ್ಯೂಜಿಲೆಂಡ್ , ಮಂಗಳವಾರ, 21 ಏಪ್ರಿಲ್ 2015 (09:50 IST)
ನೀವು ಪಾಸ್ಟ್‌ಪುಡ್  ಅಂದರೆ ಬಾಯಿ ಚಪ್ಪರಿಸಿ ತಿನ್ನುತ್ತೀರಾ? ಈ ಕಾರಣಕ್ಕೆ ಪದೇ ಪದೇ ರೆಸ್ಟೋರೆಂಟ್‌ಗೆ ಹೋಗುತ್ತಿರುತ್ತೀರಾ? ಹೌದೆಂದಾದರೆ  ನಿಮಗೆ ಆಘಾತವನ್ನುಂಟು ಮಾಡುವ ಘಟನೆಯೊಂದು ನ್ಯೂಜಿಲ್ಯಾಂಡ್‍ನಲ್ಲಿ ನಡೆದಿದೆ. 

ಬರ್ಗರ್ ಪ್ರಿಯರಿಗೆ ಕೇಳಲು ಅಸಹ್ಯವಾಗುವ ಸಂಗತಿಯಿದು. ಪಾಸ್ಟ್‌ಪುಡ್ ತಿಂಡಿಗೆ ಖ್ಯಾತವಾಗಿರುವ ಮ್ಯಾಕ್ ಡೊನಾಲ್ಡ್ ರೆಸ್ಟೋರೆಂಟ್ ಒಂದಕ್ಕೆ ಬಂದಿದ್ದ ಅನ್ನಾ ಸೋಫಿಯಾ ಎಂಬ ಮಹಿಳೆಯೊಬ್ಬರು ಬರ್ಗರ್‌ನ್ನು ಆರ್ಡರ್ ಮಾಡಿದ್ದಾರೆ. ಪಾರ್ಸಲ್ ಕಟ್ಟಿಕೊಂಡು ಮನೆಗೆ ಬಂದು ತಿನ್ನುತ್ತಿದ್ದಾಗ ಏನೋ ಸಿಕ್ಕಿದಂತಾಗಿದೆ. ಅದನ್ನು ಹೊರಗೆ ತೆಗೆದು ನೋಡಿದಾಗ ತಾನು ಬಾಯಲ್ಲಿ ಹಾಕಿ ಕಚ್ಚಿದ್ದು ಜಿರಳೆ ಎಂದು ಆಕೆಗೆ ಗೊತ್ತಾಗಿದೆ. ಇದರಿಂದ ಸಿಟ್ಟಿಗೆದ್ದ ಮಹಿಳೆಯ ಮ್ಯಾಕ್ ಡೋನಾಲ್ಡ್ ವಿರುದ್ಧ ದೂರು ದಾಖಲಿಸಿದ್ದಾಳೆ. ಅರ್ಧ ಬರ್ಗರ್‌ನ್ನು ತನಿಖೆಗಾಗಿ ಆಕೆ ಮ್ಯಾಕ್ ಡೊನಾಲ್ಡ್‌ಗೆ ಹಿಂತಿರುಗಿಸಿದ್ದು, ಆರೋಗ್ಯ ಅಧಿಕಾರಿಗಳು ರೆಸ್ಟೋರೆಂಟ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. 
 
ಜಿರಳೆಯ ಸಹಿತ ಬರ್ಗರ್ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಆಕೆ ಅಪ್ಲೋಡ್ ಮಾಡಿದ್ದು ಅದು ವೈರಲ್ ಆಗಿ ಹರಿದಾಡಿದ್ದು ಮ್ಯಾಕ್ ಡೊನಾಲ್ಡ್ ರೆಸ್ಟೋರೆಂಟ್ ವಿರುದ್ಧ ಕಟು ಟೀಕೆ ವ್ಯಕ್ತವಾಗಿದೆ. 

Share this Story:

Follow Webdunia kannada