ದೈನಂದಿನ ಲಸಿಕೆ ನೀಡಿಕೆಯಲ್ಲಿ ಕುಸಿತ!

Webdunia
ಮಂಗಳವಾರ, 13 ಜುಲೈ 2021 (12:22 IST)
ನವದೆಹಲಿ(ಜು.13): ದೇಶಾದ್ಯಂತ ಶೀಘ್ರ ಕೊರೋನಾ ವೈರಸ್ನ 3ನೇ ಅಲೆ ಆರಂಭವಾಗಲಿದೆ ಎಂಬ ಭೀತಿ ನಡುವೆಯೇ, ಜೂ.21ರಂದು ತೀವ್ರಗೊಂಡಿದ್ದ ಲಸಿಕೆ ನೀಡಿಕೆ ಪ್ರಕ್ರಿಯೆ ಈಗ ಕುಸಿತ ಕಾಣುತ್ತಿದೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.

* ದೇಶಾದ್ಯಂತ ಶೀಘ್ರ ಕೊರೋನಾ ವೈರಸ್ನ 3ನೇ ಅಲೆ ಆರಂಭ
* ದೈನಂದಿನ ಲಸಿಕೆ ನೀಡಿಕೆಯಲ್ಲಿ ಕುಸಿತ
* ದೈನಂದಿನ 61 ಲಕ್ಷ ಡೋಸ್ ಪ್ರಮಾಣ 41 ಲಕ್ಷಕ್ಕೆ ಇಳಿಕೆ

ಕೋವಿನ್ ವೇದಿಕೆಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಜೂ.21-27ರವರೆಗಿನ ವಾರದಲ್ಲಿ ನಿತ್ಯ ಸರಾಸರಿ 61.14 ಲಕ್ಷ ಡೋಸ್ಗಳನ್ನು ನೀಡಲಾಗಿತ್ತು. ಆದರೆ ಜೂ.28ರಿಂದ ಜು.4ಕ್ಕೆ ಅಂತ್ಯವಾದ ವಾರದಲ್ಲಿ ನಿತ್ಯ 41.92 ಲಕ್ಷ ಡೋಸ್ಗಳನ್ನಷ್ಟೇ ನೀಡಲಾಗಿದೆ. ಅಲ್ಲದೆ ಜು.5ರಿಂದ ಜು.11ರವರೆಗೆ ಸರಾಸರಿ 34.32 ಲಕ್ಷ ಡೋಸ್ಗಳನ್ನಷ್ಟೇ ನೀಡಲಾಗಿದೆ ಎಂದು ಸರ್ಕಾರದ ದಾಖಲೆಗಳಿಂದ ಗೊತ್ತಾಗಿದೆ. ಕರ್ನಾಟಕ, ಆಂಧ್ರಪ್ರದೇಶ, ಹರಾರಯಣ, ಗುಜರಾತ್ ಮತ್ತು ಛತ್ತೀಸ್ಗಢದಲ್ಲಿ ಲಸಿಕೆ ನೀಡಿಕೆಯ ಪ್ರಮಾಣ ಕುಸಿದಿದೆ.
ಈ ಬಗ್ಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಕೇಂದ್ರ ಆರೋಗ್ಯ ಇಲಾಖೆ, ‘ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆ ಮಾಡಬಹುದಾದ 1.54 ಕೋಟಿಯಷ್ಟುಲಸಿಕೆ ಡೋಸ್ಗಳು ಬಾಕಿ ಉಳಿದುಕೊಂಡಿವೆ’ ಎಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಪಘಾತದಲ್ಲಿ ಸಾವನ್ನಪ್ಪಿದ್ದ ಐಎಎಸ್ ಅಧಿಕಾರಿ ಮಹಂತೇಶ ಬೀಳಗಿ ಪುತ್ರಿ ಬಗ್ಗೆ ಸರ್ಕಾರದ ಮಹತ್ವದ ತೀರ್ಮಾನ

ಡಿಕೆ ಶಿವಕುಮಾರ್ ಸಿಎಂ ಹುದ್ದೆ ನಿರ್ಧಾರವಾಗಬೇಕಾದ್ರೆ ಇವರೊಬ್ಬರು ಬರಬೇಕು

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಜನಾರ್ಧನ ರೆಡ್ಡಿ ಮನೆ ಬಳಿ ಶೂಟೌಟ್: ಸತೀಶ್ ರೆಡ್ಡಿ ಗನ್ ಮ್ಯಾನ್ ಗಳು ನಾಪತ್ತೆ

ಮುಂದಿನ ಸುದ್ದಿ
Show comments