Select Your Language

Notifications

webdunia
webdunia
webdunia
webdunia

ನೆರೆಮನೆಯವರ ಜತೆ ಗಲಾಟೆ ಮಾಡಲು ಹೋಗಿ ಮಗಳ ಸಾವಿಗೆ ಕಾರಣವಾದ ಅಪ್ಪ

ನೆರೆಮನೆಯವರ ಜತೆ ಗಲಾಟೆ ಮಾಡಲು ಹೋಗಿ ಮಗಳ ಸಾವಿಗೆ ಕಾರಣವಾದ ಅಪ್ಪ
Mumbai , ಬುಧವಾರ, 1 ಮಾರ್ಚ್ 2017 (14:02 IST)
ಮುಂಬೈ: ಇದು ನಿಜಕ್ಕೂ ಹೃದಯ ವಿದ್ರಾವಕ ಘಟನೆ. ಮಗಳೊಂದಿಗೆ ನೆರೆ ಮನೆಯವರು ಜಗಳವಾಡುತ್ತಿದ್ದುದನ್ನು ನೋಡಿ ಸುಮ್ಮನಿರಲಾದೆ ಪ್ರಶ್ನಿಸಲು ತಂದೆ ಅಕಸ್ಮಾತ್ತಾಗಿ ಮಗಳ ಸಾವಿಗೆ ಕಾರಣವಾದ ಘಟನೆ ಗೊರೆಗಾಂವ್ ನಗರದ ಮೋತಿಲಾಲ್ ಸ್ಲಮ್ ಏರಿಯಾದಲ್ಲಿ ನಡೆದಿದೆ.


ಮೇಘನಾ ಎಂಬ 17 ವರ್ಷ ಯುವತಿಯೊಂದಿಗೆ ಬಟ್ಟೆ ತೊಳೆಯುವ ವಿಚಾರದಲ್ಲಿ ನೆರೆ ಮನೆಯ ಮಹಿಳೆಯರು ಆಕ್ಷೇಪಿಸಿದ್ದರು. ಇದನ್ನು ಪ್ರಶ್ನಿಸಲು ಹೋದ ಮೇಘನಾ ಸಹೋದರಿಯೊಂದಿಗೆ ಜಗಳ ತಾರಕಕ್ಕೇರಿತ್ತು. ಈ ಸಂದರ್ಭದಲ್ಲಿ ತನ್ನ ಮಕ್ಕಳ ರಕ್ಷಣೆಗೆ ತರಕಾರಿ ಕತ್ತರಿಸುತ್ತಿದ್ದ ತಂದೆ ರಾಜೇಶ್ ಚಾಕು ಸಮೇತ ಸ್ಥಳಕ್ಕೆ ಧಾವಿಸಿದ್ದರು.

ಈ ಸಂದರ್ಭದಲ್ಲಿ ನಡೆದ ತಳ್ಳಾಟದಲ್ಲಿ ಚಾಕು ಹಿಡಿದಿದ್ದ ತಂದೆ ರಾಜೇಶ್ ಅಕಸ್ಮಾತ್ತಾಗಿ ಮಗಳ ಮೇಲೆ ಆಯತಪ್ಪಿ ಬಿದ್ದಿದ್ದರು. ಈ ಸಂದರ್ಭದಲ್ಲಿ ಚಾಕು ಮೇಘನಾ ಎದೆ ಸೀಳಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪ್ರಯೋಜನವಾಗಲಿಲ್ಲ. ಇದೀಗ ಪೊಲೀಸರು ನೆರೆಮನೆಯ ಮಹಿಳೆಯರ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಲೀನ್‌ಚಿಟ್: ದೇಶವಿರೋಧಿ ಘೋಷಣೆ ಕೂಗಿಲ್ಲ ಕನ್ಹೈಯ್ಯ ಕುಮಾರ್